ಕಾಂಗ್ರೆಸ್ ಬಲಪಡಿಸಲು ಬಿಜೆಪಿ ತೊರೆದು 'ಕೈ' ಸೇರ್ಪಡೆ..!
ಜನತೆಯ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಸವರುವ ಕೆಲಸ ನಡೆದಿರುವ ಕ್ಷೇತ್ರದ ಜನರಿಗೆ ತಿಳಿದಿದೆ.
ಕಾಳಗಿ(ಡಿ.08): ಸಮೀಪದ ಸಾಲಹಳ್ಳಿ ಮತ್ತು ಚಿಂಚೋಳಿ ಮತಕ್ಷೇತ್ರದ ವಿವಿಧ ಗ್ರಾಮದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಮಲ್ಲಿಕಾರ್ಜುನ ಪಾಟೀಲ, ಸಿದ್ದು ಪೂಜಾರಿ, ಪ್ರಭು ಕಾಳಗಿ, ಸುಬ್ಬಣ್ಣಾ ಚೌರಿ, ಸಾಬಣ್ಣಾ ಕುಂಬಾರ, ಸುರೇಶ ಪವಾರ, ಗಂಗಾಧರ ಮಲಕೂಡ, ಗೋಪಾಲ ಪವಾರ, ಸುಧಾಕರ ಪಸ್ತಪೂರ, ಲೋಕೇಶ ಹುಡೇದ, ರಾಜು ಹಂದರ್ಕಿ ಇತರರು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧದ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿ, ಕ್ಷೇತ್ರದ ಜನರು ತುಂಬಾ ಕುಷಾಗೃತೆವುಳ್ಳವರಾಗಿದ್ದಾರೆ. ಕಾಳಗಿ-ಚಿಂಚೊಳಿ ಕ್ಷೇತ್ರದಲ್ಲಿ ಕಳೆಪೆ ಕಾಮಾಗಾರಿ ಎಗ್ಗಿಲ್ಲದೇ ಸಾಗುತ್ತಿದೆ. ಪ್ರಾರಂಭದಿಂದ ಹಿಡಿದು ಅಧಿಕಾರ ಮುಗಿಯುವ ಸಂದರ್ಭದಲ್ಲಿ ಅಭಿವೃದ್ಧಿ ಮಾಡುವುದೇ ನನ್ನ ಗುರಿಯಾಗಿದೆ ಎಂದು ಕ್ಷೇತ್ರದ ತುಂಬೆಲ್ಲ ಸಾರುತ್ತಿದ್ದಾರೆ. ಜನತೆಯ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಸವರುವ ಕೆಲಸ ನಡೆದಿರುವ ಕ್ಷೇತ್ರದ ಜನರಿಗೆ ತಿಳಿದಿದೆ ಎಂದು ಹೇಳಿದರು.
ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಬೇಕಾಗಿಲ್ಲ: ಸಿಎಂ ಇಬ್ರಾಹಿಂ
ಮಾಜಿ ಸಚಿವ ಶರಣಪ್ರಕಾರ ಪಾಟೀಲ, ವಿಧಾನ ಪರಿಷತ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಚಿಂಚೋಳಿ ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಮಾತನಾಡಿದರು. ಕಾಂಗ್ರಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಭೀಮರಾವ ತೆಗಲತಿಪ್ಪಿ, ಕಾಳಗಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ದೇವಿಂದಪ್ಪ ಹೆಬ್ಬಾಳ, ಮಹೇಮ್ಮುದ ಪಟೇಲ, ಉಸ್ಮಾನ ಪಟೇಲ ಕೋಡ್ಲಿ, ಯುತ ಕಾಂಗೆಸ್ ಅಧ್ಯಕ್ಷ ಶರಣು ಮಜ್ಜಿಗಿ, ಮಾಜಿ ತಾಪಂ ಸದಸ್ಯ ಪ್ರಶಾಂತ ರಾಜಾಪೂರ, ಪ್ರಭು ಭಾವಿ ಗೋಟುರ, ಮಲ್ಲು ಸಾಹುಕಾರ, ಸಂಜು ರಡ್ಡಿ, ಬಂಡು ಗದ್ದಿ, ಗಣಪತಿ ಹಾಳಕಾಯಿ, ಸೇರಿ ಇತತರು ಇದ್ದರು.