ಶಿಕಾರಿಪುರ ಕೊಳಗಿ ಗ್ರಾಮದ ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆದ ಬೈಕ್ ರ‍್ಯಾಲಿಯ ವೇಳೆ ಬುಲೆಟ್ ಬೈಕ್ ಏರಿ ರ‍್ಯಾಲಿಯಲ್ಲಿ ಬಿ.ವೈ. ರಾಘವೇಂದ್ರ  ಹಾಗೂ ಬಿ.ವೈ. ವಿಜಯೇಂದ್ರ ಪಾಲ್ಗೊಂಡಿದ್ದರು.

(ವರದಿ - ರಾಜೇಶ್ ಕಾಮತ್ ಏಷ್ಯಾನೆಟ್ ಸುವರ್ಣ ನ್ಯೂಸ್ ಶಿವಮೊಗ್ಗ)

ಮುಂಬರುವ ವಿಧಾನಸಭಾ ಚುನಾವಣೆಗೆ (Legislative Assembly) ಬಿಜೆಪಿ (BJP) ಈಗಿನಿಂದಲೇ ತಯಾರಿ ಆರಂಭಿಸಿದೆ. ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಪುತ್ರರಿಂದ ಬೈಕ್‌ ರ‍್ಯಾಲಿಯ (Bike Rally) ಕಮಾಲ್‌ ನಡೆದಿದೆ. ಬೈಕ್‌ ರ‍್ಯಾಲಿಯಲ್ಲಿ ಸಹೋದರರ ಕಮಾಲ್ ಮಾಡಿದ ಘಟನೆ ಶಿವಮೊಗ್ಗ (Shimoga) ಜಿಲ್ಲೆ ಶಿಕಾರಿಪುರ (Shikaripura) ತಾಲೂಕಿನಲ್ಲಿ ನಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿರುವ ಬಿ.ವೈ. ರಾಘವೇಂದ್ರ (B.Y. Raghavendra) ಹಾಗೂ ಬಿ.ವೈ. ವಿಜಯೇಂದ್ರ (B.Y. Vijayendra) ರವರು ಕಾರ್ಯಕರ್ತರು ಮತ್ತು ಅಭಿಮಾನಿಗಳ ಜೊತೆ ಬೆರೆತು ಈಗಿನಿಂದಲೇ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. 

ಶಿಕಾರಿಪುರ ಕೊಳಗಿ ಗ್ರಾಮದ ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆದ ಬೈಕ್ ರ‍್ಯಾಲಿಯ ವೇಳೆ ಬುಲೆಟ್ ಬೈಕ್ ಏರಿ ರ‍್ಯಾಲಿಯಲ್ಲಿ ಬಿ.ವೈ. ರಾಘವೇಂದ್ರ ಹಾಗೂ ಬಿ.ವೈ. ವಿಜಯೇಂದ್ರ ಪಾಲ್ಗೊಂಡಿದ್ದರು. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೈಕ್‌ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ಭಾಗಿಯಾದರು.

ಇದನ್ನು ಓದಿ: ಚಾ.ನಗರದಿಂದ ಬಿಎಸ್‌ವೈ, ಉ.ಕರ್ನಾಟಕದಲ್ಲಿ ಸಿಎಂ ಪ್ರವಾಸ

ಕೊಳಗಿ ಗ್ರಾಮದ ಹೊರ ವಲಯದಿಂದ ಗ್ರಾಮದ ಸಮುದಾಯ ಭವನದವರೆಗೆ ಸುಮಾರು 2 ಕಿಲೋಮೀಟರ್‌ನಷ್ಟು ದೂರದವರೆಗೆ ಸಹೋದರರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು. ಸಹೋದರರ ಜೊತೆಗೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉತ್ಸಾಹದಿಂದ ಜೈಕಾರ ಹಾಕುತ್ತಾ ಭಾಗಿಯಾದರು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷರಾದ ವೀರೇಂದ್ರ ಪಾಟೀಲ್, ಅರಣ್ಯ ನಿಗಮದ ರಾಜ್ಯ ಉಪಾಧ್ಯಕ್ಷ ರೇವಣಪ್ಪ ಕೊಳಗಿ ಹಾಗೂ ಹಲವು ಉತ್ಸಾಹಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಸಾಮಾಜಿಕ 'ಅನ್ಯಾಯ', ಅಲ್ಪಸಂಖ್ಯಾತರಿಗೆ ಮೋಸ: ಜನಸಂಕಲ್ಪ ಸಮಾವೇಶದಲ್ಲಿ ಸಿದ್ದುಗೆ ಸಿಎಂ ಗುದ್ದು!