ಪಾಟ್ನಾ, (ನ.10): ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣಾ ಮತ ಎಣಿಗೆ ಪ್ರಕಿಯೆ ಮುಂದುವರೆದಿದ್ದು, ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಆರಂಭಿಕ ಹಿನ್ನಡೆಯಾಗಿದೆ.

ಲಾಲ್ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ರ ಮಹಾ ಘಟ್ ಬಂಧನ್ ಆರಂಭಿಕ ಮುನ್ನಡೆ ಸಾಧಿಸಿದ್ದು, ತೇಜಸ್ವಿ ಯಾದವ್ ರ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ಮೈತ್ರಿಕೂಟ ಆರಂಭಿಕ ಮುನ್ನಡೆ ಸಾಧಿಸಿದೆ. 

Live Blog: ಬಿಹಾರದಲ್ಲಿ ತೇಜಸ್ವಿ ಆಗ್ತಾರಾ ಸಿಎಂ? ಕರ್ನಾಟಕದಲ್ಲಿ ಗೆಲ್ಲುತ್ತಾ ಬಿಜೆಪಿ? 

ಒಟ್ಟು 243 ಕ್ಷೇತ್ರಗಳ ಪೈಕಿ ಆರ್ ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾಘಟ್ ಬಂಧನ್ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ನಿತೀಶ್ ನೇತೃತ್ವದ ಎನ್ ಡಿಎ ಮೈತ್ರಿಕೂಟ 56 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.

ಮುಸ್ಲಿಂ, ಯಾದವರು ಹೆಚ್ಚಾಗಿರುವ ಪ್ರದೇಶಗಳಾಗಿರುವ ಕೋಸಿ, ಮಿಥಲಾಂಚಲ್ ಪ್ರಾಂತ್ಯಗಳಲ್ಲಿ ಮಹಾಘಟ್ ಬಂಧನ್  ಬಹಳ  ಮುನ್ನಡೆ ಸಾಧಿಸಿಕೊಂಡಿದೆ. 122 ಮ್ಯಾಜಿಕ್ ನಂಬರ್ ಇದ್ದು, ಬಹುತೇಕ ಆರ್ ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾಘಟ್ ಬಂಧನ್‌ಗೆ ಸಿಗುವ ಸಾಧ್ಯತೆಗಳು ಹೆಚ್ಚಿವೆ.

ಯಾರ ಪಾಲಿಗೆ ಬಿಹಾರ?: ನಿತೀಶ್ ಅಧಿಕಾರ ಉಳಿಯುತ್ತಾ? ತೇಜಸ್ವಿ ಆಸೆ ಈಡೇರುತ್ತಾ?

ಬಿಹಾರದಲ್ಲಿ ಸತತ ಮೂರು ಅವಧಿಗೆ ನಿತೀಶ್‌ ಕುಮಾರ್‌ ಅವರು ಮುಖ್ಯಮಂತ್ರಿಯಾಗಿದ್ದರು. ಅದರಲ್ಲಿ ಹೆಚ್ಚಿನ ಅವಧಿ ಅವರು ಎನ್‌ಡಿಎಯ ಭಾಗವಾಗಿಯೇ ಇದ್ದರು. ಈ ಬಾರಿ ಎನ್‌ಡಿಎಗೆ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ ಭಾರಿ ಪೈಪೋಟಿ ನೀಡಿದೆ. ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಮತಗಟ್ಟೆ ಸಮೀಕ್ಷೆಗಳಲ್ಲಿ ಹೆಚ್ಚಿನವು ಈಗಾಗಲೇ ಅಂದಾಜಿಸಿವೆ. ಹಾಗಾಗಿ, ಈ ಫಲಿತಾಂಶ ಕುತೂಹಲ ಮೂಡಿಸಿದೆ.