ಯಾರ ಪಾಲಿಗೆ ಬಿಹಾರ?: ನಿತೀಶ್ ಅಧಿಕಾರ ಉಳಿಯುತ್ತಾ? ತೇಜಸ್ವಿ ಆಸೆ ಈಡೇರುತ್ತಾ?

ಭಾರೀ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ| ಯಾರ ಪಾಲಿಗೆ ಬಿಹಾರ?: ಇಂದು ಮಧ್ಯಾಹ್ನ ಚಿತ್ರಣ| ಚುನಾವಣೆ ಫಲಿತಾಂಶ ಇಂದು ಪ್ರಕಟ| 

Nitish Kumar Or Tejaswi Yadav Bihar Election Counting To Begin At 8am pod

ಪಟನಾ(ನ.10): ಭಾರೀ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ. ಇದರ ಜೊತೆಗೆ ಬಿಹಾರದ 1 ಲೋಕಸಭಾ ಕ್ಷೇತ್ರ ಹಾಗೂ 11 ರಾಜ್ಯಗಳ 56 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶವೂ ಘೋಷಣೆಯಾಗಲಿದೆ.

ಬಿಹಾರದಲ್ಲಿ 38 ಜಿಲ್ಲೆಗಳಲ್ಲಿ 55 ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಮುಂಜಾನೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟಚಿತ್ರಣ ದೊರೆಯುವ ನಿರೀಕ್ಷೆ ಇದೆ.

ಟ್ರಂಪ್ ರೀತಿ ಬಿಹಾರದಲ್ಲಿ ಬಿಜೆಪಿ ನೆಲಕಚ್ಚಲಿದೆ: ಶಿವಸೇನಾ ಭವಿಷ್ಯ!

ಬಿಹಾರದಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆದು ಶೇ.56ರಷ್ಟುಮತದಾನ ಆಗಿತ್ತು. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಸೀಟುಗಳ ಅಗತ್ಯವಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಹಾಗೂ ತೇಜಸ್ವಿ ಯಾದವ್‌ ನೇತೃತ್ವದ ಆರ್‌ಜೆಡಿ- ಕಾಂಗ್ರೆಸ್‌ ಹಾಗೂ ಇತರ ಮೂರು ಪಕ್ಷಗಳನ್ನು ಒಳಗೊಂಡ ಮಹಾಗಠಬಂಧನ್‌ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಮಹಾಗಠಬಂಧನ್‌ ಬಹುಮತ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ.

ಮ.ಪ್ರ. ಸರ್ಕಾರದ ಭವಿಷ್ಯ ನಿರ್ಧಾರ:

ಮಧ್ಯ ಪ್ರದೇಶದ 28 ವಿಧಾನಸಭೆ ಸ್ಥಾನಗಳಿಗೆ ಉಪ ಚುನಾವಣೆ ಏರ್ಪಟ್ಟಿದ್ದು, ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಭವಿಷ್ಯವನ್ನು ಫಲಿತಾಂಶ ನಿರ್ಧರಿಸಲಿದೆ. ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ 25 ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಮಾಚ್‌ರ್‍ನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

‘ಚುನಾವಣಾ ರಣತಂತ್ರಗಾರ’ ಪ್ರಶಾಂತ್ ಕಿಶೋರ್ ಬಿಹಾರ ಚುನಾವಣೆಯಲ್ಲಿ ನಾಪತ್ತೆ!

ಇನ್ನು ಉತ್ತರ ಪ್ರದೇಶದ 7, ಗುಜರಾತಿನ 8, ಕರ್ನಾಟಕದ 2, ಒಡಿಶಾದ 2, ಜಾರ್ಖಂಡ್‌ನ 2, ನಾಗಾಲ್ಯಾಂಡ್‌ 2, ಮಣಿಪುರದ 2, ತೆಲಂಗಾಣ, ಹರ್ಯಾಣದ ತಲಾ ಒಂದು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶವೂ ಶನಿವಾರ ಪ್ರಕಟವಾಗಲಿದೆ.

Latest Videos
Follow Us:
Download App:
  • android
  • ios