ಲೋಕಸಭೆಯಲ್ಲಿರುವ ವಿಪಕ್ಷಗಳೆಲ್ಲ ಸೇರಿ ರಚಿಸಿಕೊಂಡಿರುವ ‘ಇಂಡಿಯಾ’ ಮೈತ್ರಿಕೂಟಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಂಚಾಲಕರಾಗಿ ನೇಮಕ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ನವದೆಹಲಿ: ಲೋಕಸಭೆಯಲ್ಲಿರುವ ವಿಪಕ್ಷಗಳೆಲ್ಲ ಸೇರಿ ರಚಿಸಿಕೊಂಡಿರುವ ‘ಇಂಡಿಯಾ’ ಮೈತ್ರಿಕೂಟಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಂಚಾಲಕರಾಗಿ ನೇಮಕ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ಮೂಲಕ ಇತ್ತೀಚೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ನಡೆದ ಯತ್ನದಿಂದ ಅಸಮಾಧಾನಗೊಂಡಿದ್ದ ನಿತೀಶ್‌ರನ್ನು ಸಮಾಧಾನಿಸುವ ಯತ್ನ ನಡೆದಿದೆ.

ಈ ಬಗ್ಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಹಾಗೂ ನಿತೀಶ್‌ ಜೊತೆ ಕಾಂಗ್ರೆಸ್‌ ನಾಯಕರು ಮಂಗಳವಾರ ಚರ್ಚೆ ನಡೆಸಿದ್ದಾರೆ. ನಿತೀಶ್‌ ನೇಮಕದ ವಿಚಾರವಾಗಿ ಇತರೆ ಪಕ್ಷಗಳಾದ ಉದ್ಧವ್‌ ಠಾಕ್ರೆ ಬಣದ ಶಿವಸೇನೆ, ಶರದ್‌ ಪವಾರ್‌ ಬಣದ ಎನ್‌ಸಿಪಿ, ಆಮ್‌ ಆದ್ಮಿ ಪಾರ್ಟಿಗಳ ಮನವೊಲಿಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ನಿತೀಶ್ ಕುಮಾರ್‌ ಇಂಡಿಯಾ ಕೂಟ ರಚನೆಯಲ್ಲಿ ಬಹುಮುಖ್ಯ ಪಾತ್ರವನ್ನು ಹೊಂದಿದ್ದಾರೆ. ಹೀಗಾಗಿ ಅವರ ನೇಮಕಕ್ಕೆ ಯತ್ನ ನಡೆದಿದೆ.

ಪ್ರಧಾನಿ ಸ್ಥಾನಕ್ಕೆ ಖರ್ಗೆ ಹೆಸರಿಗೆ ನನ್ನ ತಕರಾರಿಲ್ಲ, ನನಗೆ ಇಂಡಿಯಾ ಕೂಟದ ಸಂಚಾಲಕ ಹುದ್ದೆಯೂ ಬೇಡ: ನಿತೀಶ್‌ ಕುಮಾರ್

ದಿಲ್ಲಿ ಅಬಕಾರಿ ಹಗರಣ: ಸತತ 3ನೇ ಬಾರಿ ಇ.ಡಿ. ವಿಚಾರಣೆಗೆ ಕೇಜ್ರಿವಾಲ್‌ ಗೈರು

ನವದೆಹಲಿ: ದೆಹಲಿ ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರು ಸತತ ಮೂರನೇ ಬಾರಿ ಜಾರಿ ನಿರ್ದೇಶನಾಲಯದ (ಇ.ಡಿ.) ವಿಚಾರಣೆಗೆ ಗೈರಾಗಿದ್ದಾರೆ. ಈ ಕುರಿತು ಇ.ಡಿ.ಗೆ ಪತ್ರ ಬರೆದಿರುವ ಕೇಜ್ರಿವಾಲ್‌, ‘ಈ ಸಮನ್ಸ್‌ ದೋಷಗಳಿಂದ ಕೂಡಿದೆ. ಇದು ಸಾಮಾನ್ಯ ವಿಚಾರಣೆಯಂತಿಲ್ಲ. ಇದು ನನ್ನನ್ನು ಬಂಧಿಸುವ ಯತ್ನದಂತಿದೆ. ನಾನು ರಾಜ್ಯಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಬ್ಯುಸಿ ಆಗಿದ್ದೇನೆ. ನನಗೆ ನೀಡಿದ ಸಮನ್ಸ್‌ ಪ್ರಶ್ನಿಸಿ ನಾನು ಬರೆದ ಮೊದಲ 2 ಪತ್ರಕ್ಕೆ ನೀವು ಉತ್ತರಿಸಿಲ್ಲ. ಮೊದಲು ಅದಕ್ಕೆ ಉತ್ತರಿಸಿ. ಬಳಿಕ ನೀವು ಕೇಳುವ ಎಲ್ಲ ಪ್ರಶ್ನೆಗೂ ಉತ್ತರಿಸುತ್ತೇನೆ’ ಎಂದಿದ್ದಾರೆ.

ಈ ಹಿಂದೆ ನ.2 ಹಾಗೂ ಡಿ.21ರಂದು ವಿಚಾರಣೆಗೆ ಹಾಜರಾಗುಂತೆ ಇ.ಡಿ. ನೋಟಿಸ್‌ ನೀಡಿತ್ತು. ಆದರೆ ಅರವಿಂದ್ ಕೇಜ್ರಿವಾಲ್‌ ಈ ಎರಡೂ ವಿಚಾರಣೆಗೂ ಗೈರಾಗಿದ್ದರು.

ವಾರಣಾಸಿಯಲ್ಲಿ ಮೋದಿ ಸೋಲಿಸಲು ಇಂಡಿಯಾ ಕೂಟದ ಪ್ಲಾನ್‌

ಬಿಜೆಪಿ, ಕಾಂಗ್ರೆಸ್‌ ಪ್ರಶ್ನೆ:

ಈ ನಡುವೆ, ಕೇಜ್ರಿವಾಲ್‌ ಗೈರು ಹಾಜರಿಯನ್ನು ಕಾಂಗ್ರೆಸ್‌ ಹಾಗೂ ಬಿಜೆಪಿ ಪ್ರಶ್ನಿಸಿವೆ. ತಪ್ಪಿತಸ್ಥ ಅಲ್ಲದೇ ಹೋದರೆ ವಿಚಾರಣೆಗೆ ಹೋಗಲೇಕೆ ಕೇಜ್ರಿವಾಲ್‌ಗೆ ಭಯ ಎಂದು ಪ್ರಶ್ನಿಸಿವೆ.