I.N.D.I.A ಒಕ್ಕೂಟದ ಮೀಟಿಂಗ್‌ಗೆ ಬರಲ್ಲ ಎಂದ ಪ್ರಮುಖ ಪಕ್ಷಗಳ ನಾಯಕರು: ನಾಳೆಯ ಸಭೆ ಮುಂದೂಡಿದ ಕಾಂಗ್ರೆಸ್!
ನಾಳೆಯ I.N.D.I.A ಒಕ್ಕೂಟದ ಸಭೆಗೆ ಹಲವು ಪ್ರಮುಖ ಮಿತ್ರ ಪಕ್ಷಗಳ ನಾಯಕರು ಗೈರುಹಾಜರಾಗುವುದಾಗಿ ಹೇಳಿದ ನಂತರ ಸಭೆ ಮುಂದೂಡಿಕೆಯಾಗಿದೆ ಎಂದು ತಿಳಿದುಬಂದಿದೆ.
ನವದೆಹಲಿ (ಡಿಸೆಂಬರ್ 5, 2023): ದೆಹಲಿಯಲ್ಲಿ ನಾಳೆ ನಡೆಯಬೇಕಿದ್ದ I.N.D.I.A ಒಕ್ಕೂಟದ ಸಭೆ ದಿಢೀರ್ ಮುಂದೂಡಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ನಾಳೆಯ ಸಭೆಗೆ ಹಲವು ಪ್ರಮುಖ ಮಿತ್ರ ಪಕ್ಷಗಳ ನಾಯಕರು ಗೈರುಹಾಜರಾಗುವುದಾಗಿ ಹೇಳಿದ ನಂತರ ವಿರೋಧ ಪಕ್ಷಗಳ ಸಭೆ ಮುಂದೂಡಿಕೆಯಾಗಿದೆ ಎಂದು ತಿಳಿದುಬಂದಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಇಬ್ಬರೂ ಸಭೆಗೆ ಗೈರಾಗಲು ಪ್ಲ್ಯಾನ್ ಮಾಡಿದ್ದರು. ಜತೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಾವು ಕೂಡ ಭಾಗವಹಿಸುವುದಿಲ್ಲ ಎಂದು ಸೋಮವಾರವೇ ಹೇಳಿದ್ದರು. ಈ ಮೂವರೂ ಬಣದ ಹಿರಿಯ ಸದಸ್ಯರಾಗಿದ್ದು, ನಿತೀಶ್ ಕುಮಾರ್ ಅವರು ವಿರೋಧ ಗುಂಪಿನ ಸ್ಥಾಪಕ ಸದಸ್ಯರಾಗಿದ್ದಾರೆ. ಇನ್ನು, ಚೆನ್ನೈನಲ್ಲಿ ಭಾರಿ ಮಳೆಯ ಕಾರಣದಿಂದ ಸ್ಟ್ಯಾಲಿನ್ ಕೂಡ ಭಾಗಿಯಾಗಲ್ಲ ಎಂದು ಹೇಳಲಾಗಿತ್ತು.
ಇದನ್ನು ಓದಿ: ಮೋದಿ ದೂರವಿಟ್ಟು ತಮ್ಮ ಕ್ಷೇತ್ರದಲ್ಲೇ ಸೋತ ಮಿಜೋರಾಂ ಸಿಎಂ, ಡೆಪ್ಯುಟಿ ಸಿಎಂ: ZPM ಗೆ ಅಧಿಕಾರ ನೀಡಿದ ಮತದಾರ ಪ್ರಭು!
ನಾಳೆಯ ಸಭೆ ಮುಂದೂಡಿಕೆಯಾಗಿದ್ದರೂ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಈ ತಿಂಗಳ ಮೂರನೇ ವಾರದಲ್ಲಿ ಎಲ್ಲರಿಗೂ ಅನುಕೂಲಕರವಾದ ದಿನಾಂಕದಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮೂರು ರಾಜ್ಯಗಳ ಚುನಾವಣೆಯಲ್ಲಿ ತಮ್ಮ ಪಕ್ಷ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸಭೆಯನ್ನು ಕರೆದಿದ್ದರು.
ನಾಳೆ ಸಭೆ ನಡೆದಿದ್ದರೆ, ನಿತೀಶ್ ಕುಮಾರ್ ಮತ್ತು ಅಖಿಲೇಶ್ ಯಾದವ್ ತಮ್ಮ ಬದಲಿಗೆ ಬೇರೆ ನಾಯಕರನ್ನು I.N.D.I.A ಒಕ್ಕೂಟದ ಸಭೆಗೆ ಕಳಿಸುವ ಪ್ಲ್ಯಾನ್ ಮಾಡಿದ್ದರು. ಜನತಾ ದಳ (ಯುನೈಟೆಡ್) ನಾಯಕರು ಪಕ್ಷದ ಅಧ್ಯಕ್ಷ ರಾಜೀವ್ ರಂಜನ್ ಮತ್ತು ಹಿರಿಯ ವ್ಯಕ್ತಿ ಸಂಜಯ್ ಝಾ ಅವರನ್ನು ಕಳುಹಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಹಾಗೂ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಮ್ಮ ಚಿಕ್ಕಪ್ಪ ಮತ್ತು ರಾಜ್ಯಸಭಾ ಸಂಸದ ರಾಮಗೋಪಾಲ್ ಯಾದವ್ ಅವರನ್ನು ಕಳುಹಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಸಂಸತ್ತಿನಲ್ಲಿ ನಮೋಗೆ ಚಪ್ಪಾಳೆಯ ಸ್ವಾಗತ; ಸಂಸದರಿಂದ 3ನೇ ಬಾರಿ ಮೋದಿ ಸರ್ಕಾರ ಘೋಷಣೆ
ಆದರೂ, ಬಿಹಾರ ಸರ್ಕಾರದ ಉಳಿದ ಅರ್ಧ ಭಾಗವಾದ ರಾಷ್ಟ್ರೀಯ ಜನತಾ ದಳ ಪಕ್ಷದ ಉನ್ನತ ನಾಯಕರಾದ ಲಾಲೂ ಪ್ರಸಾದ್ ಯಾದವ್ ಮತ್ತು ಬಿಹಾರ ಉಪ ಮುಖ್ಯಮಂತ್ರಿಯಾಗಿರುವ ಅವರ ಪುತ್ರ ತೇಜಸ್ವಿ ಯಾದವ್ ಸಭೆಯಲ್ಲಿ ಭಾಗಿಯಾಗೋದಾಗಿ ಸ್ಪಷ್ಟನೆ ನೀಡಿದ್ದರು ಎಂದೂ ತಿಳಿದುಬಂದಿದೆ.
ತೆಲಂಗಾಣದಲ್ಲಿ ಬದಲಾಗ್ತಿದೆ ಸರ್ಕಾರ: ರೇವಂತ್ ರೆಡ್ಡಿ, ಕೆಟಿಆರ್‌ಗೆ ಯುಕೆ ಡೆಪ್ಯುಟಿ ಹೈ ಕಮಿಷನರ್ ಪೋಸ್ಟ್ ವೈರಲ್!