ಬಿಹಾರದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಆಗುತ್ತಿರುವ ಹಿನ್ನಡೆಯೇನು?

ಬಿಹಾರದ ಬಜೆಟ್‌ನಲ್ಲಿ ಕೇಂದ್ರದ ಪಾಲು 70 ಪ್ರತಿಶತ. ಬಿಹಾರದಲ್ಲಿ ಕೃಷಿ ಅವಲಂಬನೆ ಹೆಚ್ಚು. ಒಂದು ಎಕರೆ, ಎರಡು ಎಕರೆ ಜಮೀನು ಇರುವವರ ಸಂಖ್ಯೆ ಜಾಸ್ತಿ. ಹೀಗಾಗಿ ಕಾರ್ಖಾನೆಗಳು ಬರುವುದಿಲ್ಲ; ಬಂದರೂ ಭೂಮಿ ಕೊಡಿಸೋದು ಸರ್ಕಾರಕ್ಕೆ ಭಾರೀ ತಲೆನೋವು.

Bihar Assembly election 2020 reason for low employment rate hls

ಬೆಂಗಳೂರು (ಅ. 30): ಕರ್ನಾಟಕದಲ್ಲಿ ಒಂದು ಚದರ ಕಿಲೋಮೀಟರ್‌ನಲ್ಲಿ ಸರಾಸರಿ 330 ಜನಸಾಂದ್ರತೆ ಇದ್ದರೆ, ಬಿಹಾರದಲ್ಲಿ 1350ರಿಂದ 1700ರ ವರೆಗೆ ಇದೆ. ಹೀಗಾಗಿ ಸರ್ಕಾರಕ್ಕೆ ಆದಾಯ ಕಡಿಮೆ, ಖರ್ಚು ಹೆಚ್ಚು. ಅರ್ಥಾತ್‌ ತೆರಿಗೆ ಸಂಗ್ರಹ ಕಡಿಮೆ, ಅನುದಾನ ಹೆಚ್ಚು.

ಬಿಹಾರದ ಬಜೆಟ್‌ನಲ್ಲಿ ಕೇಂದ್ರದ ಪಾಲು 70 ಪ್ರತಿಶತ. ಬಿಹಾರದಲ್ಲಿ ಕೃಷಿ ಅವಲಂಬನೆ ಹೆಚ್ಚು. ಒಂದು ಎಕರೆ, ಎರಡು ಎಕರೆ ಜಮೀನು ಇರುವವರ ಸಂಖ್ಯೆ ಜಾಸ್ತಿ. ಹೀಗಾಗಿ ಕಾರ್ಖಾನೆಗಳು ಬರುವುದಿಲ್ಲ; ಬಂದರೂ ಭೂಮಿ ಕೊಡಿಸೋದು ಸರ್ಕಾರಕ್ಕೆ ಭಾರೀ ತಲೆನೋವು. ಹೀಗಾಗಿ ವಲಸೆ ಹೋಗೋದು ಅನಿವಾರ್ಯ. 50 ಲಕ್ಷಕ್ಕೂ ಹೆಚ್ಚು ಬಿಹಾರಿಗಳು ದಿಲ್ಲಿ, ಮುಂಬೈ, ಬೆಂಗಳೂರಿನಿಂದ ಹಿಡಿದು ಆಫ್ರಿಕಾವರೆಗೆ ವಲಸೆ ಹೋಗುತ್ತಾರೆ. ಉನ್ನತ ಶಿಕ್ಷಣದ ವ್ಯವಸ್ಥೆ ಇಲ್ಲ. ಎಂಜಿನಿಯರಿಂಗ್‌, ಮೆಡಿಕಲ್‌ ಕಾಲೇಜ್‌ಗಳು ಇಲ್ಲ. ಹೋಗಲಿ ನರ್ಸಿಂಗ್‌ ಕಾಲೇಜ್‌, ಐಟಿಐಗಳೂ ಕಡಿಮೆ. ಹೀಗಾಗಿ ಎಲ್ಲರಿಗೂ ಸರ್ಕಾರಿ ನೌಕರಿಗಳೇ ಬೇಕು.

ಬಿಹಾರದಲ್ಲಿ ವೋಟರ್ ಮಾಂಗೆ ಮೋರ್ : ನಿತೀಶ್ ಕುಮಾರ್ ಎದುರು ದೊಡ್ಡ ಸವಾಲ್

ತೇಜಸ್ವಿ ಯಾದವ್‌ ಅಧಿ​ಕಾರಕ್ಕೆ ಬಂದ ಒಂದು ಗಂಟೆಯಲ್ಲಿ 10 ಲಕ್ಷ$ನೌಕರಿ ಕೊಡುತ್ತೇನೆ ಎಂದಕೂಡಲೇ ಯುವಕರು ಅತ್ತ ಓಡುತ್ತಿದ್ದಾರೆ. ಹೀಗಾಗಿ ಈಗ ಮೋದಿ ಮತ್ತು ನಿತೀಶ್‌ 19 ಲಕ್ಷ ಉದ್ಯೋಗ ಕೊಡುತ್ತೇವೆ ವಾಪಸ್‌ ಬನ್ನಿ ಎನ್ನುತ್ತಿದ್ದಾರೆ. ಇದೊಂದು ತರಹ ರೈತರ ಸಾಲಮನ್ನಾದಂತಹ ರಾಜಕೀಯ ಮಂತ್ರ ದಂಡ. ರಾಜಕಾರಣಿಗಳು ಎಂಬಿಎ ಮಾಡದೇ ಇದ್ದರೂ ಅದ್ಭುತ ಸೇಲ್ಸ್‌ಮನ್‌ಗಳು ಬಿಡಿ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Latest Videos
Follow Us:
Download App:
  • android
  • ios