Asianet Suvarna News Asianet Suvarna News

Politics: ವಿಧಾನ ಪರಿಷತ್ ಸಭಾಪತಿ ಚುನಾವಣೆಗೆ ಭಾರೀ ಟ್ವಿಸ್ಟ್ : ಮಲ್ಕಾಪುರೆ ದೆಹಲಿಗೆ ದೌಡು

ರಾಜ್ಯದಲ್ಲಿ ವಿಧಾನ ಪರಿಷತ್ ಸಭಾಪತಿ ಚುನಾವಣೆಯನ್ನು ಡಿ. 21 ರಂದು ನಿಗದಿ ಮಾಡಲಾಗಿದೆ. ಇವರ ಬದಲಾವಣೆಗೆ ಬಿಜೆಪಿ ಮೂಲ ನಾಯಕರ ವಿರೋಧದ ಹಿನ್ನೆಲೆಯಲ್ಲಿ ಹಂಗಾಮಿ ಸಭಾಪತಿಯಾಗಿ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ಬಿಜೆಪಿಯ ಕೇಂದ್ರ ನಾಯಕರು ದೆಹಲಿಗೆ ಕರೆಸಿಕೊಂಡಿದ್ದಾರೆ.

Big twist for the election of the Parishad Chairman Malkapure is running for Delhi sat
Author
First Published Dec 11, 2022, 4:33 PM IST

ಬೆಂಗಳೂರು (ಡಿ.11) : ರಾಜ್ಯದಲ್ಲಿ ವಿಧಾನ ಪರಿಷತ್ ಸಭಾಪತಿ ಚುನಾವಣೆಯನ್ನು ಡಿ. 21 ರಂದು ನಿಗದಿ ಮಾಡಲಾಗಿದೆ. ಇವರ ಬದಲಾವಣೆಗೆ ಬಿಜೆಪಿ ಮೂಲ ನಾಯಕರ ವಿರೋಧದ ಹಿನ್ನೆಲೆಯಲ್ಲಿ ಹಂಗಾಮಿ ಸಭಾಪತಿಯಾಗ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ಬಿಜೆಪಿಯ ಕೇಂದ್ರ ನಾಯಕರು ದೆಹಲಿಗೆ ಕರೆಸಿಕೊಂಡಿದ್ದಾರೆ. ಸಭಾಪತಿ ನೇಮಕ ವಿಚಾರದಲ್ಲಿ ಭಾರೀ ತಿರುವು ಸಿಕ್ಕಂತಾಗಿದೆ.

ಬಿಜೆಪಿ ಕೇಂದ್ರ ನಾಯಕರ ಸೂಚನೆ ಮೇರೆಗೆ  ರಘುನಾಥ್ ರಾವ್ ಮಲ್ಕಾಪುರೆ ದಿಢೀರ್‌ ದೆಹಲಿಗೆ ತೆರಳಿದ್ದಾರೆ. ಇಂದು ರಾತ್ರಿಯೇ ದೆಹಲಿಯಲ್ಲಿ ವರಿಷ್ಠ ನಾಯಕರ ಜೊತೆಗೆ ಮಲ್ಕಾಪುರೆ ಚರ್ಚೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್ 21 ಕ್ಕೆ ಸಭಾಪತಿ ಚುನಾವಣೆಯನ್ನು ಸರ್ಕಾರ  ನಿಗದಿ ಮಾಡಿದೆ. ಬಿಜೆಪಿ ನಾಯಕರ ಸೂಚನೆ ಮೇರೆಗೆ ಸರ್ಕಾರ ಸಭಾಪತಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿತ್ತು. ಈಗ ಸಭಾಪತಿ ಮಲ್ಕಾಪುರೆ ಬದಲಾವಣೆಗೆ ಕುರುಬ ನಾಯಕರ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿಯೇ ಪಕ್ಷನಿಷ್ಠ ರಘುನಾಥ್ ರಾವ್ ಮಲ್ಕಾಪುರೆ ಅವರು ದೆಹಲಿ ತಲುಪಿದ ಬೆನ್ನಲ್ಲೇ ರಾಜ್ಯದಲ್ಲಿ ಕುರುಬ ಮತ್ತು ಮೂಲ ಬಿಜೆಪಿ ನಾಯಕರಿಂದ ಬೇಸರ ವ್ಯಕ್ತವಾಗಿದೆ. 

ನನ್ನನ್ನು ಸಭಾಪತಿ ಮಾಡಲು ನಾಲ್ವರ ವಿರೋಧ: ಬಸವರಾಜ ಹೊರಟ್ಟಿ

ಮಲ್ಕಾಪುರೆ ಮುಂದುವರಿಸಲು ಆಗ್ರಹ: ರಾಜ್ಯದಲ್ಲಿ ಮೇಲ್ಮನೆಯ ಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆಯಾಗಿ ಪುನಃ ಮೇಲ್ಮನೆಗೆ ಆಯ್ಕೆಯಾಗಿ ಬಂದಿದ್ದರು. ಈಗ ಬಸವರಾಜ ಹೊರಟ್ಟಿ ಅವರನ್ನೇ ಪುನಃ ಸಭಾಪತಿಯನ್ನಾಗಿ ಮಾಡ;ಲು ಸರ್ಕಾರ ತೀರ್ಮಾನಿಸಿದಂತಿದೆ. ಈ ಹಿನ್ನೆಲೆಯಲ್ಲಿ ಹಂಗಾಮಿ ಸಭಾಪತಿಯಾಗಿರುವ ಮಲ್ಕಾಪುರೆ ಅವರ ಬದಲಾವಣೆ ಅನಿವಾರ್ಯವಾಗಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಲವು ಬಿಜೆಪಿ ನಾಯಕರು ಸಂವಿಧಾನಬದ್ಧ ಸಭಾಪತಿ ಸ್ಥಾನದಲ್ಲಿ ಮಲ್ಕಾಪುರೆ ಮುಂದುವರಿಸಲು ಆಗ್ರಹಿಸಿದ್ದಾರೆ. ಹಿರಿಯರಾದ ಬಸವರಾಜ ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.

ಸಭಾಪತಿ ಹುದ್ದೆ: ಬಿಜೆಪಿ ಹಿಂದೇಟಿನಿಂದ ಬಸವರಾಜ ಹೊರಟ್ಟಿ ಅತಂತ್ರ?

ಪ್ರಧಾನ ಕಾರ್ಯದರ್ಶಿಯಾಗಿ ಸೇವೆ: ರಾಜ್ಯದ ಬಿಜೆಪಿಯಲ್ಲಿ 2 ಬಾರಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಯುವಮೋರ್ಚಾ ರಾಜ್ಯಾಧ್ಯಕ್ಷ ಆಗಿ ಮಲ್ಕಾಪುರೆ ಕಾರ್ಯ ಪಕ್ಷ ಕಟ್ಟಿದ್ದಾರೆ. ಈಗ ಪಕ್ಷದ ಹಿರಿಯ ಸದಸ್ಯರಾಗಿರುವ ಮಲ್ಕಾಪುರೆ ಅವರನ್ನೇ ಸಭಾಪತಿಯಾಗಿ ಮುಂದುವರಿಸುವಂತೆ ಮೂಲ ಬಿಜೆಪಿ ನಾಯಕರ ಆಗ್ರಹಿಸಿದ್ದಾರೆ. ಸಭಾಪತಿ ಚುನಾವಣೆ ವೇಳಾಪಟ್ಟಿ ಬೆನ್ನಲ್ಲೇ ಕುರುಬ ಸಂಘಟನೆ ಮತ್ತು ನಾಯಕರಿಂದ ಬಿಜೆಪಿ ವರಿಷ್ಠರಿಗೆ ಮನವಿ ಸಲ್ಲಿಸಲಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಆಗೋದನ್ನು ತಡೆಯುವಂತೆಯೂ ತಿಳಿಸಿದ್ದಾರೆ. ಇನ್ನು ಪಕ್ಷದೊಳಗೆ ವ್ಯಕ್ತವಾದ ಅಭಿಪ್ರಾಯದ ಹಿನ್ನೆಲೆಯಲ್ಲಿ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಅಲ್ಲಿ ಸಭಾಪತಿಯಾಗಿ ಮುಂದುವರಿಯುವ ತಿರ್ಮಾನ ಹೊರಬಿಳುತ್ತಾ.? ಇಲ್ಲವೋ ಎನ್ನುವುದನ್ನು ಕಾದುನೋಡಬೇಕಿದೆ.

Follow Us:
Download App:
  • android
  • ios