ನನ್ನನ್ನು ಸಭಾಪತಿ ಮಾಡಲು ನಾಲ್ವರ ವಿರೋಧ: ಬಸವರಾಜ ಹೊರಟ್ಟಿ
ರಾಜಕಾರಣದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರುತ್ತವೆ. ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿ ಯಾವಾಗ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದ ಹೊರಟ್ಟಿ
ಹುಬ್ಬಳ್ಳಿ(ಅ.14): ಪಕ್ಷದ ಕೆಲ ಆಂತರಿಕ ಸಮಸ್ಯೆಯಿಂದ ನನಗೆ ಸಭಾಪತಿ ಸ್ಥಾನ ಸಿಗುತ್ತಿಲ್ಲ. ಕೆಲ ಪರಿಷತ್ ಸದಸ್ಯರು ನನ್ನನ್ನು ಸಭಾಪತಿ ಮಾಡಲು ವಿರೋಧಿಸಿದ್ದರು. ಹೀಗಾಗಿ ವಿಳಂಬವಾಗಿದೆ. ಅಧಿವೇಶನ ಆರಂಭವಾದ ಬಳಿಕ ನನ್ನನ್ನು ಸಭಾಪತಿ ಮಾಡುವ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಕೆಲವರು ಪಕ್ಷಕ್ಕೆ ಈಗ ಬಂದವರಿಗೆ ಏಕೆ ಸಭಾಪತಿ ಸ್ಥಾನ ಎನ್ನುತ್ತಿದ್ದಾರೆ. ಈಗ ಅವರೆಲ್ಲರನ್ನೂ ಸಮಾಧಾನ ಮಾಡಲಾಗಿದೆ. ಇತ್ತೀಚೆಗೆ ನಡೆದ ಕೋರ್ ಕಮಿಟಿಯಲ್ಲಿ ಒಂದು ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ. ಅಧಿವೇಶನ ಪ್ರಾರಂಭವಾದ ನಂತರ ಸಭಾಪತಿ ಮಾಡುತ್ತಾರೆಂಬ ವಿಶ್ವಾಸ ಇದೆ ಎಂದರು. ಪರಿಷತ್‌ನಲ್ಲಿ 31ರಲ್ಲಿ 27 ಸದಸ್ಯರು ನನ್ನ ಪರವಾಗಿದ್ದಾರೆ. ಕೇವಲ ನಾಲ್ವರು ನನ್ನನ್ನು ವಿರೋಧಿಸುತ್ತಿದ್ದಾರೆ. ರಾಜಕಾರಣದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರುತ್ತವೆ. ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿ ಯಾವಾಗ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದರು.
ಹೊರಟ್ಟಿ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಳ್ಳಲಿ: ಬೆಂಬಲಿಗರು ಆಕ್ರೋಶ
ಬಿಜೆಪಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆಂಬ ಭರವಸೆ ಇದೆ. ಯಡಿಯೂರಪ್ಪ ಅವರು ನೇರವಾಗಿ ನಮ್ಮ ನಾಲಿಗೆ ಒಂದೇ ಇರಬೇಕು. ಅವರನ್ನು ಸಭಾಪತಿ ಮಾಡಬೇಕೆಂದು ಹೇಳಿದ್ದಾರೆ ಎಂದು ಹೊರಟ್ಟಿ ತಿಳಿಸಿದರು.