Asianet Suvarna News Asianet Suvarna News

ಗುಜರಾತ್‌ನಲ್ಲಿ ಆಮ್ ಆದ್ಮಿಗೆ ಸಂಕಷ್ಟ, ಐವರು ಶಾಸಕರು ಬಿಜೆಪಿ ಜೊತೆ ಸಂಪರ್ಕ!

ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅತ್ಯುತ್ತಮ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಸ್ಪರ್ಧಿ 5 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಗೆದ್ದ ಐವರು ಶಾಸಕರು ಇದೀಗ ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ. ಕೆಲವರು ಬಿಜೆಪಿ ಸೇರಿಕೊಳ್ಳುವ ಸೂಚನೆ ನೀಡಿದ್ದಾರೆ.

Big setback for Arvind Kejriwal Aam Aadmi Party Gujarat 5 AAP MLA touch with BJP likely to Join says reports ckm
Author
First Published Dec 11, 2022, 6:56 PM IST

ಅಹಮ್ಮದಾಬಾದ್(ಡಿ.11): ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಬಿಜೆಪಿ ಡಿಸೆಂಬರ್ 12 ರಂದು ಹೊಸ ಸರ್ಕಾರ ರಚಿಸುತ್ತಿದೆ. ಇತ್ತ ಗುಜರಾತ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದ್ದ ಕೇಜ್ರಿವಾಲ್‌ಗೆ ಮುಖಭಂಗವಾಗಿದ್ದರೂ, ಆಪ್ ಸಾಧನೆ ಮೆಚ್ಚಿಕೊಳ್ಳಲೇಬೇಕು. ಇದೇ ಮೊದಲ ಬಾರಿಗೆ ಸ್ಪರ್ಧಿ 5 ಸ್ಥಾನ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ದೆಹಲಿ ಪಾಲಿಕೆ ಚುನಾವಣೆ ಗೆಲುವು, ಗುಜರಾತ್‌ನಲ್ಲಿ ಖಾತೆ ತೆರೆಯುವ ಮೂಲಕ ಸಂಭ್ರಮದಲ್ಲಿರುವ ಆಪ್‌ಗೆ ಇದೀಗ ಶಾಕ್ ಎದುರಾಗಿದೆ. ಆಮ್ ಆದ್ಮಿ ಪಾರ್ಟಿಯಿಂದ ಗೆದ್ದ ಐವರು ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ನನ್ನ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ದಿ ಮಾಡಲು ಬಿಜೆಪಿ ಸೇರಿಕೊಳ್ಳುವ ಮಾತುಗಳನ್ನು ಆಡಿದ್ದಾರೆ. 

ಬಿಜೆಪಿ ಸೇರಿಕೊಳ್ಳಲು ಬಯಸಿರುವ ಆಮ್ ಆದ್ಮಿ ಪಾರ್ಟಿಯ ಐವರು ಶಾಸಕರ ಪೈಕಿ ಮೂವರು ಶಾಸಕರು ಬಿಜೆಪಿ ತೊರೆದು ಆಪ್ ಸೇರಿದವರಾಗಿದ್ದಾರೆ. ಈ ಬಾರಿ ಚುನಾವಣೆಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಕಾರಣ ಬಿಜೆಪಿ ತೊರೆದು ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದರು. ಇಷ್ಟೇ ಅಲ್ಲ ಗೆಲುವು ಸಾಧಿಸಿದ್ದಾರೆ. ಇದೀಗ ಈ ಮೂವರು ಸೇರಿದಂತೆ ಇನ್ನಿಬ್ಬರು ಶಾಸಕರು ಬಿಜೆಪಿ ಸೇರಿಕೊಳ್ಳಲು ಮನಸ್ಸು ಮಾಡಿದ್ದಾರೆ. ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

'ಪೇಪರ್‌ನಲ್ಲಿ ಬರ್ದು ಕೊಡ್ತಿನಿ, ಈ ಮೂರ್‌ ಜನ ಗೆಲ್ತಾರೆ' ಎಂದಿದ್ದ ಕೇಜ್ರಿವಾಲ್‌, ಅವರ ರಿಸಲ್ಟ್‌ ನೋಡಿದ್ರಾ?

ಆಮ್ ಆದ್ಮಿ ಪಾರ್ಟಿ ಮೂಲಕ ಗೆಲುವು ದಾಖಿಲಿಸಿದ ಭೂಪತ್ ಬಯಾನಿ ಇದೀಗ ಆಪ್‌ಗೆ ರಾಜೀನಾಮೆ ನೀಡಿ ಅಧಿಕೃತವಾಗಿ ಬಿಜೆಪಿ ಸೇರಿಕೊಳ್ಳಲು ಮನಸ್ಸು ಮಾಡಿದ್ದಾರೆ. ಶೀಘ್ರದಲ್ಲೇ ಭೂಪತ್ ಬಯಾನಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. 

ಪ್ರಚಾರದ ವೇಳೆ ಭಾರಿ ಅಬ್ಬರ ಸೃಷ್ಟಿಸಿ ಚುನಾವಣೆಯಲ್ಲಿ ಗೆದ್ದೇ ಬಿಟ್ಟೆವೂ ಎಂಬಂತೆ ಬಿಂಬಿಸಿಕೊಂಡಿದ್ದ ಆಮ್‌ ಆದ್ಮಿ ಪಕ್ಷ ಗುಜರಾತಲ್ಲಿ ಸೋತಿದೆ. ಆದರೂ ಮೊದಲ ಬಾರಿ ಗುಜರಾತಲ್ಲಿ ಸ್ಪರ್ಧೆ ಮಾಡಿದ ಆಪ್‌ ಖಾತೆ ತೆರೆಯುವಲ್ಲಿ ಸಫಲವಾಗಿದೆ. ಗುಜರಾತ್‌ ಚುನಾವಣೆಯಲ್ಲಿ ಆಪ್‌ ಸಾಧನೆ ಕಡಿಮೇ ಏನಲ್ಲ. ಪ್ರಧಾನಿಯ ತವರು ರಾಜ್ಯದಲ್ಲಿ ಮೊದಲ ಚುನಾವಣೆಯಲ್ಲೇ ಆಪ್‌ 5 ಸ್ಥಾನಗಳಲ್ಲಿ ಜಯಗಳಿಸಿದೆ. ಒಟ್ಟಾರೆ ಮತದ ಪ್ರಮಾಣದಲ್ಲಿ ಆಪ್‌ ಶೇ.12.89ರಷ್ಟುಮತಗಳನ್ನು ಪಡೆದುಕೊಂಡಿದೆ. ಈಗಾಗಲೇ ದೆಹಲಿ ಮತ್ತು ಪಂಜಾಬ್‌ನಲ್ಲಿ ಸ್ಪಷ್ಟಬಹುಮತದೊಂದಿಗೆ ಅಧಿಕಾರ ನಡೆಸುತ್ತಿರುವ ಆಪ್‌ ಗೋವಾದಲ್ಲಿ ಶಾಸಕರನ್ನು ಹೊಂದಲು ಸಫಲವಾಗಿತ್ತು.  

Gujarat Election Results: ರಾಜ್ಯ ರಾಜಕೀಯದ ಮೇಲಾಗುವ ಪರಿಣಾಮವೇನು?

ಆಪ್‌ಗೆ ರಾಷ್ಟ್ರೀಯ ಪಕ್ಷದ ಅರ್ಹತೆ
ಗುಜರಾತ್‌ ಚುನಾವಣೆಯಲ್ಲಿ 5 ಸ್ಥಾನ ಗೆಲ್ಲುವುದರೊಂದಿಗೆ ಆಮ್‌ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಅರ್ಹತೆ ಪಡೆದಂತಾಗಿದೆ. 4 ರಾಜ್ಯಗಳ ಚುನಾವಣೆಯಲ್ಲಿ ಕನಿಷ್ಠ ತಲಾ 2 ಶಾಸಕರು ಅಥವಾ ತಲಾ ಶೇ.6ರಷ್ಟುಮತಗಳಿಕೆ ಹೊಂದಿದ್ದರೆ ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ಆಯೋಗ ನೀಡುತ್ತದೆ. ದೆಹಲಿ, ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಆಪ್‌ ಗೋವಾದಲ್ಲಿ ಇಬ್ಬರು ಶಾಸಕರನ್ನು ಹೊಂದಿದೆ. ಈಗ ಗುಜರಾತಿನಲ್ಲಿ 12% ವೋಟು ಗಳಿಸಿದೆ. ತನ್ಮೂಲಕ ಅಸ್ತಿತ್ವಕ್ಕೆ ಬಂದ ಹತ್ತೇ ವರ್ಷದಲ್ಲಿ ಮಹತ್ತರ ಸಾಧನೆ ಮಾಡಿದೆ.

Follow Us:
Download App:
  • android
  • ios