ಬಿಹಾರ ಸಿಎಂ ನಿತೀಶ್ ಕುಮಾರ್‌ ಹಾಗೂ ಮೈತ್ರಿ ಸರ್ಕಾರ ಅತೀ ದೊಡ್ಡ ಹಿನ್ನಡೆಯಾಗಿದೆ. ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಸಂಸದೀಯ ಮಂಡಳಿ ಅಧ್ಯಕ್ಷ ಪಕ್ಷ ತೊರೆದಿದ್ದಾರೆ. ಇಷ್ಟೇ ಅಲ್ಲ ನಿತೀಶ್‌ಗೆ ಪಾಠ ಕಲಿಸಲು ಹೊಸ ಪಕ್ಷ ಸ್ಥಾಪಿಸಿದ್ದಾರೆ. ಇದು 2024ರ ಲೋಕಸಭಾ ಚುನಾವಣೆಗೆ ತೀವ್ರ ಹಿನ್ನೆಡೆಯಾಗಿದೆ.

ಪಾಟ್ನ(ಫೆ20): ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಮಣಿಸಲು ವಿಪಕ್ಷಗಳ ಒಗ್ಗೂಡಿಸಲು ಯತ್ನಿಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಇದೀಗ ತೀವ್ರ ಹಿನ್ನಡೆಯಾಗಿದೆ. ತಮ್ಮದೇ ಪಕ್ಷ ಇದೀಗ ಒಡೆದು ಹೋಳಾಗವು ಆತಂಕ ಎದುರಾಗಿದೆ. ಬಿಜೆಪಿ ಮೈತ್ರಿ ಮುರಿದುಕೊಂಡು ಆರ್‌ಜೆಡಿ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿರುವ ನಿತೀಶ್ ಕುಮಾರ್ ಊಹಿಸದ ಹೊಡೆತ ತಿಂದಿದ್ದಾರೆ. ತಮ್ಮ ಜೆಡಿಯು ಪಕ್ಷದ ಪ್ರಮುಖ ನಾಯಕ, ಸಂಸದೀಯ ಮಂಡಳಿಯ ಅಧ್ಯಕ್ಷ ಉಪೇಂದ್ರ ಕುಶ್ವಾರ ಪಕ್ಷ ತೊರೆದಿದ್ದಾರೆ. ಇಷ್ಟೇ ಅಲ್ಲ ರಾಷ್ಟ್ರೀಯ ಲೋಕ ಜನತಾ ದಳ ಅನ್ನೋ ಹೊಸ ಪಕ್ಷ ಸ್ಥಾಪಿಸಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪ್ರಮುಖ ನಾಯಕನಾಗಿದ್ದ ಉಪೇಂದ್ರ ಕುಶ್ವಾರ ಈ ನಿರ್ಧಾರ, ಜೆಡಿಯು ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ. ಈ ಪಕ್ಷ ಸ್ಥಾಪನೆಯಿಂದ ಜೆಡಿಯು ಮತಗಳು ಚದುರಲಿದೆ.

ನಿತೀಶ್ ಕಮಾರ್ ಆರಂಭದಲ್ಲಿ ಸರಿಯಾದ ದಾರಿಯಲ್ಲಿ ನಡೆದಿದ್ದರು. ಆದರೆ ಬರುಬರುತ್ತಾ ನಿತೀಶ್ ಕುಮಾರ್ ದಾರಿ ಬದಲಾಯಿತು. ವರಸೆ ಬದಲಾಯಿತು. ಎಲ್ಲವನ್ನೂ ರಾಜಕೀಯ ಮಾಡುವ ದುರುದ್ದೇಶದ ನಡೆ ಹೆಚ್ಚಾಯಿತು. ಅಭಿವೃದ್ಧಿ ಕುಂಠಿತಗೊಂಡಿದೆ. ಸರ್ವಾಧಿಕಾರಿ ಧೋರಣೆ ನಿತೀಶ್ ಕುಮಾರ್ ಅವರಿಗೆ ಕೆಡುಕು ತರಲಿದೆ ಎಂದು ಉಪೇಂದ್ರ ಕುಶ್ವಾರ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನ ದಾಟಲ್ಲ, ನಿತೀಶ್ ಕುಮಾರ್ ಭವಿಷ್ಯ!

ಹೊಸ ಪಕ್ಷ ಲಾಂಚ್ ಕಾರ್ಯಕ್ರಮದಲ್ಲಿ 5,000ಕ್ಕೂ ಹೆಚ್ಚು ಬೆಂಬಲಿಗರು ಸೇರಿದ್ದರು. ಉಪೇಂದ್ರ ಕುಶ್ವಾರ ಬೆಂಬಲಿಗರು, ನಾಯಕರು ಇದೀಗ ಒಬ್ಬರ ಹಿಂದೊಬ್ಬರು ಹೊಸ ಕ್ಷ ಸೇರಿಕೊಳ್ಳುತ್ತಿದ್ದಾರೆ. ಇದೀಗ ಜೆಡಿಯು ನಾಯಕರು , ಹೊಸ ಪಕ್ಷದತ್ತ ವಾಲುತ್ತಿರುವುದು ನಿತೀಶ್ ಕುಮಾರ್ ಆತಂಕಕ್ಕೆ ಕಾರಣವಾಗಿದೆ. ಇತ್ತ ಜೆಡಿಯು ಮೈತ್ರಿ ಪಕ್ಷ ಆರ್‌ಜೆಡಿ ಕೂಡ ಆತಂಕ ಎದುರಿಸುತ್ತಿದೆ. ಹೊಸ ಪಕ್ಷ 2025ರ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಯು ಹಾಗೂ ಆರ್‌ಜೆಡಿ ಪಕ್ಷದ ಮತಗಳನ್ನು ಸೆಳೆಯಲಿದೆ.ಇದು ಬಿಜೆಪಿಗೆ ನೇರವಾಗಿ ಫಲಕೊಡಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 

ವಿಪಕ್ಷಗಳ ಮೈತ್ರಿ ಪ್ಲಾನ್ ಮಾಡಿದ್ದ ನಿತೀಶ್‌ಗೆ ಪಕ್ಷ ಒಡೆದು ಹೋಗುವ ಭೀತಿ
ವಿಪಕ್ಷಗಳ ಜತೆ ಮೈತ್ರಿಗೆ ಕಾಂಗ್ರೆಸ್‌ ಮುಂದಾಗಬೇಕು. ಮೈತ್ರಿ ಆದರೆ 100 ಸೀಟೂ ಬಿಜೆಪಿಗೆ ಬರುವುದಿಲ್ಲ’ ಎಂಬ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಮೈತ್ರಿಗೆ ಕಾಂಗ್ರೆಸ್‌ ಸಿದ್ಧವಿದೆ. ಕಾಂಗ್ರೆಸ್‌ ಇಲ್ಲದೇ ವಿಪಕ್ಷಗಳ ಒಗ್ಗಟ್ಟು ಹಾಗೂ ಯಶಸ್ಸು ಸಾಧ್ಯವಿಲ್ಲ’ ಎಂದು ಹೇಳಿದ್ದರು. ನಿತೀಶ್‌ ಹೇಳಿಕೆ ಸ್ವಾಗತಾರ್ಹ. ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆಯೂ ಮಾತನಾಡುತ್ತೇವೆ. ನಮ್ಮ ಜವಾಬ್ದಾರಿ ನಮಗೆ ಗೊತ್ತಿದೆ. ಕಾಂಗ್ರೆಸ್‌ ಇಲ್ಲದೆ ಯಾವುದೇ ವಿರೋಧ ಸಾಧ್ಯವಿಲ್ಲ. ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳುವುದು ತಪ್ಪು. ಹಲವು ರಾಜ್ಯಗಳಲ್ಲಿ ನಾವು ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಂಡಿದ್ದೇವೆ ಹಾಗಾಗಿ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳುವುದು ತಪ್ಪು’ ಎಂದಿದ್ದಾರೆ.ಅಲ್ಲದೆ, ಕೆಲವು ವಿಪಕ್ಷಗಳನ್ನೂ ತರಾಟೆಗೆ ತೆಗೆದುಕೊಂಡ ರಮೇಶ್‌, ‘ಕೆಲವು ಪಕ್ಷಗಳು ವಿಪಕ್ಷಗಳ ಸಭೆಗೆ ಬರುತ್ತವೆ. ಆದರೆ ನಂತರ ಒಳಗೊಳಗೇ ಬಿಜೆಪಿಗೆ ಬೆಂಬಲಿಸುತ್ತವೆ’ ಎಂದು ಹೇಳಿದ್ದಾರೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಮೇಲೆ ಮುರಿದ ಕುರ್ಚಿ ಎಸೆತ, ಸಮಾಧಾನ ಯಾತ್ರೆಯಲ್ಲಿ ಅಸಮಾಧಾನ!

ಆದರೆ ನಿತೀಶ್ ಕುಮಾರ್ ಆಫರ್ ಕಾಂಗ್ರೆಸ್ ಸೇರಿದಂತೆ ಕೆಲ ವಿಪಕ್ಷಗಳು ಒಪ್ಪಿಕೊಂಡ ಬೆನ್ನಲ್ಲೇ ತಮ್ಮದೇ ಪಕ್ಷದಲ್ಲಿ ಆತಂಕ ಶುರುವಾಗಿದೆ.