ಬೆಂಗಳೂರು (ಅ.29): ಮಾಜಿ ಸಚಿವ ಡಿಕೆ ಶಿವಕುಮಾರ್ ಹಾಗು ಕಾಂಗ್ರೆಸ್ ಅನರ್ಹ ಶಾಸಕ ಡಾ.ಸುಧಾಕರ್ ಗೆ ಮೆಡಿಕಲ್ ಕಾಲೇಜು ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದೆ. ಇದರಿಂದ ಇಬ್ಬರೂ ಚಾಲೆಂಜ್ ಮಾಡಿದ್ದಾರೆ.

ಕರ್ನಾಟಕಕ್ಕೆ 3 ಹೊಸ ವೈದ್ಯಕೀಯ ಕಾಲೇಜು!

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೆಡಿಕಲ್ ನಿರ್ಮಿಸಿಬೇಕೆನ್ನುವುದು ಸುಧಾಕರ್ ಆಗ್ರವಾಗಿದ್ದರೆ, ಕನಕಪುರದಲ್ಲೇ ಆಗ್ಬೇಕು ಎನ್ನುವುದು ಡಿಕೆಶಿ ಒತ್ತಾಯವಾಗಿದೆ. ಇದಕ್ಕಾಗಿ ಒಬ್ಬರಿಗೊಬ್ಬರು ಮಾತಿನಲ್ಲಿ ಕಿತ್ತಾಡಿಕೊಂಡಿದ್ದಾರೆ. 

ಕಳೆದ ಮೈತ್ರಿ ಸರ್ಕಾರದ ಬಜೆಟ್​ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕನಕಪುರ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದರು. ಅಲ್ಲದೆ, ಈ ಯೋಜನೆಗೆ ಸಾವಿರಾರು ಕೋಟಿ ಅನುದಾನವನ್ನೂ ಸಹ ತೆಗೆದಿಟ್ಟಿದ್ದರು. ಆದರೆ, ಇದೀಗ ಸಿಎಂ ಬಿ.ಎಸ್. ಯಡಿಯೂರಪ್ಪ ಈ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡುವ ಕುರಿತು ಚಿಂತನೆ ನಡೆಸಿದ್ದು, ಈ ಬಗ್ಗೆ ಡಿಕೆಶಿ ಕೆಂಡಾಮಂಡಲವಾಗಿದ್ದಾರೆ.

ಮೋದಿಗೆ HDK ನೀಡ್ತಾರಾ ಸಾಥ್, ಉಗ್ರರ ಹಿಟ್‌ಲಿಸ್ಟ್‌ನಲ್ಲಿ ವಿರಾಟ್; ಅ.29ರ ಟಾಪ್ 10 ಸುದ್ದಿ!

ಡಿಕೆಶಿ ಮಾತು
 'ಕನಕಪುರದಲ್ಲೇ ಮೆಡಿಕಲ್ ಕಾಲೇಜು ಆಗಬೇಕು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಆದರೆ, ಯಡಿಯೂರಪ್ಪ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಲು ಚಿಂತನೆ ನಡೆಸಿದ್ದಾರೆ. ಯಡಿಯೂರಪ್ಪ ಧೋರಣೆ ಸರಿ ಅಲ್ಲ.

ಕನಕಪುರದಲ್ಲೇ ಮೆಡಿಕಲ್​ ಕಾಲೇಜು ಸ್ಥಾಪನೆ ಮಾಡುವ ಬಗ್ಗೆ ಹೋರಾಟಕ್ಕೂ ಸಿದ್ಧ ಎಂದ ಅವರು, ಕನಕಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪಿಸುವ ಬಗ್ಗೆ ಹೋರಾಟ ಮಾಡಲು ನಾನು ಸಿದ್ಧ. ವಿಧಾನಸೌಧದಲ್ಲಿ ನನ್ನ ಪ್ರಾಣ ಬೇಕಿದ್ದರೆ ಹೋಗಲಿ. ಆದರೆ ಮೆಡಿಕಲ್ ಕಾಲೇಜನ್ನು ಮಾತ್ರ ಬಿಟ್ಟುಕೊಡುವುದಿಲ್ಲ ಎಂದು ಡಿಕೆಶಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಡಾ.ಸುಧಾಕರ್ ಮಾತು
ನನ್ನ ಪ್ರಾಣ ಬೇಕಾದ್ರು ಕೋಡುತ್ತೇನೆ ವಿನಃ ಮೆಡಿಕಲ್ ಕಾಲೇಜು ಬಿಟ್ಟುಕೊಡಲ್ಲ ಅನ್ನೊ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿರುವ ಸುಧಾಕರ್, ಡಿಕೆಶಿ ಪ್ರಾಣ ಬಿಡುವುದೇನು ಬೇಡ. ಮೆಡಿಕಲ್ ಕಾಲೇಜು ಮಾಡುವುದು ಪ್ರಾಣ ಉಳಿಸುವುದಕ್ಕೆ. ಚಿಕ್ಕಬಳ್ಳಾಪುರದಲ್ಲೇ ಮೆಡಿಕಲ್ ಕಾಲೇಜು ಮಾಡುವುದು ಶತಸಿದ್ದ. ಮೆಡಿಕಲ್ ಕಾಲೇಜು ಮಾಡದಿದ್ರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.

ಬಿಎಸ್ ವೈಗೆ ಶುರುವಾಯ್ತು ಟೆನ್ಶನ್
ಹೌದು...ಈ ಮೊದಲು ಮೈತ್ರಿ ಸರ್ಕಾರದಲ್ಲಿ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಕೊಡಲಾಗಿತ್ತು. ಆದ್ರೆ ಬಿಎಸ್ ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ಈ ಮೆಡಿಕಲ್ ಕಾಲೇಜನ್ನು ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಟ್ರಾನ್ಸ್ ಫರ್ ಮಾಡಲು ಕ್ಯಾಬಿನೆಟ್ ನಲ್ಲಿ ನಿರ್ಧರಿಸಿರುವುದು ಸುಧಾಕರ್ ಹಾಗೂ ಡಿಕೆಶಿ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಇದರಿಂದ ಸಿಎಂ ಬಿ.ಎಸ್,ಯಡಿಯೂರಪ್ಪ ಅವರಿಗೆ ಟೆನ್ಶನ್ ಶುರುವಾಗಿದೆ.

ಯಾಕಾಂದ್ರೆ ಡಿಕೆಶಿ ಒಂದು ರೀತಿಯಲ್ಲಿ ರಾಜಕೀಯವಾಗಿ ವಿರೋಧಿಯಾಗಿದ್ದರೂ ಬಿಎಸ್ ವೈ ಜತೆ ಉತ್ತಮ ಬಾಂಧವ್ಯ ಇದೆ. ಮತ್ತೊಂದೆಡೆ ಯಡಿಯೂರಪ್ಪ ಸಿಎಂ ಆಗಲು ಸುಧಾಕರ್ ಕಾಂಗ್ರೆಸ್ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಆಸೆ ಈಡೇರಿಸುವ ಋಣ ಯಡಿಯೂರಪ್ಪನವರ ಮೇಲಿದೆ.

ಈ ಋಣ ತೀರಿಸಲು ಹಾಗೂ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಮೆಡಿಕಲ್ ಕಾಲೇಜನ್ನು ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಎತ್ತಂಗಡಿ ಮಾಡಿದ್ದಾರೆ. ಇದೀಗ ಇದು ಇಬ್ಬರು ನಾಯಕ ಕಿತ್ತಾಟಕ್ಕೆ ಕಾರಣವಾಗಿದೆ. ಆಗಾಗಿ ಯಾರ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ನೀಡಬೇಕೆಂದು ಯಡಿಯೂರಪ್ಪಗೆ ಹೊಸ ತಲೆನೋವು ಶುರುವಾಗಿದೆ.

ಒಟ್ಟಿನಲ್ಲಿ ಬಿಎಸ್ ಯಡಿಯೂರಪ್ಪ ಅವರು ಡಿಕೆಶಿ ಮತ್ತು ಸುಧಾಕರ್ ಮಧ್ಯೆ  ಮೆಡಿಕಲ್ ಕಾಲೇಜು ಕಿಡಿ ಹೊತ್ತಿಸಿದ್ದು, ಕೊನೆ ಘಳಿಗೆಯಲ್ಲಿ ಯಾರ ಪಾಲಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.