ಬೆಂಗಳೂರು(ಫೆ. 17)  ಸಚಿವ ಸ್ಥಾನ ವಂಚಿತ 22 ಜನ ಶಾಸಕರು ರಹಸ್ಯ ಸಭೆ ಸೇರಿದ್ದಾರೆ. ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಉತ್ತರ ಕರ್ನಾಟಕದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಮೀಟಿಂಗ್ ಮಾಡಿದ್ದಾರೆ.

"

ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ರಾಜು ಗೌಡ, ಸಿ ಪಿ ಯೋಗೇಶ್ವರ್, ಅಂಗಾರ ಸಭೆಯಲ್ಲಿ ಭಾಗಿಯಾಗಿದ್ದಾರೆ. ಯಡಿಯೂರಪ್ಪ ಮಾಜಿ ಆಪ್ತ ಸಂತೋಷ ಸೇರಿ 22 ಮಂದಿ ಸಭೆಯಲ್ಲಿ ಇದ್ದರು.

ಮತ್ತೆ ಆಪರೇಶನ್ ಕಮಲ, ಸುಳಿವು ಕೊಟ್ಟ ಕಟೀಲ್

ಸುವರ್ಣ ನ್ಯೂಸ್ ಕ್ಯಾಮೆರಾ ಕಾಣುತ್ತಿದ್ದಂತೆ ಸಭೆ ಅಂತ್ಯಗೊಳಿಸಿದ ಮುಖಂಡರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಸಭೆ ಅಂತ್ಯಗೊಳಿಸಿ ಬೇರೆ ರಹಸ್ಯ ಸ್ಥಳಕ್ಕೆ ದೌಡಾಯಿಸಿದ್ದು ಕೆಲ  ಶಾಸಕರು ಶಟ್ಟರ್ ಮನೆಯಲ್ಲೇ ಉಳಿದುಕೊಂಡಿದ್ದಾರೆ.