ಬೆಂಗಳೂರು, [ಫೆ.17]: ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರುಗಳ ಸಹಾಯದಿಂದ ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೂ ಬಿಜೆಪಿ ತೆರೆಮರೆಯಲ್ಲಿ ಇನ್ನೂ ಕೂಡ ಆಪರೇಷನ್ ಕಮಲದ ಪ್ರಯತ್ನವನ್ನು ಕೈ ಬಿಟ್ಟಿಲ್ಲ.

ಇದಕ್ಕೆ ಪೂರಕವೆಂಬಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇಂದು [ಸೋಮವಾರ] ಆಪರೇಷನ್ ಕಮಲದ ಸ್ಫೋಟಕ ಸುಳಿವು ನೀಡಿದ್ದಾರೆ.

MLC ಎಲೆಕ್ಷನ್: ಬಿಜೆಪಿ 7 ಮತಗಳು ಅಸಿಂಧು , ಆದರೂ ಗೆದ್ದ ಲಕ್ಷ್ಮಣ ಸವದಿ ಹುದ್ದೆ ಗಟ್ಟಿ

ವಿಧಾನ ಪರಿಷತ್ ಚುನಾವಣೆಯಲ್ಲಿನಲ್ಲಿ ಜಿಟಿ ದೇವೇಗೌಡ ಬಿಜೆಪಿಗೆ ವೋಟ್ ಹಾಕಿದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಮುಂದೆ ನೀವೇ ಕಾದು ನೋಡಿ ರಾಜಕೀಯದಲ್ಲಿ ಏನಾಗಲಿದೆ ಎಂದು. ನಾವು ಆಪರೇಷನ್ ಕಮಲ ಮಾಡೋದಿಲ್ಲ. ನಮ್ಮ ಬಿಜೆಪಿಯ ಬಾಗಿಲು ಯಾವಾಗಲು ತೆರೆದಿರುತ್ತೆ. ಪರೋಕ್ಷವಾಗಿ ನಳಿನ್ ಕುಮಾರ್ ಕಟೀಲ್ ಮತ್ತೊಂದು ಆಪರೇಷನ್ ಕಮಲದ ಸುಳಿವು ನೀಡಿದರು.

ಜಿಟಿ ದೇವೇಗೌಡ ಸೇರಿದಂತೆ ಕೆಲ ಜೆಡಿಎಸ್ ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಕಟೀಲ್ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. 

ಇನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಮಾರ್ಗದರ್ಶಕರಾಗಿ ನೇಮಕ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೆಚ್ಚಿನ ವಯಸ್ಸಾಗಿದೆ ಎಂದು ಪತ್ರ ವ್ಯವಹಾರ ವೈರಲ್ ಆಗಿದ್ದು, ಅದು ನೀವು ಹೇಳಿದ ಬಳಿಕ ನನ್ನ ಗಮನಕ್ಕೆ ಬಂದಿದೆ. ಅದನ್ನ ನೋಡಿ ನಂತರ ದಿನಗಳಲ್ಲಿ ಮಾತಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.