ವಿಜಯಪುರ: ಬಬಲೇಶ್ವರದಲ್ಲಿ ಕಾಂಗ್ರೆಸ್- ಬಿಜೆಪಿ ಘಟಾನುಗಟಿ ನಾಯಕರ ಕಿತ್ತಾಟ..!
ಬಬಲೇಶ್ವರ ತಾಲೂಕಾ ಕಚೇರಿಯಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಹಾಗೂ ಬಿಜೆಪಿ ಮುಖಂಡ, ರಾಜ್ಯ ಬೀಜ ಹಾಗೂ ರಸಗೊಬ್ಬರ ನಿಗಮದ ಅಧ್ಯಕ್ಷ ವಿಜುಗೌಡ ಪಾಟೀಲ್ ನಡುವೆ ನಡದ ಜಟಾಪಟಿ
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ನ.09): ಚುನಾವಣೆಗಳು ಬಂದಾಗ ರಾಜಕಾರಣಿಗಳ ನಡುವೆ ಗಲಾಟೆ, ಕಿತ್ತಾಟಗಳು ಕಾಮನ್. ಆದ್ರೆ ವಿಧಾನಸಭೆ ಚುನಾವಣೆಗಳಿಗೆ ಇನ್ನು ಮೂರ್ನಾಲ್ಕು ತಿಂಗಳು ಬಾಕಿ ಇರುವಾಗಲೇ ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಕಿತ್ತಾಟಗಳು ಶುರುವಾಗಿವೆ. ಬಬಲೇಶ್ವರ ತಾಲೂಕಾ ಕಚೇರಿಯಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಹಾಗೂ ಬಿಜೆಪಿ ಮುಖಂಡ, ರಾಜ್ಯ ಬೀಜ ಹಾಗೂ ರಸಗೊಬ್ಬರ ನಿಗಮದ ಅಧ್ಯಕ್ಷ ವಿಜುಗೌಡ ಪಾಟೀಲ್ ನಡುವೆ ಜಟಾಪಟಿಯೇ ನಡೆದು ಹೋಗಿದೆ.
ಕೈ-ಬಿಜೆಪಿ ನಾಯಕರ ನಡುವೆ ವಾಗ್ವಾದ..!
ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ್ ಹಾಗೂ ಬಬಲೇಶ್ವರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಸುನೀಲ್‌ಗೌಡ ಪಾಟೀಲ್ ನಡುವೆ ಜಟಾಪಟಿಯೇ ಏರ್ಪಟ್ಟಿದೆ. ಬಬಲೇಶ್ವರ ತಾಲೂಕಾ ಕಚೇರಿಯಲ್ಲಿ ಎದುರು ಬದುರಾದ ಇಬ್ಬರು ಮುಖಂಡರ ನಡುವೆ ಕಿತ್ತಾಟವೇ ನಡೆದಿದೆ. ಇಬ್ಬರು ಮುಖಂಡರು ಪರಸ್ಪರ ನೀನಾ ನಾನಾ ಎನ್ನುವ ಮೂಲಕ ನೆರೆದಿದ್ದವರನ್ನ ದಂಗಾಗುವಂತೆ ಮಾಡಿದ್ರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಬಂದ ನಂತರ ಗೋಹತ್ಯೆ ತಡೆಗಟ್ಟಲಾಗಿದೆ: ಅರುಣ ಸಿಂಗ್
ಎಸ್ ಟಿ ಸರ್ಟಿಪಿಕೇಟ್ ನೀಡುವ ವೇಳೆ ಕಿತ್ತಾಟ..!
ರಾಜ್ಯ ಸರ್ಕಾರ ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಎಸ್ ಟಿ ಸರ್ಟಿಪಿಕೇಟ್ ನೀಡಲು ಆದೇಶ ನೀಡಿದೆ. ತಾಲೂಕಾ ಕೇಂದ್ರಗಳಲ್ಲಿ ತಳವಾರ ಪರಿವಾರ ಸಮುದಾಯದವರು ಎಸ್ ಟಿ ಸರ್ಟಿಪಿಕೇಟ್ ನೀಡ್ತಿದ್ದಾರೆ. ಬಬಲೇಶ್ವರ ತಾಲೂಕಾ ಕೇಂದ್ರದಲ್ಲು ಅರ್ಟಿಪಿಕೇಟ್ ನೀಡಲಾಗ್ತಿತ್ತು. ಈ ವೇಳೆ ಎಮ್ ಎಲ್ ಸಿ ಸುನೀಲ್‌ಗೌಡ ಪಾಟೀಲ್ ಹಾಗೂ ಬೀಜ ನಿಗದ ಅಧ್ಯಕ್ಷ ವಿಜುಗೌಡ ಪಾಟೀಲ್ ಅಲ್ಲೆ ಇದ್ದರು. ಆದರೆ ಅಚಾನಕ್ಕಾಗಿ ಅದೇನಾಯ್ತೋ ಗೊತ್ತಿಲ್ಲ. ಸುನೀಲ್ ಗೌಡ ಪಾಟೀಲ್ ಹಾಗೂ ವಿಜುಗೌಡ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಇಬ್ಬರ ನಡುವಿನ ಮಾತುಗಳು ನಾನಾ ನೀನಾ ಎನ್ನುವ ಲೆವಲ್ ಗೆ ಹೋಗಿವೆ.
ಅಸಲಿಗೆ ಕಿತ್ತಾಟಕ್ಕೆ ಕಾರಣವೇನು?
ಇನ್ನು ಅಸಲಿಗೆ ಈ ಕೈ-ಕಮಲ ನಾಯಕರ ಕಿತ್ತಾಟಕ್ಕೆ ಕಾರಣವೇನು ಅನ್ನೋದನ್ನ ನೋಡುವುದಾದ್ರೆ, ಇಂದು ವಿಜಯಪುರ ಜಿಲ್ಲಾಧಿಕಾರಿಗಳ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆಗೆ ಎನ್ನುವ ಕಾರ್ಯಕ್ರಮ ಆಯೋಜನೆಯಾಗಿತ್ತು. ಇದೆ ಕಾರ್ಯಕ್ರಮದ ನಿಮಿತ್ಯ ಜಿಲ್ಲಾಧಿಕಾರಿಗಳು ಬಬಲೇಶ್ವರ ತಾಲೂಕಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಇದೆ ವೇಳೆ ಎಸ್ ಟಿ ಸರ್ಟಿಪಿಕೇಟ್ ನೀಡುವ ವಿಚಾರವಾಗಿ ವಿಜುಗೌಡ ಪಾಟೀಲ್ ಪ್ರಸ್ತಾಪಿಸಿ, ಬಹಳಷ್ಟು ತಳವಾರ-ಪರಿವಾರ ಸಮುದಾಯದವರು ಸರ್ಟಿಪಿಕೇಟ್‌ಗಾಗಿ ತಾಲೂಕಾ ಕಚೇರಿಗೆ ಅಲೆಯುತ್ತಿದ್ದಾರೆ, ಬೇಗ ವಿತರಣೆಯಾಗಬೇಕು ಎಂದಿದ್ದಾರಂತೆ. ಈ ವೇಳೆ ಸುನಿಗೌಡ ಪಾಟೀಲ್ ಸ್ಥಳೀಯ ಶಾಸಕರ ಹಾಜರಿಯಲ್ಲಿ ನೀಡಬೇಕು. ಅದು ಪ್ರೋಟೊಕಾಲ್ ಆಗಿರುತ್ತೆ ಎಂದು ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಆಗ ವಿಜುಗೌಡ ಪಾಟೀಲ್ ಇದು ಬಿಜೆಪಿ ಸರ್ಕಾರದ ಕಾರ್ಯ ಇದಕ್ಕೇನು ಶಾಸಕರ ಅವಶ್ಯಕತೆ ಇಲ್ಲ ಅಧಿಕಾರಿಗಳೇ ಮಾಡಬೇಕು ಎಂದಾಗ ಕೊಂಚ ವಾಗ್ವಾದ ಉಂಟಾಗಿದೆ. ನಾನು ಶಾಸಕನೇ ಇದ್ದೀನಿ, ನಾನು ವಿಧಾನ ಪರಿಷತ್ ಸದಸ್ಯ ಚುನಾಯಿತ ಪ್ರತಿನಿಧಿಯೆ ಇದ್ದೀನಿ ಎಂದು ಸುನೀಲ್ ಗೌಡ ಪಾಟೀಲ್ ಹೇಳಿದ್ದಾರೆ. ಈ ವೇಳೆ ನಾನಾ ನೀನಾ ಎನ್ನುವ ರೀತಿಯಲ್ಲಿ ಮಾತುಗಳು ಮುಂದವರೆದು ಗಲಾಟೆಗೆ ಕಾರಣವಾಗಿದೆ ಎನ್ನಲಾಗಿದೆ..
ಮೊಬೈಲ್ ನಲ್ಲಿ ಸೆರೆಯಾಗಿ ವೈರಲ್ ಆದ ವಿಡಿಯೋಗಳು...!
ಇಬ್ಬರು ನಾಯಕರು ವಾಗ್ವಾದದ ದೃಶ್ಯಾವಳಿಗಳನ್ನ ಅಲ್ಲಿದ್ದ ಕಾರ್ಯಕರ್ತರು ಸೆರೆ ಹಿಡಿದಿದ್ದಾರೆ. ನೋಡ ನೋಡ್ತಿದ್ದಂತೆ ವಾಟ್ಸಾಪ್ ಗಳಲ್ಲಿ ಹರಿದಾಡುವ ಮೂಲಕ ವಿಡಿಯೋಗಳು ವೈರಲ್ ಆಗಿವೆ. ಜಿಲ್ಲೆಯ ಎಲ್ಲರ ಮೊಬೈಲ್ ನಲ್ಲಿ ವಿಡಿಯೋ ರಾರಾಜಿಸಿವೆ. ಇನ್ನು ಕಾಂಗ್ರೆಸ್ ಕಾರ್ಯಕರ್ತರು ಇದು ಸುನೀಲ್‌ಗೌಡರ ತಾಕತ್ತು, ಗೈರತ್ತು ಅಂತೆಲ್ಲ ವಿಡಿಯೋಗಳನ್ನ ಪೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ..
'ಬಿಜೆಪಿ ಬಿರುಗಾಳಿಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದೆ'
ಇಬ್ಬರು ನಾಯಕರನ್ನ ಸಮಾಧಾನ ಪಡೆಸಿದ ಡಿಸಿ..!
ಇನ್ನು ವಾಗ್ವಾದ ಜೋರಾಗಿ ನಾನು ಜನಪ್ರತಿನಿಧೀ.. ಇತ್ತ ನನಗು ಸರ್ಕಾರ ಅಧಿಕಾರ ನೀಡಿದೆ ಎಂದು ಉಭಯ ನಾಯಕರು ಕಿತ್ತಾಡುತ್ತಿದ್ದರೆ, ಅಲ್ಲೆ ಇದ್ದ ಡಿಸಿ ಕೆಲಕ್ಷಣ ಮೂಕಪ್ರೇಕ್ಷಕರಾಗಬೇಕಾಯ್ತು. ಬಳಿಕ ಅಲ್ಲೆ ಇದ್ದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಇಬ್ಬರು ನಾಯಕರನ್ನ ಸಮಾಧಾನ ಪಡೆಸಿ ಅಲ್ಲಿಂದ ಕಳುಹಿಸಿದ್ದಾರೆ.
ಎಸ್ ಟಿ ಸರ್ಟಿಪಿಕೇಟ್ ವಿತರಣೆಗೆ ಬೇಕಾ ಪ್ರೋಟೊಕಾಲ್?
ಇನ್ನು ಎಸ್ ಟಿ ಸರ್ಟಿಪಿಕೇಟ್ ವಿತರಣೆಗೆ ಪ್ರೋಟೋಕಾಲ್ ಇದೆಯಾ? ಅಥವಾ ಪ್ರೋಟೋಕಾಲ್ ಬೇಕಾ? ಎನ್ನುವ ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆಯೂ ಜಿಲ್ಲಾಧಿಕಾರಿಗಳು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ತಳವಾರ-ಪರಿವಾರ ಸಮುದಾಯಕ್ಕೆ ಎಸ್ ಟಿ ಸರ್ಟಿಪಿಕೇಟ್ ನೀಡಲು ಪ್ರೋಟೊಕಾಲ್ ಇದೆಯಾ? ಸ್ಥಳೀಯ ಶಾಸಕರು ಅಥವಾ ಜನಪ್ರತಿನಿಧಿಗಳಿಂದ ಸರ್ಟಿಪಿಕೇಟ್ ಕೊಡಿಸಬೇಕಾ ಎನ್ನುವ ಅನೇಕ ಗೊಂದಲಗಳು ಈ ಗಲಾಟೆಯ ಮೂಲಕ ಸೃಷ್ಟಿಯಾಗಿವೆ. ಹೀಗಾಗಿ ಜಿಲ್ಲಾಧಿಕಾರಿಗಳು ಬೆಂಗಳೂರಿನ ಹಿರಿಯ ಅಧಿಕಾರಿಗಳನ್ನ ಸಂಪರ್ಕಿಸಿ ಮಾಹಿತಿಗಳನ್ನ ಪಡೆದುಕೊಳ್ತಿದ್ದಾರೆ ಎನ್ನುವ ಮಾಹಿತಿಗಳು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿವೆ.