Asianet Suvarna News Asianet Suvarna News

ಧಾರವಾಡ ಪಾಲಿಕೆ ಆವರಣದಲ್ಲಿ ಭರ್ಜರಿ ಬಾಡೂಟ: ಕಚೇರಿ ಉದ್ಘಾಟನೆಗೆ ಅಡುಗೆ

ಪಾಲಿಕೆ ವಿಪಕ್ಷ‌ ನಾಯಕರ ಕಚೇರಿ ಉದ್ಘಾಟನೆ ಹೆಸರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿಯೇ ಭರ್ಜರಿ ಬಾಡೂಟ ಸಿದ್ದಪಡಿಸಿರುವುದು ಅವಳಿ‌ನಗರದ ಜನರ ಕೆಂಗಣ್ಣಿಗೆ ಗುರಿಯಾಗಿದೆ.  ಪಾಲಿಕೆ ಆವರಣದಲ್ಲಿ ಭರ್ಜರಿ ಬಾಡೂಟ ಬಡಿಸಲು ಕಾಂಗ್ರೆಸ್ ಕಾರ್ಪೋರೆಟರ್ ಗಳು ಸಿದ್ದರಾಗಿದ್ದು ಇದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ.

Bharjari Baduta in Dharwad Corporation premises Cooking for office inauguration
Author
First Published Nov 29, 2022, 4:44 PM IST

ಹುಬ್ಬಳ್ಳಿ (ನ.29): ಪಾಲಿಕೆ ವಿಪಕ್ಷ‌ ನಾಯಕರ ಕಚೇರಿ ಉದ್ಘಾಟನೆ ಹೆಸರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿಯೇ ಭರ್ಜರಿ ಬಾಡೂಟ ಸಿದ್ದಪಡಿಸಿರುವುದು ಅವಳಿ‌ನಗರದ ಜನರ ಕೆಂಗಣ್ಣಿಗೆ ಗುರಿಯಾಗಿದೆ.  ಪಾಲಿಕೆ ಆವರಣದಲ್ಲಿ ಭರ್ಜರಿ ಬಾಡೂಟ ಬಡಿಸಲು ಕಾಂಗ್ರೆಸ್ ಕಾರ್ಪೋರೆಟರ್ ಗಳು ಸಿದ್ದರಾಗಿದ್ದು ಇದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ.

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿನ ರಸ್ತೆಗಳು ಹದಗೆಟ್ಟಿವೆ. ಗುಂಡಿಬಿದ್ದ ರಸ್ತೆಗಳು ದುರಸ್ಥಿಗೆ ಕಾಣದ ನಗರದ ತುಂಬೆಲ್ಲ ದೂಳು ಹರಡುತ್ತಿದೆ. ಇದರ ಮಧ್ಯೆ  ವಿರೋಧ ಪಕ್ಷದ ನಾಯಕರ ಕಚೇರಿ ಉದ್ಘಾಟನೆ ಹೆಸರಲ್ಲಿ ಮಹಾನಗರ ಪಾಲಿಕೆ ಆವರಣದಲ್ಲಿಯೇ ಭರ್ಜರಿ ಬಾಡೂಟಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಪಾಲಿಕೆ  ವಿರೋಧ ಪಕ್ಷದ ನಾಯಕ ದೊರೈರಾಜ ಮಣಿಕುಂಟ್ಲ ಕಚೇರಿ ನವಿಕರಣಗೊಂಡಿದ್ದು ಇದರ ಉದ್ಘಾಟನೆ ಹಿನ್ನಲೆ ಭರ್ಜರಿ ಬಾಡೂಟ ಆಯೋಜಿಸಲಾಗಿದೆ.

Ramanagara: ಕಾಂಗ್ರೆಸ್ ನಗರಸಭೆ ಸದಸ್ಯನ ಬರ್ತಡೇ ಪಾರ್ಟಿಯಲ್ಲಿ ನಂಗನಾಚ್

ವಿಪಕ್ಷ ನಾಯಕರ ಹೊಸ ಕಚೇರಿ ಉದ್ಘಾಟನೆ: ಹೊಸ ಕಚೇರಿ ಉದ್ಘಾಟನೆ ಹಿನ್ನಲೆ ಭರ್ಜರಿ ಬಾಡೂಟ ಆಯೋಜನೆ ಮಾಡಿದ ಮಣಿಕುಂಟ್ಲ, ಎರಡುವರೆ ಕ್ವಿಂಟಾಲ್ ಮಟನ್ ಬಿರಿಯಾನಿ, 50 ಕೆ.ಜಿ ಚಿಕನ್ ಕಬಾಬ್ ಮಾಡಿಸಿದ್ದಾರೆ. ಕಚೇರಿ ಉದ್ಘಾಟನೆ ಹಿನ್ನಲೆ ಪಾಲಿಕೆ ಆವರಣದಲ್ಲಿ ಭರ್ಜರಿ ಬಾಡೂಟ ತಯಾರಿ ನಡೆಸಿದ್ದು, ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದೆ. ಪಾಲಿಕೆ ಆವರಣದಲ್ಲಿಯೇ ಮಟನ್ ಬಿರಿಯಾನಿ,ಚಿಕನ್ ಕಬಾಬ್ ಮಾಡಿಸಿದ ದೊರೈರಾಜ ಮಣಿಕುಂಟ್ಲ ನಡೆಗೆ ಆಕ್ಷೇಪ ವ್ಯಕ್ತವಾಗುತ್ತಿದೆ.

ಆಡಳಿತ ಪಕ್ಷಕ್ಕೆ ಟೀಕಾಸ್ತ್ರ ಲಭ್ಯ: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಮೇಲೆ ಟೀಕೆಗಳ ಸುರಿಮಳೆಗೈಯಲು ಆಡಳಿತ ಪಕ್ಷದ ನಾಯಕರಿಗೆ ಅಸ್ತ್ರ ಸಿಕ್ಕಂತಾಗಿದೆ. ಈಗ ಭರ್ಜರಿ ಬಾಡೂಟ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮತ್ತು ಪೋಟೋಗಳು ವೈರಲ್‌ ಆಗಿದ್ದು, ಜನಪ್ರತನಿಧಿಗಳ ಈ ಹುಚ್ಚಾಟಕ್ಕೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಾದರೂ ಈ ಬಗ್ಗೆ ಜನಪ್ರತನಿಧಿಗಳು ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯವಾಗಿದೆ.

ಬಿಬಿಎಂಪಿ ಚುನಾವಣೆಗೆ ಮತ್ತೆ 3 ತಿಂಗಳು ಸಮಯ ಕೇಳಿದ ಸರ್ಕಾರ

ನಂಗಾನಾಚ್ ಮಾಡಿಸಿದ್ದ ನಗರಸಭೆ ಸದಸ್ಯರು: ಇತ್ತೀಚೆಗೆ ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆಯ ಸದಸ್ಯರೊಬ್ಬರ ಜನ್ಮದಿನಾಚರಣೆ ಅಂಗವಾಗಿ ಖಾಸಗಿ ಕಲ್ಯಾಣಮಂಟಪದಲ್ಲಿ ನಂಗಾನಾಚ್‌ ನೃತ್ಯವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಅರೆಬಟ್ಟೆಯನ್ನು ತೊಟ್ಟು ನೃತ್ಯ ಮಾಡುತ್ತಿದ್ದ ಯುವತಿಯರ ಮೇಲೆ ಹಣವನ್ನು ಎರಚಿ ಕೆಲವರು ವಿಕೃತಿ ಮೆರೆದಿದ್ದರು. ಜತೆಗೆ, ಈ ವೇಳೆ ಕಾರ್ಯಕ್ರಮದಲ್ಲಿ ನೃತ್ಯಗಾರ್ತಿಯರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಯುವಕನಿಗೆ ಚಾಕು ಇರಿದ ಪ್ರಕರಣವೂ ವ್ಯಕ್ತವಾಗಿತ್ತು. ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಮೈಮರೆಯದೆ ನಡೆದುಕೊಳ್ಳುವುದು ಸಾರ್ವಜನಿಕರ ದೃಷ್ಟಿಯಿಂದ ಒಳ್ಳೆಯದಾಗುತ್ತದೆ.

Follow Us:
Download App:
  • android
  • ios