ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹುಯಿಲಾಳು ಗ್ರಾಮದ ಮುಖಂಡರು ಕಾಂಗ್ರೆಸ್‌ ತೊರೆದು ಜೆಡಿಎಸ್‌ ಪಕ್ಷಕ್ಕೆ ಸೇರಿದರು. ಇವರನ್ನು ಶಾಸಕ ಜಿ.ಟಿ. ದೇವೇಗೌಡ ಪಕ್ಷಕ್ಕೆ ಸ್ವಾಗತಿಸಿದರು.

ಮೈಸೂರು : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹುಯಿಲಾಳು ಗ್ರಾಮದ ಮುಖಂಡರು ಕಾಂಗ್ರೆಸ್‌ ತೊರೆದು ಜೆಡಿಎಸ್‌ ಪಕ್ಷಕ್ಕೆ ಸೇರಿದರು. ಇವರನ್ನು ಶಾಸಕ ಜಿ.ಟಿ. ದೇವೇಗೌಡ ಪಕ್ಷಕ್ಕೆ ಸ್ವಾಗತಿಸಿದರು.

ಹುಯಿಲಾಳು ಗ್ರಾಮದ ಹಾಲಿ ಗ್ರಾಪಂ ಸದಸ್ಯರಾದ ಮಮತಾ ಕುಮಾರ್‌, ಶ್ರೀಧರ್‌, ಶ್ರುತಿ ಮಂಜುನಾಥ್‌, ಮಾಜಿ ಸದಸ್ಯ ಮಂಜುನಾಥ್‌, ಯಜಮಾನರಾದ ದೊಡ್ಡಪ್ಪೆಗೌಡ, ಜಂಜಯ್ಯನ ಪಾಪಣ್ಣ, ಶನಿದೇವರ ಗುಡ್ಡಪ್ಪ ಲೋಕೇಶ್‌, ಮುಖಂಡರಾದ ಕುರಂಬಯ್ಯನ ಮಾಲೇಗೌಡ, ರಾಮಣ್ಣ, ಮಲ್ಲಿಕಾ, ಜವರೇಗೌಡ, ಶಿವರಾಜ್‌, ಲಕ್ಷ್ಮಣ, ಸಿದ್ದರಾಮ, ಶಿವಣ್ಣ, ಶಿವರಾಜು, ಸಿದ್ದಪ್ಪ, ಸಿದ್ದೇಗೌಡ, ಸಿದ್ದರಾಮೇಗೌಡ, ಚಿಕ್ಕಹುಯಿಲಾಳು ಉಮೇಶ್‌ ಅವರು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ತಾಪಂ ಮಾಜಿ ಸದಸ್ಯ ಮಹದೇವ್‌, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲೇಶ್‌, ಮಾಜಿ ಸದಸ್ಯ ಕತ್ವಪ್ಪ ಶಿವಣ್ಣ, ಮುಖಂಡರಾದ ಪ್ರಸನ್ನ, ಕುರಿಚಿಕ್ಕಣ್ಣ ಕುಮಾರ್‌, ಸ್ವಾಮಿ ಶಿವರಾಮ್‌ , ಶಿವಣ್ಣ, ಸೀತಾರಾಮ್‌ ಮೊದಲಾದವರು ಇದ್ದರು.
ಮುಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

ಶಿರಾ (ಏ.14): ರೈತ ಮತ್ತು ಜನಪರ ಆಡಳಿತ ನೀಡಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 2023ರ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. ಜೆಡಿಎಸ್‌ ಕಾರ್ಯಕರ್ತರು ಕ್ರಿಯಾಶೀಲರಾಗಿ ಸಂಘಟಿತರಾಗಿ ಕೆಲಸ ಮಾಡಬೇಕಿದೆ. ಕಾರ್ಯಕರ್ತರೇ ಜೆಡಿಎಸ್‌ ಪಕ್ಷದ ಶಕ್ತಿ ಎಂದು ಜೆಡಿಎಸ್‌ ಅಭ್ಯರ್ಥಿ ಆರ್‌.ಉಗ್ರೇಶ್‌ ಹೇಳಿದರು.

ತಾಲೂಕಿನ ಮದಲೂರು ಗ್ರಾಮದಲ್ಲಿ ನಡೆದ ಹೊನ್ನಗೊಂಡನಹಳ್ಳಿ, ಕೊಟ್ಟ, ಮದಲೂರು, ಮೇಲ್ಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಜೆಡಿಎಸ್‌ ಸರಕಾರ ಸ್ಥಾಪನೆಯಾದ 24 ಗಂಟೆಗಳಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಆಗಲಿದೆ. ಶಿರಾ ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ರೈತನಿಗೆ ಜೆಡಿಎಸ್‌ ಪಕ್ಷ ಟಿಕೆಟ್‌ ನೀಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಬಲಾಢ್ಯ ಅಭ್ಯರ್ಥಿಗಳ ಮುಂದೆ ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಸಾಮಾನ್ಯ ಕುಟುಂಬದ ವ್ಯಕ್ತಿ ಆರ್‌. ಉಗ್ರೇಶ್‌ಗೆ ಮತ ನೀಡಿ ಗೆಲ್ಲಿಸುವ ಮೂಲಕ ಜನಬಲವೇ ಅಂತಿಮ ಎಂದು ಸಾಬೀತುಪಡಿಸಬೇಕು ಎಂದರು.

ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌. ಗೌಡ ಮಾತನಾಡಿ, ಶಿರಾ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷಕ್ಕೆ ಹೆಚ್ಚು ಜನಬೆಂಬಲ ವ್ಯಕ್ತವಾಗುತ್ತಿದ್ದು, ಜೆಡಿಎಸ್‌ ಪಕ್ಷದ ಸಾಮಾನ್ಯ ಅಭ್ಯರ್ಥಿಯ ಪರ ಅಲೆ ಎದ್ದಿದೆ. ಪಂಚರತ್ನ ಯೋಜನೆಯಡಿ ಜನಪರ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ರವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆದು ಜನಸಾಮಾನ್ಯರ ಕಷ್ಟಅರಿತು ಆಡಳಿತ ನೀಡುವ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಬೇಕು ಮನವಿ ಮಾಡಿದರು.

ಈ ಬಾರಿ ಬಿಜೆಪಿ 140 ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು: ಸಚಿವ ಎಸ್‌.ಟಿ.ಸೋಮಶೇಖರ್‌

ಸಮಾವೇಶದಲ್ಲಿ ಜೆಡಿಎಸ್‌ ಮುಖಂಡ ಕಲ್ಕೆರೆ ರವಿಕುಮಾರ್‌, ಪಿಎಲ್‌ಡಿ ಬ್ಯಾಂಕ್‌, ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್‌, ಹೊನ್ನೇನಹಳ್ಳಿ ನಾಗರಾಜು, ಮಾಜಿ ನಗರಸಭೆ ಸದಸ್ಯ ರಾಘವೇಂದ್ರ, ಹುಂಜಿನಾಳ ರಾಜಣ್ಣ, ಪರಮೇಶ್‌ ಗೌಡ, ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ಟಿ.ಡಿ. ನರಸಿಂಹಮೂರ್ತಿ, ಲಿಂಗದಹಳ್ಳಿ ಚೇತನ್‌ ಕುಮಾರ್‌, ಉದಯಕುಮಾರ್‌, ಗಿರೀಶ್‌, ಅಶೋಕ್‌, ಚಿಕ್ಕಿರಪ್ಪ ,ಹುಳಿಗೆರೆ ಚಂದ್ರಣ್ಣ, ದೊಡ್ಡಿರಪ್ಪ, ರೇಣುಕಮ್ಮ, ಈರಣ್ಣ, ಧರಣೇಶ್‌ ಸೇರಿದಂತೆ ಹಲವರು ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.