Asianet Suvarna News Asianet Suvarna News

Bengaluru-Mysuru expressway: ಈಗಾಗ್ಲೆ ಕಿತ್ತೋಗಿದೆ ; ಇದು 40 % ಅಲ್ಲ, 60 % : ಬಿಕೆ ಹರಿಪ್ರಸಾದ್

ಮೈಸೂರು-ಬೆಂಗಳೂರು ಹೆದ್ದಾರಿ ವಿಷಯವಾಗಿ ಕ್ರೆಡಿಟ್ ವಾರ್ ನಂತ್ರ ಕಾಮಗಾರಿ ಸರಿಯಾಗಿ ಆಗಿಲ್ಲ.. ಉದ್ಘಾಟನೆಯಾಗಿ ಕೆಲವೇ ದಿನದಲ್ಲಿ‌ ರಸ್ತೆ ಕಿತ್ತೋಗಿದೆ. ಇದು 40 % ಅಲ್ಲ, 60 %  ಲೂಟಿ ಎಂದು ಬಿಕೆ ಹರಿಪ್ರಸಾದ ಆರೋಪಿಸಿದರು.

Bengaluru mysuru expressway poor work  Its not 40% its 60% bk hariprada rav
Author
First Published Mar 16, 2023, 2:59 PM IST

ಗದಗ (ಮಾ.16): ಮೈಸೂರು-ಬೆಂಗಳೂರು ಹೆದ್ದಾರಿ(Bengaluru-mysuru expressway) ವಿಷಯವಾಗಿ ಕ್ರೆಡಿಟ್ ವಾರ್ ನಂತ್ರ ಕಾಮಗಾರಿ ಸರಿಯಾಗಿ ಆಗಿಲ್ಲ.. ಉದ್ಘಾಟನೆಯಾಗಿ ಕೆಲವೇ ದಿನದಲ್ಲಿ‌ ರಸ್ತೆ ಕಿತ್ತೋಗಿದೆ ಅನ್ನೋ ಆರೋಪ ಕೇಳಿ ಬರ್ತಿದೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟರ್ ನಲ್ಲಿ ಸ್ಪಷ್ಟನೆ ನೀಡಿ, ಸಣ್ಣ ಲೋಪ ಆಗಿದೆ ಸರಿ ಪಡಸ್ತೀವಿ ಅಂತಾ ಸ್ಪಷ್ಟನೆ ನೀಡಿದ್ರು.. ಈ ಮಧ್ಯೆ ಗದಗನಲ್ಲಿ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್(BK Hariprasad, ಟೋಲ್ ವಿಚಾರವಾಗಿ ರಾಜಕೀಯ ಮಾಡ್ತಿಲ್ಲ.. ಪಿಎಂ ಉದ್ಘಾಟನೆ(PM Narendra Modi inauguration) ಮಾಡಿದ ಕೆಲವೇ ದಿನದಲ್ಲಿ ರಸ್ತೆ ಕಿತ್ಕೊಂಡು ಹೋಗಿದೆ.. ಹೀಗಾಗಿ ಇದು 40 ಪರ್ಸೆಂಟ್ ಅಲ್ಲ; 60 ಪರ್ಸೆಂಟ್ ಆಗಿದ್ದು ಅಂತಾ ಆರೋಪಿಸಿದರು.

ಕರ್ನಾಟಕದ ಹಣ ಎಷ್ಟು ಲೂಟಿ ಮಾಡೋದಕ್ಕೆ ಆಗುತ್ತೋ ಅಷ್ಟು ಲೂಟಿ ಮಾಡೋದಕ್ಕೆ ಬಿಜೆಪಿ ಮುಂದಾಗಿದೆ. ನರೇಂದ್ರ ಮೋದಿಯವರೂ ಅದಕ್ಕೆ ಪ್ರೋತ್ಸಾಹ ಕೊಟ್ಟಿದ್ದಾರೆ ಅಂತಾ ಹರಿಹಾಯ್ದರು. 'ನಾ ಖಾವೂಂಗಾ.. ಖಾನೇದೂಂಗಾ' ಅಂತಿದ್ದವರು ಯೆಥೇಚ್ಛವಾಗಿ ಲೂಟಿಮಾಡಿದ್ದಾರೆ.

 

ಬಿಜೆಪಿಯ ವಿಜಯೋತ್ಸವಕ್ಕೆ ಭ್ರಷ್ಟೋತ್ಸವ ಸೂಕ್ತವಾದ ಹೆಸರು: ಹರಿಪ್ರಸಾದ್‌ ಟೀಕೆ

ವಿರೂಪಾಕ್ಷಪ್ಪ ಮಾಡಾಳ್ ಅಲ್ಲ, ಭ್ರಷ್ಟಾಚಾರದ ಮಾಡೆಲ್:

ವಿರೂಪಾಕ್ಷಪ್ಪ ಮಾಡಾಳ್ ಅಲ್ಲ ಅವ್ರು ಭ್ರಷ್ಟಾಚಾರದ ಮಾಡೆಲ್. ಭಾರತೀಯ ಜನತಾ ಪಾರ್ಟಿಯ(BJP)ಮಾಡೆಲ್ ಭ್ರಷ್ಟಾಚಾರ ಅಂತಾ ವ್ಯಂಗ್ಯವಾಡಿದ್ರು.. 

15 ಶಾಸಕರಿಗೆ ಟಿಕೆಟ್ ಕೊಡಬೇಡಿ ಅಂತಾ ಹೇಳಿಲ್ಲ‌.. ಎಲ್ಲವೂ ಊಹಾಪೋಹ:

ಕಾಂಗ್ರೆಸ್ ಹಿರಿಯ ನಾಯಕರು ಖರ್ಗೆ(Mallikarjuna kharge)ಯವರನ್ನ ಭೇಟಿಯಾಗಿ 15 ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಬೇಡ ಅಂತಾ ಅಂತಾ ಕೇಳಿದ್ದಾರಂತೆ ಎಂಬ ಪ್ರಶ್ನೆಗೆ ಉತ್ತರಿಸಿ, ಬಿಜೆಪಿ ಮಾಡಿದಂಗೆ ಮಾಡ್ಬೇಕು ಅಂತೇನಿಲ್ಲ..ಕಾಂಗ್ರೆಸ್(Congress) ಮಾಡಿದ ಕೆಲಸ ಕಾಪಿ ಮಾಡಿ ಅವ್ರು ಲೇಬಲ್ ಹಾಕಿದ್ದಾರೆ. ಎಚ್ ಕೆ ಪಾಟೀಲ, ಮುನಿಯಪ್ಪ, ದಿನೇಶ್ ಅವರು ಖರ್ಗೆಯವರನ್ನ ಭೇಟಿಯಾಗಿದ್ದಾರೆ.. ಕಾಂಗ್ರೆಸ್ ನಲ್ಲಿ ಎಲ್ಲರಿಗೂ ಅವಕಾಸ ಮಾಡಿಕೊಡಿ ಅಂತಾ ಹೇಳಿದ್ದಾರೆ, ಅದ್ರಲ್ಲಿ ತಪ್ಪಿಲ್ಲ.. ಕಾಂಗ್ರೆಸ್ ನಲ್ಲಿ ಜಾತಿ, ಧರ್ಮ ಅಂತಾ ಹೋಗಲ್ಲ.. ಎಲ್ಲರಿಗೂ ಸರಿ ಸಮಾನವಾಗಿ ಪ್ರಾತಿನಿಧ್ಯ ಸಿಗುತ್ತೆ ಅಂತಾ ಹೇಳಿದ್ರು..

ಅತಿವೃಷ್ಟಿ, ಅನಾವೃಷ್ಟಿ ಆದಾಗ ಮೋದಿ ಯಾಕೆ ಬರಲಿಲ್ಲ?

ನರೇಂದ್ರ ಮೋದಿಯವರು ಕೋವಿಡ್ ಸಂದರ್ಭದಲ್ಲಿ ರಾಜ್ಯಕ್ಕೆ ಬರಲಿಲ್ಲ..ಅತೀವೃಷ್ಟಿ ಅನಾವೃಷ್ಟಿ ಕಾಲದಲ್ಲಿ ರಾಜ್ಯಕ್ಕೆ ಬರಲಿಲ್ಲ.. ಅನುದಾನ ಕೊಡಲಿಲ್ಲ.. ಚುನಾವಣೆ ಸಂದರ್ಭದಲ್ಲಿ‌ ಮತಬೇಟೆಗೆ ವಿಶ್ವಗುರು, ಜೆಪಿ ನಡ್ಡಾ ಅವರು ಬರುತ್ತಿದ್ದಾರೆ ಅಂತಾ ಟೀಕಿಸಿದ್ರು.. 

ಕರ್ನಾಟಕದ ಗಡಿ ಭಾಗದ ಗ್ರಾಮಗಳಿಗೆ ಮಹರಾಷ್ಟ್ರ ಆರೋಗ್ಯ ಯೋಜನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇದು ರಾಷ್ಟ್ರದ ಒಕ್ಕೂಟ ವ್ಯವಸ್ಥೆಯ ವಿರುದ್ಧ.. ಇದು ಆಗ್ಬಾರ್ದು.. ತೀವ್ರವಾಗಿ ಖಂಡಿಸುತ್ತೇವೆ.. ಬೇರೆ ರಾಜ್ಯದವರು ರಾಜ್ಯಕ್ಕೆ ಅನುದಾನ ಕೊಡೋದಕ್ಕೆ ಆಗಲ್ಲ. ಸಂವಿಧಾನ ವಿರೋಧಿ ಚಟುವಟಿಕೆ.. ಯೋಜನೆ ಮಾಡಿದ ಮಹಾರಾಷ್ಟ್ರ ಸರ್ಕಾರವನ್ನು ಬರ್ಖಾಸ್ತು ಮಾಡ್ಬೇಕು ಅಂತಾ ಆಗ್ರಹಿಸಿದ್ರು.. 

 

ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ವೈಭವೀಕರಣ ಮಾಡುತ್ತಿದೆ: ಬಿ ಕೆ ಹರಿಪ್ರಸಾದ್ ಲೇವಡಿ

ಸೋಮಣ್ಣ ಬರಬಹುದಾ ಅನ್ನೋ ಪ್ರಶ್ನೆಗೆ, ಬರ್ತಾರಾ ನೋಡೋಣ.. ಕಾದು ನೋಡೋಣ.. ಯಾರೂ ಬೇಕಾದ್ರೂ ಕಾಂಗ್ರೆಸ್ ಸಿದ್ಧಾಂತ, ನಾಯಕತ್ವ ಒಪ್ಪಿ ಬರಬಹುದು ಅಂದ್ರು..  

ಲಂಡನ್ ನಲ್ಲಿ ರಾಹುಲ್ ಗಾಂಧಿ(Rahul gandhi) ಅವರ ಹೇಳಿರುವ ಹೇಳಿಕೆ  ಸಮರ್ಥನೆ ಮಾಡಿಕೊಂಡ ಹರಿಪ್ರಸಾದ್, ನರೇಂದ್ರ ಮೋದಿಯವರು ಚೈನಾ, ಕೋರಿಯಾ ಹೋದಾಗ 2014 ರ ಮೊದ್ಲು ಹುಟ್ಟಿದವರು ಪಾಪ ಮಾಡಿದ್ದಾರೆ ಅಂತಾ ಹೇಳಿದ್ರು.. ರಾಷ್ಟ್ರ ದ್ರೋಹದ ಕೆಲಸ ಅವರು ಮಾಡಿದ್ದಾರೆ.. ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ ಅಂತಾ ಹೇಳಿದ್ದು.. ಅವರ ಹೇಳಿಕೆಯಲ್ಲಿ ಏನೂ ತಪ್ಪಿಲ್ಲ.. ನರೇಂದ್ರ ಮೋದಿಯವರು ಎಲ್ಲ ಸಂಸ್ಥೆಯ ಗಂಟಲು ಹಿಸುಕಿದ್ದಾರೆ.. ರಾಹುಲ್ ಗಾಂಧಿಯವರು ಹೇಳಿದ್ದು ಸರಿ ಇದೆ ಅಂತಾ ಸಮರ್ಥಿಸಿಕೊಂಡರು..

Follow Us:
Download App:
  • android
  • ios