ಶಾಸಕ ಮುನಿರತ್ನ ಅವರು ಹನಿಟ್ರ್ಯಾಪ್ ಮಾಡುವುದಕ್ಕಾಗಿಯೇ ಸ್ಟೂಡಿಯೋ ಇಟ್ಟುಕೊಂಡಿದ್ದಾರೆ ಎಂದು ಬಿಬಿಎಂಪಿ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ಜು.24): ಶಾಸಕ ಮುನಿರತ್ನ ಅವರು ಹನಿಟ್ರ್ಯಾಪ್ ಮಾಡುವುದಕ್ಕಾಗಿಯೇ ಸ್ಟೂಡಿಯೋ ಇಟ್ಟುಕೊಂಡಿದ್ದಾರೆ ಎಂದು ಬಿಬಿಎಂಪಿ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ಆರ್.ಆರ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಮಾತನಾಡಿದ ವೇಲು ನಾಯ್ಕರ್, ಮಾಜಿ ಸಚಿವ ಮುನಿರತ್ನ ಅವರ ಜೊತೆಯಲ್ಲಿದ್ದ ಮಾಜಿ ಕಾರ್ಪೋರೇಟರ್‌ಗಳು ಹನಿಟ್ರ್ಯಾಪ್ ಮಾಡುತ್ತಿದ್ದರು. ಸಚಿವರಾಗಿದ್ದ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು. ನಾವು ಮುನಿರತ್ನ ಅವರಿಗೆ ಚುನಾವಣೆ ಎದುರಿಸೋದು ಹೇಗೆ ಎಂದು ಕೇಳಿದೆವು.ಅದಕ್ಕೆ ಮುನಿರತ್ನ ನಿಮ್ಮಗಳದ್ದು ಈಸ್ಟ್ ಮನ್ ಕಲರ್ ಪಿಚ್ಚರ್ ಇದೆ ತೋರಿಸ್ಲಾ ಇಲ್ಲ ಕೆಲಸ ಮಾಡ್ತಿರಾ ಅಂತ ಹೆದರಿಸುತ್ತಿದ್ದರು. ಹನಿಟ್ರ್ಯಾಪ್ ಮಾಡುವುದಕ್ಕೆಂದೇ ಮುನಿರತ್ನ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಕರೆಸೋದು ಹನಿಟ್ರ್ಯಾಪ್ ಮಾಡೋದು ಹೆದರಿಸೋದು ಇದೇ ಅವರ ಕೆಲಸ ಎಂದು ಆರೋಪ ಮಾಡಿದ್ದಾರೆ.
Breaking: ಕಾಂಗ್ರೆಸ್ ಸರ್ಕಾರ ಬೀಳಿಸಲು ವಿದೇಶದಲ್ಲಿ ಷಡ್ಯಂತ್ರ; ಡಿಸಿಎಂ ಡಿ.ಕೆ. ಶಿವಕುಮಾರ್
ಮುನಿರತ್ನ ಅವರು ಮಾಡಿದ ಮೊದಲ ಚಿತ್ರ ಆಂಟಿ ಪ್ರೀತ್ಸೆ. ಹೀಗಾಗಿ ಅವರು ಸಚಿವರಾದ ಮೇಲೂ ವಿಕಾಸಸೌಧ ಮತ್ತು ವಿಧಾನಸೌಧ ಚೇಂಬರ್ ನಲ್ಲೆಲ್ಲ ಬರೀ ಆಂಟಿಯರೇ ಇರುತ್ತಿದ್ದರು. ಜೆಪಿ ಪಾರ್ಕ್‌ನಲ್ಲಿ ಸ್ಟುಡಿಯೋ ಇದೆ. ಡಾಲರ್ಸ್ ಕಾಲೊನಿಯಲ್ಲೊಂದು ಸ್ಟುಡಿಯೋ ಇದೆ. ಸಿನಿಮಾ ಪ್ರೊಡ್ಯುಸರ್ ಅಲ್ವಾ ಹಂಗಾಗಿ ಹನಿಟ್ರ್ಯಾಪ್ ಮಾಡೋದು ಹೆದರಿಸೋದು ಎಂದು ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಭಾಷಣದ ವೇಳೆ ಆರೋಪ ಮಾಡಿದ್ದಾರೆ. ಈ ವೇಳೆ ಸಂಸದ ಡಿಕೆ ಸುರೇಶ್, ಆರ್ ಆರ್ ನಗರ ಕೈ ಅಭ್ಯರ್ಥಿ ಕುಸುಮಾ ಹನುಮಂತ ರಾಯಪ್ಪ ಅವರೂ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಅವರು, ನನ್ನದು ಮುನಿರತ್ನ ಒಡನಾಟ 15 ವರ್ಷ ಹಳೆಯದ್ದು, ರಾಜಕೀಯದ ಹೊರತಾಗಿಯೂ ಒಳ್ಳೆಯ ಗೆಳತನ ಇತ್ತು. ಆದರೆ ಕಳೆದ ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದರು. ಈ ವೇಳೆ ನಮ್ಮ ವಾರ್ಡ್ ನ ಕೆಲಸ ಕಾರ್ಯಗಳು ನಡೆಯುತ್ತಿರಲಿಲ್ಲ. ವಿಧಾನಸೌಧದಲ್ಲಿ ಹೊಸ ಮುಖಗಳು ಕೂತಿತ್ತು, ನಮ್ಮನ್ನು ಕಾಯಿಸುತ್ತಿದ್ದರು ಎಂದು ಮತ್ತೊಂದು ಆರೋಪವನ್ನೂ ಮಾಡಿದ್ದಾರೆ.
ಇನ್ನು ಮುನಿರತ್ನ ಅವರು ಸಿನಿಮಾ ಮಾಡೋರು, ಏನಾದ್ರು ಎಡಿಟ್ ಮಾಡಿದ್ರೂ ಮಾಡಿಯಾರು. ಬಹಳಷ್ಟು ಜನರಿಗೂ ವಿಡಿಯೋ ಇದೆ ಅಂತನೇ ಬ್ಲಾಕ್ ಮೇಲ್ ಮಾಡಿದ್ದಾರೆ. ನನ್ನ ಜೊತೆ 5 ಜನ ಕಾರ್ಪೊರೇಟರ್ ಬಂದಿದ್ದಾರೆ ಅಂದ್ರೆ ಅರ್ಥ ಮಾಡಿಕೊಳ್ಳಿ. ಸ್ಟೂಡಿಯೋಗಳನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರು ದಾಖಲೆ ಕೇಳಿದ್ರೆ ಖಂಡಿತ ನಾನು ಫ್ರೂ ಮಾಡ್ತೀನಿ. ನನಗೆ ನನ್ನ ಮೇಲೆ ಬಲವಾದ ನಂಬಿಕೆ ಇದೆ, ನನ್ನ ಯಾವುದೇ ವಿಡಿಯೋ ಇಲ್ಲ. ಎಡಿಟಿಂಗ್ ಏನಾದರೂ ಮಾಡಿದ್ರೆ ಅನ್ನೋ ಕಾರಣಕ್ಕೆ ನನ್ನ ಹೆಂಡ್ತಿಗೆ ಮೊದಲೆ ಹೇಳಿದ್ದೀನಿ. ಮುನಿರತ್ನ ಮುಂದೆ ಬಂದು ವೇಲು ಪ್ರೂವ್ ಮಾಡು ಅಂದ್ರೆ ಖಂಡಿತ ನನ್ನ ಆರೋಪದ ಬಗ್ಗೆ ಸಾಬೀತು ಮಾಡ್ತೀನಿ ಎಂದು ಹೇಳಿದರು.
ನಮ್ಮ ಗೆಳಯರು ನನಗೆ ಕರೆ ಮಾಡಿ ಈ ರೀತಿ ಕೆಸೆರೆರಚಾಟ ಮಾಡೋದು ಬೇಡ. ರಾಜಕೀಯದಲ್ಲಿ ಇಂಥಹ ಸಣ್ಣಪುಟ್ಟ ಘಟನೆಗಳು ಆಗುತ್ತದೆ. ಈ ಕಾರಣಕ್ಕೆ 15 ವರ್ಷದ ಗೆಳತನಕ್ಕೆ ಕಳಂಕ ತರೋದು ಬೇಡ ಎಂದರು. ಅದಕ್ಕೆ ಈಗ ಸುಮ್ಮನಾಗ್ತಿದ್ದೇನೆ, ಬಿಜೆಪಿಗೆ ಹೋದ ಮೇಲೆ ನಮ್ಮ ಕೈಗೆ ಸಿಗ್ತಿರ್ಲಿಲ್ಲ. ನನಗೆ ನನ್ನ ವಾರ್ಡ್ ನ ಜನರು ಮುಖ್ಯ, ಅಭಿವೃದ್ಧಿ ಕೆಲಸ ಆಗಬೇಕು ಎಂದು ಹೇಳಿದರು.
ಆಪರೇಷನ್ ಮಾಡಿದ್ರೆ, ಡಿಕೆಶಿ ಜೊತೆಯೇ ಮಾಡಬೇಕಲ್ವಾ: ಚಲವಾದಿ ನಾರಾಯಣ ಸ್ವಾಮಿ
ಇನ್ನು ಸೂರ್ಯ ಮುಕುಂದರಾಜ್ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ "ಇದೇ ಮುನಿರತ್ನನ ಹನಿಟ್ರ್ಯಾಪ್ ರತ್ನಗಳು. ಇವರುಗಳ ಮೂಲಕ ಮುನಿರತ್ನ ಬಿಬಿಎಂಪಿ ಅಧಿಕಾರಿಗಳು, ಶಾಸಕರು, ಕಾರ್ಪೋರೇಟರ್‌ಗಳು ಮತ್ತು ತನ್ನ ಅಕ್ಕಪಕ್ಕದ ಚೇಲಾಗಳ ವಿಡಿಯೋ ಮಾಡಿಸಿ ಬ್ಲಾಕ್ ಮೇಲ್ ಮಾಡಿಸುತ್ತಿದ್ದರು. ಬಿಬಿಎಂಪಿಯಲ್ಲಿದ್ದ ಐಎಎಸ್ ಅಧಿಕಾರಿಯ ಪತಿಯನ್ನು ಅತ್ಯಾಚಾರ ಪ್ರಕರಣದಿಂದ ಹೊರತರಲು ದೂರುದಾರೆಯನ್ನೇ ಟ್ರ್ಯಾಪ್ ಮಾಡಿಸಿದ್ದರು ಈಸ್ಟ್‌ಮನ್ ನಾಯ್ಡು..." ಎಂದು ಸಂದೇಶವನ್ನು ಹಂಚಿಕೊಂಡಿದ್ದಾರೆ.
