Asianet Suvarna News Asianet Suvarna News

ಬೆಂಗಳೂರಿನ ನಡುರಸ್ತೆಯಲ್ಲೇ ಮಹಿಳೆಯಿಂದ ಕುಮಾರಣ್ಣನಿಗೆ ಕಿಸ್‌..!

ಬೆಂಗಳೂರಿನ ಯಶವಂತರಪುರದಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಹಿಳಾ ಕಾರ್ಯಕರ್ತೆಯೊಬ್ಬರು ಮುತ್ತು ನೀಡಿದ್ದಾರೆ.

Bengaluru HD Kumaraswamy was kissed by a woman in the middle of the road sat
Author
First Published Apr 1, 2023, 6:27 PM IST

ಬೆಂಗಳೂರು (ಏ.01): ಬೆಂಗಳೂರಿನ ಯಶವಂತರಪುರ ವಿಧಾನಸಭಾ ಕ್ಷೇತ್ರದ ಮಾರುತಿ ನಗರದಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆ ನಡೆಯುವ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಹಿಳಾ ಕಾರ್ಯಕರ್ತೆಯೊಬ್ಬರು ಮುತ್ತು ನೀಡಿದ ಘಟನೆ ನಡೆದಿದೆ.ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಳೆದ ಮೂರ್ನಾಲ್ಕು ತಿಂಗಳಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್‌ ಪಂಚರತ್ನ ರಥಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ನೂರಕ್ಕೂ ಅಧಿಕ ಬಗೆಯ ಹಾರಗಳನ್ನು ಹಾಕಿಸಿಕೊಳ್ಳುವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದ್ದರು.

ಆದರೆ, ಇತ್ತೀಚೆಗೆ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ಮುಕ್ತಾಯಗೊಂಡಿದ್ದರೂ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಪಂಚರತ್ನ ಯಾತ್ರೆಯ 2ನೇ ಯಾತ್ರೆಯನ್ನು ಆರಂಭಿಸಿದ್ದಾರೆ. ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದ್ದ ಪಂಚರತ್ನ ಯಾತ್ರೆಯ ವೇಳೆ ಜೆಡಿಎಸ್‌ ಕಾರ್ಯಕರ್ತೆ ಕುಮಾರಸ್ವಾಮಿ ಅವರನ್ನು ತಬ್ಬಿಹಿಡಿದು ಮುತ್ತು ಕೊಟ್ಟಿದ್ದಾರೆ. 

ಹಾಸನ ಟಿಕೆಟ್‌ ಗೊಂದಲಕ್ಕೆ ಕಣ್ಣೀರು ಹಾಕಿದ ದೊಡ್ಡಗೌಡ್ರು: ಕ್ಷೇತ್ರ ಉಳಿಸಿಕೊಳ್ಳುವುದಷ್ಟೇ ಗುರಿ ಎಂದ್ರು

ಜಯವರಾಯಗೌಡ ಪರವಾಗಿ ಪ್ರಚಾರ: ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಮಾರುತಿ ನಗರದಲ್ಲಿ ಪಂಚರತ್ನ ಯಾತ್ರೆ ವೇಳೆ ನಡೆಯುತ್ತಿರುವ ವೇಳೆ ಮಹಿಳಾ ಕಾರ್ಯಕರ್ತೆ ಮುತ್ತು ನೀಡಿದ್ದಾರೆ. ಕುಮಾರಸ್ವಾಮಿ ಅವರು ಭಾಷಣ ಮುಗಿಸಿ ವಾಪಸ್ ತಿರುಗುತ್ತಿರುವ ವೇಳೆಯಲ್ಲಿ ಅವರ ತಲೆಯನ್ನು ಹಿಡಿದು ಮುತ್ತು ನೀಡಿದ್ದಾರೆ. ಇನ್ನು ಯಶವಂತಪುರ ವಿಧಾನಸಭಾ ಕ್ಷೇತ್ರ ಮುಗಿಸಿ ಗೋವಿಂದರಾಜ ನಗರ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯನ್ನು ಕುಮಾರಸ್ವಾಮಿ ಮುಂದುವರೆಸಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚು ಸ್ಥಾನ ಪಡೆಯುವ ನಿಟ್ಟಿನಲ್ಲಿ ಅಬ್ಬರ ಪ್ರಚಾರ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಯಶವಂತಪುರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಜಯವರಾಯಗೌಡರ ಪರ ಪ್ರಚಾರ ನಡೆಸಿದ್ದಾರೆ. ಈಗ ಗೋವಿಂದರಾಜ ನಗರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ್ ಪರ ಪ್ರಚಾರ ನಡೆಸುತ್ತಿದ್ದಾರೆ. 

ಪೊಲೀಸ್ ಅಧಿಕಾರಿಗಳ ವಿರುದ್ದ ಕುಮಾರಸ್ವಾಮಿ ಗರಂ:  ಯಶವಂತಪುರ ವಿಧಾನಸಭಾ ಕ್ಷೇತ್ರದ ಪಂಚರತ್ನ ಯಾತ್ರೆಯ ವೇಳೆ ಜೆಡಿಎಸ್ ಕಾರ್ಯಕರ್ತರಿಗೆ ಪೊಲೀಸ್ ಅಧಿಕಾರಿಗಳಿಂದ ಕಿರುಕುಗಳವಾಗುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಪೊಲೀಸರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಕಾರ್ಯಕರ್ತರಿಗೆ ಧಮ್ಕಿ, ಕಿರುಕುಳ ಹಾಕಿಸೋದು ಆಗುತ್ತಿದೆ. ಚುನಾವಣೆ ಬಂದಾಗಿನಿಂದ ಕಿರುಕುಳ ಜಾಸ್ತಿಯಾಗಿದೆ. ಬೇರೆ ಪಕ್ಷದಿಂದ ಬೇಸತ್ತು ನಮ್ಮ ಪಕ್ಷಕ್ಕೆ ಬರುವವನ್ನ ಕೆಲವೊಂದು ಕಡೆ ಪೋಲಿಸರ ಮಧ್ಯಸ್ಥಿಕೆಯಲ್ಲಿ ಹೆದರಿಸಿ ಅವರ ಪಕ್ಷಕ್ಕೆ ಪುನಃ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಪೋಲಿಸರಿಗೆ ಎಚ್ಚರಿಕೆ ಕೊಡುತ್ತೇನೆ. ಇನ್ನೊಂದು ತಿಂಗಳು ಅಷ್ಟೇ ನಿಮ್ಮ ಸಮಯ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ, ಕಾಂಗ್ರೆಸ್‌ಗೆ ಬಹುಮತ ಸಿಗದ ಭೀತಿ: ಕುಮಾರಸ್ವಾಮಿ

ಇನ್ನು ಬೆಂಗಳೂರಲ್ಲಿ ಶಾಸಕರಿಗೆ ಅಡಿಯಾಳಾಗಿ ಕೆಲಸ ಮಾಡಿದರೆ ಜೂನ್ ತಿಂಗಳ ಬಳಿಕ ಪ್ರಾಯಶ್ಚಿತ್ತವಾಗುತ್ತದೆ. ಯಾರಿಗೂ ಫೇವರ್ ಮಾಡೊದಿಲ್ಲ. ನಾಡಿನ ರಾಜ್ಯದ ಜನತೆಯ ಹಣದಿಂದ ನೀವು ಕೆಲಸ ಮಾಡ್ತಿದ್ದೀರಿ ಅನ್ನೋದನ್ನ ಅಧಿಕಾರಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಕಳೆದ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಗಿ ಕೆಲಸ ಮಾಡಿದ್ದೇನೆ. ಈಗ ಬದಲಾವಣೆ ಮಾಡಬೇಕಿದೆ ಎಂದು ಹೇಳಿದರು. 

ಹಾಸನ ಟಿಕೆಟ್‌ ಗೊಂದಲಕ್ಕೆ ಕಣ್ಣೀರು ಹಾಕಿದ ದೊಡ್ಡಗೌಡ್ರು: ಹಾಸನದ ಜೆಡಿಎಸ್‌ ಟಿಕೆಟ್‌ ಹಂಚಿಕೆ ವಿಚಾರಕ್ಕಾಗಿ ಭಾರಿ ಗೊಂದಲ ಶುರುವಾಗಿದೆ. ಜೆಡಿಎಸ್‌ ಪಕ್ಷವನ್ನು ಕಟ್ಟಿ ಬೆಳೆಸಿದ ದೇವೇಗೌಡರ ಮಕ್ಕಳ ನಡುವೆಯೇ ಈಗ ಟಿಕೆಟ್‌ ಹಂಚಿಕೆ ಭಿನ್ನಾಭಿಪ್ರಾಯ ಹುಟ್ಟುಕೊಂಡಿದೆ. 40 ವರ್ಷಗಳಿಂದ ಹಾಸನದಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದರೂ ಕಳೆದ ಬಾರಿ ಸೋಲು ಉಂಟಾಗಿತ್ತು. ಆದರೆ, ಈ ಬಾರಿ ಸ್ವತಃ ದೇವೇಗೌಡರ ಹಿರಿಸೊಸೆ ಭವಾನಿ ರೇವಣ್ಣ ತಾವೇ ಸ್ಪರ್ಧೆ ಮಾಡುವಂತೆ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಕಾರ್ಯಕರ್ತರ ಸ್ವರೂಪ್‌ ಅವರಿಗೆ ಟಿಕೆಟ್‌ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈಗ ಎಚ್.ಡಿ. ರೇವಣ್ಣ ಅವರು ಸ್ವರೂಪ್‌ಗೆ ಟಿಕೆಟ್‌ ನೀಡದಂತೆ ಮನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇವೇಗೌಡರಿಗೆ ಟಿಕೆಟ್‌ ಆಯ್ಕೆಯನ್ನು ಕೈಬಿಟ್ಟಿದ್ದು, ಇಬ್ಬರ ಮಕ್ಕಳ ನಡುವೆ ಗೊಂದಲಕ್ಕೆ ಸಿಲುಕಿದ್ದು, ಇಂದು ಬೆಂಗಳೂರಿನ ಮನೆಯಲ್ಲಿ ಹಾಸನ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ದೇವೇಗೌಡರು ಕಣ್ಣೀರು ಹಾಕಿದ್ದಾರೆ. 

Follow Us:
Download App:
  • android
  • ios