ಬೆಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೆ ನಾಳೆಯಿಂದ ಚುನಾವಣಾ ವೀಕ್ಷಕರಿಂದ ವೆಚ್ಚ ತಪಾಸಣೆ ಮಾಡಲಾಗುತ್ತದೆ. 

ಬೆಂಗಳೂರು (ಏ.11): ಪ್ರಜಾಪ್ರತಿ ನಿಧಿ ಕಾಯ್ದೆ-1951ರ ಕಲಂ-77ರ ಪ್ರಕಾರ 2024ರ ಲೋಕಸಭಾ ಚುನಾವಣಾ ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳು ನಿಗಧಿ ಪಡಿಸಿರುವ ಪ್ರತಿನಿಧಿಗಳು, ಚುನಾವಣಾ ವೆಚ್ಚವನ್ನು ಪ್ರತ್ಯೇಕವಾಗಿ ರಿಜಿಸ್ಟರ್‌ಗಳಲ್ಲಿ (A,B & C) ನಿರ್ವಹಿಸಿ, ಚುನಾವಣಾ ವೆಚ್ಚ ವೀಕ್ಷಕರಿಗೆ ಮತ್ತು ಸಹಾಯಕ ವೆಚ್ಚ ವೀಕ್ಷಕರಿಂದ ಕನಿಷ್ಠ 3 ಬಾರಿ ಪರಿಶೀಲನೆಗೆ ಒಳಪಡಿಸಿ ಸಹಿ ಪಡೆಯುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.

ಆದ್ದರಿಂದ, ತಮಗೆ ಈ ಮೂಲಕ ತಿಳಿಯ ಪಡಿಸುವುದೇನೆಂದರೆ, ಚುನಾವಣಾ ವೆಚ್ಚದ ರಿಜಿಸ್ಟರ್‌ಗಳನ್ನು ಪರಿಶೀಲಿಸಲು ಈ ಕೆಳಕಂಡ ದಿನಾಂಕ, ಸಮಯ ಮತ್ತು ವಿಳಾಸದಲ್ಲಿ ತಪ್ಪದೇ ಹಾಜರಾಗತಕ್ಕದ್ದು ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ವೋಚರ್/ಬಿಲ್ ಗಳೊಂದಿಗೆ, ಚುನಾವಣಾ ಮೀಸಲು ಖಾತೆಯ ಬ್ಯಾಂಕ್ ವಾಸ್ ಪುಸ್ತಕವನ್ನು ನಿಗಧಿಪಡಿಸಿದ ಹಿಂದಿನ ದಿನಾಂಕಕ್ಕೆ ಇಂದೀಕರಿಸಿಕೊಂಡು (Updated) ಪರಿಶೀಲನಾ ಸಮಯದಲ್ಲಿ ಹಾಜರು ಪಡಿಸುವುದು.

ರಾಧಾ ರಮಣ ಧಾರಾವಾಹಿ ನಾಯಕ ಸ್ಕಂದ ಅಶೋಕ್ ಅಭಿಮಾನಿಗಳಿಗೆ ಭಾರೀ ಕಿರುಕುಳ!

ದಿನಾಂಕ: 12.04.2024, 18.04.2024 ಹಾಗೂ 24.04.2024 ರಂದು ಮೂರು ದಿನಗಳ ಕಾಲ ಬೆಳಗ್ಗೆ 10.00 ರಿಂದ ಸಂಜೆ 5.00 ರವರೆಗೆ ಕೊರಡಿ ಸಂಖ್ಯೆ: 201, ಅನೆಕ್ಸ್-3 ಕಟ್ಟಡ, ಬಿ.ಬಿ.ಎಂ.ಪಿ. ಮುಖ್ಯ ಕಛೇರಿ, ಎನ್. ಆರ್. ವೃತ್ತ, ಬೆಂಗಳೂರು ಇಲ್ಲಿ ಅಭ್ಯರ್ಥಿಗಳ ವೆಚ್ಚ ತಪಾಸಣೆ ನಡೆಯಲಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾದ ಡಾ.ಕೆ. ಹರೀಶ್ ಕುಮಾರ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪಿ.ಸಿ. ಮೋಹನ್, ಕಾಂಗ್ರೆಸ್‌ನಿಂದ ಮನ್ಸೂರ್ ಅಲಿ ಖಾನ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಕೆ. ಪ್ರಕಾಶ್, ಎಸ್‌ಯುಸಿಐ ಪಕ್ಷದಿಂದ ಹೆಚ್.ಪಿ. ಶಿವಪ್ರಕಾಶ್, ಸಮಾಜವಾದಿ ಜನತಾ ಪಕ್ಷದಿಂದ ರಂಜಿತ್ ವಿಶ್ವ, ರಾಷ್ಟ್ರೀಯ ಸಮಾಜ ದಳದಿಂದ ಅಭಯ ಶೀಲಾ, ಬಹುಜನ ಸಮಾಜ ಪಕ್ಷದಿಂದ ಸತೀಶ್ ಚಂದ್ರ ಸೇರಿ 40 ಜನರು ನಾಮಪತ್ರ ಸಲ್ಲಿಕೆ ಮಾಡಿದ್ದರು. ಅದರಲ್ಲಿ 4 ಅರ್ಜಿ ತಿರಸ್ಕಾರ ಆಗಿದ್ದು, ಇನ್ನು ನಾಲ್ಕು ಜನರು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಒಟ್ಟು 32 ನಾಮಪತ್ರಗಳು ಸ್ವೀಕೃತವಾಗಿದ್ದು, 24 ಜನರು ಸ್ಪರ್ಧೆ ಮಾಡುತ್ತಿದ್ದಾರೆ.

ಮಾತೆತ್ತಿದರೆ ಒಕ್ಕಲಿಗರು ಅಂತೀರಲ್ಲಾ, ಎಷ್ಟು ಒಕ್ಕಲಿಗರನ್ನು ಬೆಳೆಸಿದ್ದೀರಿ; ನಿಜಕ್ಕೂ ನೀವು ಒಕ್ಕಲಿಗರಾ? ನರೇಂದ್ರಸ್ವಾಮಿ

ಸೈಕಲ್ ಜಾಥಾ(ಸೈಕ್ಲೋಥಾನ್) ಮೂಲಕ ಮತದಾನ ಜಾಗೃತಿ: ಲೋಕಸಭಾ ಚುನಾವಣೆಯ ಅಂಗವಾಗಿ ಚುನಾವಣಾ ಆಯೋಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗ ಇಂದು ಹಮ್ಮಿಕೊಂಡಿರುವ ಮತದಾನ ಜಾಗೃತಿಯ ಸೈಕಲ್ ಜಾಥಾ(ಸೈಕ್ಲೋಥಾನ್)ಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಏಪ್ರಿಲ್ 26 ರಂದು ನಡೆಯುವ ಮತದಾನದ ಹಬ್ಬವನ್ನು ಎಲ್ಲರೂ ಸೇರಿ ಒಟ್ಟಾಗಿ ಆಚರಿಸೋಣ. ಕರ್ನಾಣಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ದಕ್ಷಿಣ ಕರ್ನಾಟಕದಲ್ಲಿ ಏಪ್ರಿಲ್ 26 ರಂದು ಹಾಗೂ ಉತ್ತರ ಕರ್ನಾಟಕದಲ್ಲಿ ಮೇ 7 ರಂದು ಮತದಾನ ನಡೆಯುತ್ತಿದೆ. ಮತ ಚಲಾಯಿಸಲು ಅರ್ಹರಿರುವ ಎಲ್ಲರೂ ತಪ್ಪದೆ ಮತ ಚಲಾಯಿಸೋಣವೆಂದು ಹೇಳಿದರು.