ಬೆಂಗಳೂರು, [ನ.02]: ಅನಾರೋಗ್ಯ ಹಿನ್ನೆಲೆ ಮಾಜಿ ಸಚಿವ ಡಿಕೆ ಶಿವಕುಮಾರ್​ ಅವರು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿನ್ನೆ [ಶುಕ್ರವಾರ] ರಾತ್ರಿ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಮೊದಲು ಡೆಂಗ್ಯೂ ಅಟ್ಯಾಕ್ ಆಗಿದೆ ಎನ್ನಲಾಗಿತ್ತು. ಆದ್ರೆ, ಡಿಕೆಶಿಗೆ ಯಾವುದೇ ಡೆಂಗ್ಯೂ ಇಲ್ಲ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು, ಆಸ್ಪತ್ರೆಗೆ ದಾಖಲು

ಇನ್ನು ಡಿ.ಕೆ.ಶಿವಕುಮಾರ್ ಆಸ್ಪತ್ರೆಗೆ ದಾಖಲಾಗಿದ್ಯಾಕೆ? ಅಷ್ಟಕ್ಕೂ ಅವರಿಗೇನಾಗಿದೆ? ಎನ್ನುವುದನ್ನು ಅಪೋಲೋ ಆಸ್ಪತ್ರೆ ವೈದ್ಯ ಡಾ. ಶಂಕರ್ ಮಾಹಿತಿ ನೀಡಿದ್ದು, ಅದು ಈ ಕೆಳಗಿನಂತಿದೆ.

ಡಾ.ಶಂಕರ್ ಹೇಳಿಕೆ ಇಂತಿದೆ:
ಡಿಕೆ ಶಿವಕುಮಾರ್ ಅವರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ,ಕಾಲು ನೋವು, ಬೆನ್ನು ನೋವು , ಸ್ವಲ್ಪ ಸುಸ್ತಾಗಿದ್ರು. ಜೊತೆಗೆ ಅವರಿಗೆ ವಿಟಮಿನ್ ಬಿ-12 ಕೂಡ ಕಡಿಮೆಯಿತ್ತು. ಮೊದಲಿಗೆ ಡೆಂಗ್ಯು ಜ್ವರ ಅಂದುಕೊಂಡಿದ್ವಿ, ಬ್ಲಡ್ ಪ್ರೆಶರ್ ಕೂಡ‌ ಜಾಸ್ತಿ ಇತ್ತು. ಆದರೆ ಡೆಂಗ್ಯು ಇಲ್ಲವೆಂದು ರಿಪೋರ್ಟ್ ಮೂಲಕ ತಿಳಿದುಬಂದಿದೆ ಎಂದು ಸ್ಪಷ್ಟಪಡಿಸಿದರು.

ಡಿ.ಕೆ. ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು; ಡೆಂಗ್ಯೂ ಶಂಕೆ?

ಬೆನ್ನು ನೋವಿಗೆ  MRI ಚೆಕ್ ಮಾಡಲಾಗಿದ್ದು, ವಿಟಮಿನ್ ಬಿ-12 ಕಮ್ಮಿ ಇದೆ. BP ವೇರಿಯೇಷನ್ ಇದ್ದು, ಅದನ್ನು ಜಾಸ್ತಿ ಮಾಡುವುದಕ್ಕೆ ನಾವು ಚಿಕಿತ್ಸೆ‌ ಕೊಡುತ್ತಿದ್ದೇವೆ ಎಂದು ಹೇಳಿದರು.

BPಯನ್ನು ಆಗಾಗ ಚೆಕ್ ಮಾಡಲಾಗುತ್ತಿದ್ದು, ಅವರಿಗೆ ವಿಶ್ರಾಂತಿ ಅವಶ್ಯವಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ‌ ಕಾಲ‌ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ತಿಳಿಸಿದರು.

ಡಿಕೆಶಿ ಮುಂದೆ ಮತ್ತೆ 2 ಕಷ್ಟಗಳು, 2 ಹುದ್ದೆಗಳು: ಭವಿಷ್ಯ ನುಡಿದ ವಿನಯ್ ಗುರೂಜಿ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ 2 ವಾರಗಳ‌ ಕಾಲ ಅವರು ಬೆಡ್ ರೆಸ್ಟ್ ಮಾಡಬೇಕಾಗಿದೆ. 2 ವಾರ ಬೆಡ್ ರೆಸ್ಟ್ ಮಾಡಿದ್ರೆ ಕಾಲು ನೋವು ಸ್ವಲ್ಪ ಕಡಿಮೆಯಾಗಲು ಸಾಧ್ಯ. ದೆಹಲಿಯಲ್ಲಿದ್ದಾಗ ಅವರು ಸಮಯಕ್ಕೆ ಸರಿಯಾಗಿ ಊಟ‌ ಸೇವಿಸುತ್ತಿರಲಿಲ್ಲ ಅನಿಸುತ್ತೆ. ಹೀಗಾಗಿ ಸ್ವಲ್ಪ ಅಶಕ್ತಿಯಿಂದ ಹೀಗಾಗಿದೆ. ಎಂದು ಮಾಹಿತಿ ನೀಡಿದರು.