ರಾಜ್ಯ ಆಳೋದು ಒಂದೇ, ಈ ಶಾಸಕನ ಕಂಟ್ರೋಲ್ ಮಾಡೋದು ಒಂದೇ: ಬಿಜೆಪಿ ಶಾಸಕ ಅಭಯ ಪಾಟೀಲ
ಯಾವುದೇ ವರ್ಕ ಆರ್ಡರ್ ಇಲ್ಲದೆ ಕೆಲಸ ಮಾಡಿಸಿದ್ದಾರೆ. ಈಗಾಗಲೇ ಅವುಗಳನ್ನು ಸ್ಥಗಿತಗೊಳಿಸಿದ್ದಾರೆ. ಕಳಪೆ ಕಾಮಗಾರಿಯಾಗಿದ್ದಾವೆ. ಸ್ಮಾರ್ಟ್ ಸಿಟಿ ಸಮಸ್ಯೆ ಇದೆ. ಬುಡಾದಲ್ಲಿ, ಮಹಾ ನಗರ ಪಾಲಿಕೆಯಲ್ಲಿ ಸಮಸ್ಯೆ ಇದೆ. ಎಲ್ಲ ಕಡೆ ಸಮಸ್ಯೆ ಸೃಷ್ಠಿ ಮಾಡಿದ್ದಾನೆ ಆ ಬಿಜೆಪಿಯ ಒಬ್ಬ ಶಾಸಕ. ಅದನ್ನು ರಿಪೇರಿ ಮಾಡಲು ಬಹಳ ಸಮಯಬೇಕಾಗುತ್ತದೆ: ಅಭಯ ಪಾಟೀಲ
ಬೆಳಗಾವಿ(ಜೂ.07): ಪ್ರಧಾನಿ ಮೋದಿ ಅವರನ್ನು ನಾವು ಮೆಚ್ಚಿಸಬಹುದು, ಆದರೆ, ಬೆಳಗಾವಿಯಲ್ಲಿನ ಬಿಜೆಪಿ ಶಾಸಕನನನು ಮೆಚ್ಚಿಸುವುದು ಅಷ್ಟುಸುಲಭವಲ್ಲ, ಅನು ಟಫ್. ಮೋದಿ, ಶಾ ಅವರು ಕೇಳಬಹುದು, ಆದರೆ, ಈ ವ್ಯಕ್ತಿಯ ಆಡಳಿತ ನೋಡಿದ್ದೇವೆ. ಅದು ಹಾರೀಬಲ್ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪರೋಕ್ಷವಾಗಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವನ ಕೈಯಲ್ಲಿರುವ ಅಧಿಕಾರಿಗಳನ್ನು ಬದಲಾವಣೆ ಮಾಡುವುದು ದೊಡ್ಡ ಚಾಲೆಂಜ್ ಇದೆ ನಮಗೆ. ಇಡೀ ರಾಜ್ಯ ಆಳುವುದು ಒಂದೇ ಈ ಎಂಎಲ್‌ಎ ಕಂಟ್ರೋಲ್ ಮಾಡುವುದು ಒಂದೇ ನಮಗೆ ಎಂದರು.
ಸರಳ ಪ್ರಕ್ರಿಯೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಯಾವುದೇ ವರ್ಕ ಆರ್ಡರ್ ಇಲ್ಲದೆ ಕೆಲಸ ಮಾಡಿಸಿದ್ದಾರೆ. ಈಗಾಗಲೇ ಅವುಗಳನ್ನು ಸ್ಥಗಿತಗೊಳಿಸಿದ್ದಾರೆ. ಕಳಪೆ ಕಾಮಗಾರಿಯಾಗಿದ್ದಾವೆ. ಸ್ಮಾರ್ಟ್ ಸಿಟಿ ಸಮಸ್ಯೆ ಇದೆ. ಬುಡಾದಲ್ಲಿ, ಮಹಾ ನಗರ ಪಾಲಿಕೆಯಲ್ಲಿ ಸಮಸ್ಯೆ ಇದೆ. ಎಲ್ಲ ಕಡೆ ಸಮಸ್ಯೆ ಸೃಷ್ಠಿ ಮಾಡಿದ್ದಾನೆ ಆ ಬಿಜೆಪಿಯ ಒಬ್ಬ ಶಾಸಕ. ಅದನ್ನು ರಿಪೇರಿ ಮಾಡಲು ಬಹಳ ಸಮಯಬೇಕಾಗುತ್ತದೆ ಎಂದರು.
ಭ್ರಷ್ಟಾಚಾರ ನಡೆದಿರುವ ಪ್ರಕರಣದಲ್ಲಿ ಸಂಪೂರ್ಣ ತನಿಖೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ಜೂ. 7 ರಂದು ಸಭೆ ನಡೆಸಿ ನೋಡುತ್ತೇವೆ. ಅಲ್ಲಿ ಏನೇನೂ ಸಮಸ್ಯೆ ಹೊರಗಡೆ ಬರುತ್ತದೆ ಎಂಬುದನ್ನು ಕಾದು ನೋಡಬೇಕು. ಕಾನೂನು ಬಿಟ್ಟು ಕೆಲಸ ಮಾಡಿದ ಅಧಿಕಾರಿಗಳಿಗೆ ಜಿಲ್ಲೆಯಿಂದ ಹೊರಗೆ ಕಳುಹಿಸಿ ಒಳ್ಳೆಯ ಅಧಿಕಾರಿಗಳನ್ನು ಜನಪರ ಕೆಲಸ ಮಾಡುವ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದರು.