ವಿವಿಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್: ಕಲಾಪದಲ್ಲಿ ಗದ್ದಲ!
ಡಾ.ಬಿ.ಆರ್.ಅಂಬೇಡ್ಕರ್ ವಾದ ಹಾಗೂ ಮನುವಾದದ ವಿಚಾರವಾಗಿ ಕಲಾಪದಲ್ಲಿ ಶುಕ್ರವಾರ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಗದ್ದಲ ತಾರಕಕ್ಕೇರಿತ್ತು. ವಿವಿಗಳಲ್ಲಿ
ವಿಧಾನಪರಿಷತ್ (ಡಿ.9) ಡಾ.ಬಿ.ಆರ್.ಅಂಬೇಡ್ಕರ್ ವಾದ ಹಾಗೂ ಮನುವಾದದ ವಿಚಾರವಾಗಿ ಕಲಾಪದಲ್ಲಿ ಶುಕ್ರವಾರ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಗದ್ದಲ ತಾರಕಕ್ಕೇರಿತ್ತು.
ಬಿಜೆಪಿ ಸದಸ್ಯರು ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಜ್ಯ ಶಿಕ್ಷಣ ನೀತಿ ಕುರಿತಂತೆ ಕೇಳಿದ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಉತ್ತರಿಸುವ ಸಂದರ್ಭದಲ್ಲಿ, ಯುಜಿಸಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಸೆಲ್ಫಿ ಪಾಯಿಂಟ್ ಮಾಡಲು ಆದೇಶಿಸಿದೆ. ಆದರೆ, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹಾಕುವಂತೆ ಸೂಚಿಸಿದೆ. ಅದರ ಬದಲು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದವರು ಅಥವಾ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಾಕಬಹುದಿತ್ತು ಎಂದರು.
ಮುಸ್ಲಿಮರು ಬೀದಿಗಿಳಿದರೆ ಸಿಎಎ(ಪೌರತ್ವಕಾಯ್ದೆ) ಅನುಷ್ಠಾನ ಕಷ್ಟ: ಅಮ್ನೆಸ್ಟಿ!
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ರವಿಕುಮಾರ್, ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲು ನಿಮಗೆ ಸಾಧ್ಯವಾಗಲಿಲ್ಲ. ನೀವು ಡಾ.ಅಂಬೇಡ್ಕರ್ ವಿರೋಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾವನ್ನಪ್ಪಿದ್ದಾಗ ಅವರ ಅಂತ್ಯಸಂಸ್ಕಾರಕ್ಕೆ 10 ಅಡಿ ಜಾಗ ಕೊಡಲಿಲ್ಲ ಎಂದರು.
ಆಗ ಮಧ್ಯಪ್ರವೇಶಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ನೀವು ದಲಿತರ ವಿರೋಧಿಗಳು. ಬಿಜೆಪಿ ಸಿದ್ಧಾಂತವೇ ಮನುವಾದಿ ಸಿದ್ಧಾಂತ. ನೀವು ನಮಗೆ ಹೇಳಿಕೊಡಬೇಡಿ. ನಾವು ಬಸವಣ್ಣ ತತ್ವದವರು, ಸಮಾಜದಲ್ಲಿ ಸಮಾನತೆ ಅನುಷ್ಠಾನಕ್ಕೆ ತರುವುದು ನಮ್ಮ ಗುರಿ. ಆದರೆ, ನೀವು ಅದರ ವಿರುದ್ಧ ತತ್ವದವರು ಎಂದು ಆಕ್ರೋಶದಲ್ಲಿ ಮಾತನಾಡಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಎಲ್ಲರೂ ಸುಮ್ಮನೇ ಮಾತನಾಡಬೇಡಿ. ಬೇಕಾದ ಹಾಗೆ ಮಾತನಾಡಲು ಇದು ಧರ್ಮಶಾಲೆಯಲ್ಲ ಎಂದು ಗದರಿ ಎಲ್ಲರನ್ನೂ ಸುಮ್ಮನಾಗಿಸಿದರು.
ಸಿಎಎ ದೇಶದ ಕಾನೂನು, ಇದರ ಜಾರಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ
ಪ್ರಧಾನಿ ಶೈಕ್ಷಣಿಕ ಅರ್ಹತೆ ಕೆದಕಿದ ಸಚಿವ
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರು ಮಾತನಾಡುವ ವೇಳೆ, ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಸೆಲ್ಫಿ ಪಾಯಿಂಟ್ ಸ್ಥಾಪನೆ ಮಾಡಲು ಹೇಳಿರುವ ಯುಜಿಸಿಯನ್ನು ಕೇಂದ್ರ ತನ್ನ ಹಿಡಿತಕ್ಕೆ ತೆಗೆದುಕೊಂಡಂತಿದೆ. ಯುಜಿಸಿ ನಿರ್ಧಾರ ಒಪ್ಪಲಾಗದು. ಅದರಲ್ಲೂ ಪ್ರಧಾನಿ ಭಾವಚಿತ್ರ ಹಾಕುವಂತೆ ಆದೇಶಿಸಿದ್ದು ಶಿಕ್ಷಣದಲ್ಲಿ ರಾಜಕೀಯ ಸೇರಿಸುವ ಯತ್ನ. ಅಲ್ಲದೆ, ನಮ್ಮ ಪ್ರಧಾನಿ ಅವರು ಎಲ್ಲಿಯವರೆಗೆ ಶಿಕ್ಷಣ ಪಡೆದಿದ್ದಾರೆ, ಓದಿದ್ದಾರೆ ಎಂಬುದರಲ್ಲೇ ಗೊಂದಲವಿದೆ. ಅದು ನನಗಂತೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ದೇಶದ ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಸಚಿವರು ವಿವೇಚನೆ ಇಟ್ಟುಕೊಂಡು ಮಾತನಾಡಿ ಎಂದರು.