ಡಿಕೆಶಿ ಕೈಗೆ ತಂಬೂರಿ ಕೊಟ್ಟು ಜ್ಯೋತಿಷ್ಯ ಹೇಳಿ ಎನ್ನಬೇಕು: ಶಾಸಕ ಎನ್.ಮಹೇಶ್
ನನ್ನ ಸೋಲಿಸಿ ಎಂದು ಸಂದೇಶ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಕೈಗೆ ತಂಬೂರಿ ನೀಡಿ, ಶಾಸ್ತ್ರ ಹೇಳಿ ಎಂದು ಕೇಳಬೇಕಿದೆ. ಯಾರು, ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಜನಾಭಿಪ್ರಾಯ ಮೇ.16ರಂದು ಎಲ್ಲರಿಗೂ ತಿಳಿಯುತ್ತೆ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಕೊಳ್ಳೇಗಾಲ (ಫೆ.27): ನಾನು ಸಹ ಬಿಜೆಪಿಯ ಟಿಕೆಟ್ ಆಕಾಂಕ್ಷಿ. ನನ್ನ ಬಿಟ್ಟು ಬೇರೆಯವರಿಗೆ ಕೊಟ್ಟರೂ ಸಹಾ ಕೆಲಸ ಮಾಡುವೆ, ಸ್ಪರ್ಧೆಗಿಳಿಯಲ್ಲ. ಅದೇ ರೀತಿ ನನಗೆ ಹೈಕಮಾಂಡ್ ಟಿಕೆಟ್ ನೀಡಿದರೆ ಬೇರೆಯವರು ಸಹಾ ನನ್ನ ಪರ ಕೆಲಸ ಮಾಡಬೇಕು. ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನ ತೀರ್ಮಾನಿಸುವುದು ಹೈಕಮಾಂಡ್ ಎಂದು ಶಾಸಕ ಎನ್.ಮಹೇಶ್ ಹೇಳಿದರು.
ನಾಯಕ ಸಮುಧಾಯ ಭವನ ಮುಂದುವರಿದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ಸಿಗರು ನನ್ನ ವಿರೋಧಿಗಳು, ಅವರು ನನ್ನ ಮತ್ತೊಮ್ಮೆ ಗೆಲ್ಲಿಸಿ ಎಂದು ಹೇಳಲ್ಲ. ನನ್ನ ಸೋಲಿಸಿ ಎಂದು ಸಂದೇಶ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈಗೆ ತಂಬೂರಿ ನೀಡಿ, ಶಾಸ್ತ್ರ ಹೇಳಿ ಎಂದು ಕೇಳಬೇಕಿದೆ. ಯಾರು, ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಜನಾಭಿಪ್ರಾಯ ಮೇ.16ರಂದು ಎಲ್ಲರಿಗೂ ತಿಳಿಯುತ್ತೆ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ದೇಶದಲ್ಲಿಯೇ ಅತಿಹೆಚ್ಚು ಹೋಳಿಯಾಡುವ 2ನೇ ನಗರ ಬಾಗಲಕೋಟೆ: ಶಾಸಕ ವೀರಣ್ಣ ಚರಂತಿಮಠ
ಬಸ್ ನಿಲ್ದಾಣ ಮಳಿಗೆ ವಿಚಾರದಲ್ಲಿ ಕಾನೂನು ಪ್ರಕಾರ ಸಾರಿಗೆ ಇಲಾಖೆ ನಿಯಮ ಬಾಹಿರವಾಗಿ ಟೆಂಡರ್ ಕರೆದಿದೆ. ಯಾವುದೇ ಲೋಪವಾಗಿಲ್ಲ, ನಾನು ಅಧಿಕಾರಿಗಳಿಗೆ ಒತ್ತಡ ತಂದಿಲ್ಲ, ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ನವರಿಗೂ ಅವಕಾಶ ನೀಡಬೇಕು ಎಂಬ ಮಾತಿದ್ದು ಅವರಿಗೆ ಜಾಗ ನೀಡಬೇಕು ಎಂದರೆ ಐಡಿಎಸ್‌ಎಂಟಿ ಮಳಿಗೆ ತೆರವಾಗಬೇಕು. ಈ ವಿಚಾರ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೆನೆ, ಶೀಘ್ರದಲ್ಲೆ ಬಸ್ ನಿಲ್ದಾಣ ಉದ್ಘಾಟಿಸಲಾಗುವುದು ಎಂದರು. ಇಂದು ನಾಯಕ ಸಮಾಜದ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರೆವೇರಿಸಿಲ್ಲ, ಮುಂದುವರಿದ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಎರಡು ತಾಲೂಕಿನ ನಾಯಕ ಸಮಾಜಕ್ಕೆ ಈ ಭವನ ಸೇರಿದ್ದು ಈ ಕಾಮಗಾರಿಯಿಂದ ಜಿಲ್ಲೆಗೆ ಅನುಕೂಲವಾಗಲಿದೆ. 25ವರ್ಷ ದಿಂದ ಕಾಮಗಾರಿ ಅಪೂರ್ಣವಾಗಿತ್ತು. ಶಾಸಕರ ಅನುದಾನದಿಂದ 10 ಲಕ್ಷ, ಮುಖ್ಯಮಂತ್ರಿ ವಿಶೇಷ ನಿಧಿಯಿಂದ 50ಲಕ್ಷ ನೀಡಲಾಗಿದೆ. ಅದೇ ರೀತಿಯಲ್ಲಿ ಯಳಂದೂರು ನಾಯಕ ಸಮುದಾಯ ಭವನಕ್ಕೆ ಒಂದೂವರೆ ಕೋಟಿ ವಿಶೇಷ ಅನುದಾನ ನೀಡಿದ್ದು, ಕಾಮಗಾರಿ ಚಾಲನೆ ದೊರೆತಿದೆ. ನಾಯಕ ಸಮಾಜದ ಅಭ್ಯುದಯಕ್ಕಾಗಿ ಅವರ ಜೊತೆಗಿರುವೆ, ಅವರು ನನಗೆ ಬೆಂಬಲವಾಗಿ ನಿಲ್ಲುವ ವಿಶ್ವಾಸವಿದೆ. ಈ ಎರಡು ಕಾಮಗಾರಿಗಳು ಸಮಾಜದ ಬಹು ವರ್ಷಗಳ ಬೇಡಿಕೆಯಾಗಿತ್ತು ಎಂಬುದು ಗಮನಿಸಬೇಕಾದ ಅಂಶ. ಕೊಳ್ಳೇಗಾಲ ಸಮಾಜದ ಚಿಕ್ಕಲಿಂಗಯ್ಯ ಅವರೇ ನನಗೆ ಹೆಚ್ಚು ಒತ್ತಾಯ ಮಾಡಿ ಗಮನ ಸೆಳೆದಿದ್ರು, ಅವರು ನಿಜಕ್ಕೂ ಮಹರ್ಷಿ ವಾಲ್ಮೀಕಿಯಂತೆ ಕಂಗೊಳಿಸುತ್ತಿದ್ದರು
ಈ ಸಂದರ್ಭದಲ್ಲಿ ನಾಯಕ ಸಮುದಾಯ ಸಂಘದ ವತಿಯಿಂದ ಸಮಾಜದ ಭವನಕ್ಕೆ ಅನುದಾನ ನೀಡಿದ ಶಾಸಕ ಮಹೇಶ್ ಅವರಿಗೆ 200 ಕೆ.ಜಿ ತೂಕದ ಮೂಸಂಬಿ ಹಣ್ಣಿನ ಹಾರವನ್ನು ಹಾಕಿ ಗೌರವಿಸಲಾಯಿತು. ಈ ವೇಳೆ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರ, ನಾಯಕ ಸಂಘದ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಶಾಂತರಾಜು, ಪಾಳ್ಯ ಜಯಸುಂದರ್, ನಾಯಕ ಸಂಘಟನಾ ಕಾರ್ಯದರ್ಶಿ ಪುಟ್ಟವೀರನಾಯಕ, ಚಿಕ್ಕಮಾದು, ಕೊಪ್ಪಾಳಿ ಮಹದೇವನಾಯಕ, ಪಾಳ್ಯ ಕೃಷ್ಣ, ನೌಕರರ ಸಂಘದ ಅಧ್ಯಕ್ಷ ಮುತ್ತುರಾಜು, ಶ್ರೀನಿವಾಸ್, ಬಾಲು, ಗೋವಿಂದರಾಜು ಇನ್ನಿತರರು ಇದ್ದರು
ಬಿಜೆಪಿ 70 ಸ್ಥಾನದಲ್ಲಷ್ಟೇ ಗೆಲ್ಲೋದು: ಸಿ.ಎಂ.ಇಬ್ರಾಹಿಂ
ಯಾರಿಗೆ ಟಿಕೆಟ್ ಎಂದು ತೀರ್ಮಾನಿಸುವರು ಇಲ್ಲಿನವರಲ್ಲ ಹೈಕಮಾಂಡ್. ನಾನು ಇಲ್ಲಿಗೆ ಆಕಾಂಕ್ಷಿ, ನಾನು ಬಿಜೆಪಿ ಬೆಂಬಲಿತ ಶಾಸಕನಾಗಿದ್ದರೂ ಆಕಾಂಕ್ಷಿಯಷ್ಚೆ, ಮಾಜಿ ಶಾಸಕ ನಂಜುಂಡಸ್ವಾಮಿ ಅವರು ಕಾಂಗ್ರೆಸ್ ಸೇರುವ ಕುರಿತು ನನಗೆ ತಿಳಿದಿಲ್ಲ. ಅವರನ್ನೆ ಕೇಳಿ, ನಾನು ಪಕ್ಷದ ಕಾರ್ಯಕರ್ತ ಹಾಗೂ ಶಾಸಕನಾಗಿ ಕೆಲಸ ಮಾಡಬೇಕು, ಮಾಡುತ್ತಿದ್ದೆನೆ.
- ಎನ್. ಮಹೇಶ್, ಕೊಳ್ಳೇಗಾಲ ಶಾಸಕ