ಬಿಡಿಎ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ತನಿಖೆ ನಡೆಯುತ್ತಿದ್ದು, ಅವರು ಅದರಲ್ಲಿ ಗೆದ್ದು ಬರುತ್ತಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. 

ಕಲಬುರಗಿ (ಸೆ.18): ಬಿಡಿಎ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ತನಿಖೆ ನಡೆಯುತ್ತಿದ್ದು, ಅವರು ಅದರಲ್ಲಿ ಗೆದ್ದು ಬರುತ್ತಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಬಿಡಿಎ ವಸತಿ ಯೋಜನೆ ಅವ್ಯವಹಾರಕ್ಕೆ ಸಂಬಂಧಿಸಿ ಯಡಿಯೂರಪ್ಪ ವಿರುದ್ಧ ಮತ್ತೆ ಎಫ್‌ಐಆರ್‌ ದಾಖಲಾಗಿರುವ ಸಂಬಂಧ ಶನಿವಾರ ಪ್ರತಿಕ್ರಿಯಿಸಿದರು.

ಈ ಹಿಂದೆ ಇಂಥ ಹಲವು ಕೇಸ್‌ಗಳು ಅವರ ವಿರುದ್ಧ ದಾಖಲಾಗಿ ವಿಫಲಗೊಂಡಿವೆ. ಅದರಂತೆ ಈ ಕೇಸ್‌ ಕೂಡಾ ವಿಫಲವಾಗಲಿದೆ ಎಂದರು. ಇದೇ ವೇಳೆ ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಆರೋಗ್ಯ ಸಚಿವ ಸುಧಾಕರ್‌ ಭೇಟಿ ನೀಡದ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಕ್ತಪಡಿಸಿದ ಆಕ್ರೋಶಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ವಿಮ್ಸ್‌ನಲ್ಲಿ ನಡೆದ ಸಾವಿನ ಕುರಿತು ನಮ್ಮ ಮನಸಿಗೂ ನೋವಾಗಿದೆ. 

ಉ.ಕನ್ನಡ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ತಾತ್ವಿಕ ಒಪ್ಪಿಗೆ?

ಘಟನೆ ಕುರಿತು ತನಿಖೆ ಕೂಡಾ ನಡೆದಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು. ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಬಿಡಿಎ ವಸತಿ ಯೋಜನೆ ಗುತ್ತಿಗೆ ನೀಡುವಾಗ ಕೋಟ್ಯಂತರ ರುಪಾಯಿ ಪಡೆದಿದ್ದಾರೆಂಬ ಆರೋಪ ಇದೆ. ಇದಕ್ಕೆ ಸಂಬಂಧಿಸಿ ಸದ್ಯ ಲೋಕಾಯುಕ್ತದಲ್ಲಿ ಯಡಿಯೂರಪ್ಪ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ಹಿಂದೆ ಇಂಥ ಹಲವು ಪ್ರಕರಣಗಳು ದಾಖಲಾಗಿ ವಿಫಲಗೊಂಡಿವೆ. ಈ ಪ್ರಕರಣದಲ್ಲೂ ಯಡಿಯೂರಪ್ಪ ಆರೋಪ ಮುಕ್ತರಾಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್‌ವೈ ಕೇಸ್‌ ಲೋಕಾಕ್ಕೆ ವರ್ಗ ಒಳ್ಳೇದು: ಬಿಡಿಎ ವಸತಿ ಯೋಜನೆ ಕಾಮಗಾರಿ ಗುತ್ತಿಗೆ ನೀಡಲು ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಕರಣ ಲೋಕಾಯುಕ್ತಕ್ಕೆ ಶಿಫ್‌್ಟಆಗಿರುವುದು ಒಳ್ಳೆಯ ವಿಚಾರ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ತಿಳಿಸಿದರು. ಲೋಕಾಯುಕ್ತದಿಂದ ಹೊಸದಾಗಿ ತನಿಖೆ ಆಗಿ, ಸತ್ಯಾಂಶವೂ ಹೊರ ಬರಬೇಕು. 

ಎಲ್ಲರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇಂತಹ ಸಂದರ್ಭ, ಸನ್ನಿವೇಶಗಳೇ ಬರುವುದಿಲ್ಲ. ಒಂದು ವೇಳೆ ಯಡಿಯೂರಪ್ಪ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಲೋಕಾಯುಕ್ತರ ಈ ಜವಾಬ್ದಾರಿ, ಲೋಕಾಯುಕ್ತದ ಮುಂದಿನ ಭವಿಷ್ಯದ ಬಗ್ಗೆ ತಿಳಿಸಲಿದೆ ಎಂದರು. ಲೋಕಾಯುಕ್ತ ಸಂಸ್ಥೆಯು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಖಂಡಿತವಾಗಿಯೂ ಹೈಕೋರ್ಚ್‌ನಿಂದ ಉತ್ತಮ ಆದೇಶ ಬಂದಿದೆ. ಇದನ್ನು ಎಲ್ಲರೂ ಪ್ರಶಂಸೆ ಮಾಡಬೇಕು ಎಂದು ಹೇಳಿದರು.

ಹಸಿ ಕಸ ವಾಸನೆ ತಡೆಗೆ ಹೊಸ ತಂತ್ರಜ್ಞಾನ: ಸಿಎಂ ಬೊಮ್ಮಾಯಿ

ಇಷ್ಟವಾದ ಅಧಿಕಾರಿಗಳ ಕಳಿಸಬಾರದು: ಎಸಿಬಿ ಅಧಿಕಾರಿಗಳನ್ನೇ ಲೋಕಾಯುಕ್ತ ಸಂಸ್ಥೆಗೆ ನೇಮಕ ಮಾಡಿರುವುದು ಸೂಕ್ತ ಕ್ರಮವಲ್ಲ. ರಾಜಕಾರಣಿಗಳಿಗೆ ಇಷ್ಟವಾದ ಅಧಿಕಾರಿಗಳನ್ನು ಕಳಿಸಬಾರದು. ಅಧಿಕಾರಿಗಳ ನೇಮಕಕ್ಕೆ ಲೋಕಾಯುಕ್ತರ ಸಮ್ಮತಿ ಬೇಕು. ಲೋಕಾಯುಕ್ತರೇ ಸೂಕ್ತವಾದ ಅಧಿಕಾರಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಬರಬೇಕು ಎಂದರು.