Asianet Suvarna News Asianet Suvarna News

ಸಿದ್ದರಾಮಯ್ಯ ವಿರುದ್ದ BC Patil ವಾಗ್ದಾಳಿ

  •  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸಚಿವ ಬಿ‌.ಸಿ ಪಾಟೀಲ್ ವಾಗ್ದಾಳಿ.
  •  ಕಾಮಾಲೆ ಕಣ್ಣೋರಿಗೆ ಕಾಣೋದೆಲ್ಲ ಹಳದಿ ಎಂದು HDK ಗೆ ಸಚಿವ ತಿರುಗೇಟು.
  •  ಮಳೆ ಹಾನಿ ಆಗಿರೋ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ.
bc patil lashes siddaramaiah over his statement against BJP
Author
First Published May 20, 2022, 2:41 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮೇ.20): ಸಿದ್ದರಾಮಯ್ಯ (siddaramaiah) ಮುಖ್ಯಮಂತ್ರಿ ಆಗಿದ್ದಾಗ ಜವಾಬ್ದಾರಿ ಯಿಂದ ಆಡಳಿತ ನಡೆಸಿದ್ದಾರಾ? ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ (BC Patil) ಟಾಂಗ್ ನೀಡಿದ್ದಾರೆ. ಬಿಜೆಪಿ ಬೇಜವಾಬ್ದಾರಿ ಸರ್ಕಾರ ಎಂಬ ಸಿದ್ಧರಾಮಯ್ಯ ಹೇಳಿಕೆ ಕುರಿತು ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಏನು ಭಾರೀ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರಾ ? ಅವರು ಜವಾಬ್ದಾರಿ, ಬೇರೆಯವರು ಮಾತ್ರ ಬೇಜವಾಬ್ದಾರಿ ಅಂದರೆ ಅರ್ಥವೇನು? ನಮ್ಮ ಜವಾಬ್ದಾರಿ ನಮಗೆ ಗೊತ್ತಿದೆ, ಅದನ್ನರಿತು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ನಮಗೆ ಜವಾಬ್ದಾರಿ ಇರುವುದರಿಂದಲೇ ಮುಂಗಾರು ಮಳೆ ಹಿನ್ನೆಲೆ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಭೇಟಿಗೆ ಬಂದಿದ್ದೇನೆ. 

 

ಜವಾಬ್ದಾರಿ ಎಂದರೇನು ನಾವು ಸಿದ್ಧರಾಮಯ್ಯ ಮನೆ ಬಾಗಿಲಿಗೆ ಹೋಗಿ ಕೂಡಬೇಕೆ? ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದು ಕೇವಲ ಫೋಟೋ ಶೂಟ್ ಗೆ ಸೀಮಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ, ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿಯಂತೆ. ಅದೇ ರೀತಿ ಸಿದ್ಧರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಅವರುಗಳಿಗೆ ಜಗತ್ತೆಲ್ಲ ಹಳದಿ‌ ಕಾಣುತ್ತದೆ. ಅಲ್ಲದೆ ಇದೆಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯದಲ್ಲಿ ಅಸ್ತಿತ್ವವಿದೆ ಎಂದು ತೋರಿಸಿಕೊಳ್ಳುವ ಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

CHIKKAMAGALURU ರಸ್ತೆಗೆ ಬಂಡೆ ಹಾಕಿ ಬೀಗ ಜಡಿದಿದ್ದ ಪ್ರಕರಣ, ಸ್ಥಳಿಯರಿಂದ ಬಂಡೆ ತೆರವು

ಕೋಮು ಕಿಡಿಯ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂಬ ಎಂ.ಬಿ ಪಾಟೀಲ್ (MB patil) ಆಗ್ರಹಕ್ಕೆ ಉತ್ತರಿಸಿದ ಸಚಿವರು, ಮೊದಲು ಮುಸ್ಲಿಂ ಸಂಘಟನೆಗಳನ್ನು ಬ್ಯಾನ್ ಮಾಡಲಿ. ಸಿದ್ಧರಾಮಯ್ಯ ಆಡಳಿತವಿದ್ದಾಗ ಬ್ಯಾನ್ ಮಾಡಿದ್ದಾರಾ? ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ 200 ಹೆಕ್ಟೇರ್ ತೋಟಗಾರಿಕೆ ಹಾಗೂ 40 ಹೆಕ್ಟೇರ್ ಕೃಷಿ ಜಮೀನು ಒಟ್ಟು 37 ಲಕ್ಷ ರೂ. ಬೆಳೆ ನಷ್ಟ  ಆಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು,  ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ ಎಂದರು.

 

15 ತಿಂಗಳಾದ್ರೂ ಫಲಿತಾಂಶವಿಲ್ಲ, ವಯಸ್ಸು ಮೀರುವ ಆತಂಕದಲ್ಲಿ ಕೆಎಎಸ್ ಆಕಾಂಕ್ಷಿಗಳು!

ಮುಂಗಾರು ಮಳೆ ಪ್ರಾರಂಭಗೊಂಡು ರೈತರ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ. ಇದಕ್ಕೆ ಬಿತ್ತನೆ ಬೀಜ ಹಾಗೂ ರಸ ಗೊಬ್ಬರ ಅಭಾವ ಆಗದ ರೀತಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಯಾರಾದರೂ ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಠಿ ಮಾಡಿದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಸೂಚನೆ ನೀಡಿರುವುದಾಗಿ ತಿಳಿಸಿದರು.

Follow Us:
Download App:
  • android
  • ios