ಬೆಂಗಳೂರು, (ಅ.21): ದೆಹಲಿಯ ನೆರವಿನೊಂದಿಗೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಕರ್ನಾಟಕದಲ್ಲಿ ಯುದ್ಧವೇ ನಡೆಯುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಈ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿರುವ ಅವರು, ಅಧಿಕಾರ ಲಾಲಸೆಯ ದೊಂಬರಾಟದಲ್ಲಿ ಯಾವುದೇ ಬೆಲೆ ತೆತ್ತಾದರೂ ಮಂತ್ರಿಗಿರಿ ಪಡೆಯುವ ಚಟ ಬಿಜೆಪಿ ಮೈಮೇಲೆರಿದೆ. ಆದರೆ ಪ್ರವಾಹ, ಅತಿವೃಷ್ಠಿ, ಕೊರೋನಾ ಸಂತ್ರಸ್ತ ಕನ್ನಡಿಗರ ಕಷ್ಟ ಇವರಿಗೆ ಕೇಳದಾಗಿದೆ ಎಂದು ರಂದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ.

ಸಿಎಂ ವಿರುದ್ಧ ಮತ್ತೆ ಹರಿಹಾಯ್ದ ಯತ್ನಾಳ್, ಯಡಿಯೂರಪ್ಪಗೆ ಎಚ್ಚರಿಕೆ ಸಂದೇಶ..!

 ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಅವರ ಬಗ್ಗೆ ನೀಡಿರುವ ಹೇಳಿಕೆಯ ವಿಡಿಯೋವನ್ನು ಸಹ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಯಡಿಯೂರಪ್ಪ ಹೆಚ್ಚು ದಿನ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ, ಮೇಲಿನವರಿಗೂ ಇದು ಇಷ್ಟವಿಲ್ಲ ಎಂದು ಯತ್ನಾಳ್ ವಿಜಯಪುರದ ಒಮದು ಕಾರ್ಯಕ್ರಮದಲ್ಲಿ  ಹೇಳಿಕೆ ನೀಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಬಿಎಸ್‌ವೈ ಆಪ್ತ ಶಾಸಕರು ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.