ಜೈ ಶ್ರೀರಾಮ್ ಘೋಷಣೆ ಕೂಗಿದವರನ್ನು ಬೂಟ್‌ನಿಂದ ಹೊಡಿಬೇಕು ಎಂದಿದ್ದ ಬಷೀರುದ್ದೀನ್ ಅಮಾನತು!
ಜೈ ಶ್ರೀರಾಮ್ ಘೋಷಣೆ ಕೂಗುವವರನ್ನು ಪೊಲೀಸರು ಬೂಟ್‌ನಿಂದ ಹೊಡೆಯಬೇಕು ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡ ಬಷೀರುದ್ದೀನ್‌ನನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.
ರಾಯಚೂರು (ಮೇ 04): ರಾಜ್ಯದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವವರನ್ನು ಪೊಲೀಸರು ಬೂಟ್‌ನಿಂದ ಹೊಡೆಯಬೇಕು ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದ ಕಾಂಗ್ರೆಸ್ ಮುಖಂಡ ಬಷೀರುದ್ದೀನ್‌ನನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.
ರಾಯಚೂರಿನಲ್ಲಿ ಕಾಂಗ್ರೆಸ್ ಮುಖಂಡ ಬಷಿರುದ್ದೀನ್ ನಗರಸಭೆ ಕಮಿಷನರ್ ಮುಂದೆಯೇ ಇಂತಹ ಹೇಳಿಕೆಯನ್ನ ನೀಡಿದ್ದರು. ಬಷಿರುದ್ದೀನ್ ಹೇಳಿಕೆ ಸದ್ಯ ಸಾಮಾಜಿಲ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜೈ ಶ್ರೀರಾಮ್ ಎಂದವರಿಗೆ ನಡು ರಸ್ತೆಯಲ್ಲೇ ಪೊಲೀಸರು ಬೂಟುಗಾಲಲ್ಲಿ ಒದೆಯಬೇಕು ಎಂದು ಹೇಳಿದ್ದರು. ಬಷಿರುದ್ದೀನ್ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ಫುಲ್ ಗರಂ ಆಗಿದ್ದರು. ಆದರೆ, ಲೋಕಸಭಾ ಚುನಾವಣೆ ಮತದಾನಕ್ಕೆ ಮೂರು ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಇಂತಹ ಹೇಳಿಕೆಯಿಂದ ಕಾಂಗ್ರೆಸ್‌ಗೆ ಹಿಂದೂಗಳ ಮತಗಳು ಕೈ ತಪ್ಪುವ ಆತಂಕ ಎದುರಾಗಿತ್ತು. ಇದರ ಬೆನ್ನಲ್ಲಿಯೇ ಕಾಂಗ್ರೆಸ್ ಪಕ್ಷದ ಮೇಲಾಗುತ್ತಿದ್ದ ಡ್ಯಾಮೇಜ್ ಕಂಟ್ರೋಲ್ ಮಾಡುವುದಕ್ಕಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಬಷೀರುದ್ದೀನ್‌ನನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ.