Asianet Suvarna News Asianet Suvarna News

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬೊಮ್ಮಾಯಿ: ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್

* ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬಸವರಾಜ ಬೊಮ್ಮಾಯಿ
* ಶಾಸಕಾಂಗ ಸಭೆಯ ಬಳಿಕ ನೇರವಾಗಿ ರಾಜಭವನಕ್ಕೆ ತೆರಳಿದ ಬೊಮ್ಮಾಯಿ
* ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬಳಿ ಸರ್ಕಾರ ರಚಿಸಲು ಅನುಮತಿ 

Basavaraj Bommai to Take oath as Karnataka CM On July 28th rbj
Author
Bengaluru, First Published Jul 27, 2021, 9:32 PM IST

ಬೆಂಗಳೂರು, (ಜು.27) : ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಬಸವರಾಜ ಬೊಮ್ಮಾಯಿ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

ಇಂದು (ಮಂಗಳವಾರ) ಶಾಸಕಾಂಗ ಸಭೆಯ ಬಳಿಕ ನೇರವಾಗಿ ರಾಜಭವನಕ್ಕೆ ತೆರಳಿದ ಬೊಮ್ಮಾಯಿ ಅವರು ರಾಜ್ಯಪಾಲ ಗೆಹ್ಲೊಟ್ ಅವರಲ್ಲಿ ಸರ್ಕಾರ ರಚಿಸಲು ಅನುಮತಿ ನೀಡುವಂತೆ ಮನವಿ ಮಾಡಿದರು.

ಬೊಮ್ಮಾಯಿ ಜತೆ ಮೂವರಿಗೆ ಬಂಪರ್: ಶ್ರೀರಾಮುಲು ಕನಸು ನನಸು!

ಈ ವೇಳೆ ಬಿ.ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಬಿಜೆಪಿ ಗಣ್ಯರು ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿನವರ ಜೊತೆಯಲ್ಲಿದ್ದರು.

28ಕ್ಕೆ ಪದಗ್ರಹಣ
ಯೆಸ್.. ಈಗಾಗಲೇ ಮೊದಲ ಸುದ್ದಿ ಮಾಡಿದಂತೆ ನಾಳೆ ಅಂದ್ರೆ ಜುಲೈ 28ಕ್ಕೆ ಬೆಳಗ್ಗೆ 11ಕ್ಕೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದ್ರೆ, ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆರ್. ಅಶೋಕ್, ಶ್ರೀರಾಮುಲು ಹಾಗೂ ಗೋವಿಂದ್ ಕಾರಜೋಳ ಪ್ರಮಾಣ ವಚನ ಸ್ವೀಕರಿಸುತ್ತಿಲ್ಲ ಎನ್ನುವುದು ಕುತೂಹಲ ಮೂಡಿಸಿದೆ. ಇನ್ನುಳಿದಂತೆ ಸಂಪುಟ ವಿಸ್ತರಣೆ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಇಲ್ಲ.

Follow Us:
Download App:
  • android
  • ios