ಸತ್ಯಮಾರ್ಗದಲ್ಲಿ ಸಾಗಲು ಬಸವಣ್ಣ ಹೇಳಿಕೊಟ್ಟಿದ್ದಾರೆ: ರಾಹುಲ್‌ ಗಾಂಧಿ

ಬಸವಣ್ಣನವರು ಲೋಕತಂತ್ರದ ದಾರಿಯನ್ನು ಭಾರತ ಹಾಗೂ ಪ್ರಪಂಚಕ್ಕೆ ಪರಿಚಯಿಸಿದವರು. ಇದು ಪರಮ ಸತ್ಯವಾಗಿದ್ದು, ಇದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. 

Basavanna taught him to walk on the path of truth Says Rahul Gandhi gvd

ಬಾಗಲಕೋಟೆ (ಏ.24): ಬಸವಣ್ಣನವರು ಲೋಕತಂತ್ರದ ದಾರಿಯನ್ನು ಭಾರತ ಹಾಗೂ ಪ್ರಪಂಚಕ್ಕೆ ಪರಿಚಯಿಸಿದವರು. ಇದು ಪರಮ ಸತ್ಯವಾಗಿದ್ದು, ಇದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. ಬಸವಣ್ಣನವರು ನಮಗೆ ಯಾವತ್ತೂ ಹೆದರಬೇಡಿ, ಸತ್ಯದ ಮಾರ್ಗದಲ್ಲಿ ಸಾಗಿ, ಎಲ್ಲರನ್ನು ಗೌರವಿಸಿ ಎಂದು ಮಾರ್ಗದರ್ಶನ ನೀಡಿದ್ದಾರೆ ಎಂದು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಹೇಳಿದರು. ಕೂಡಲಸಂಗಮದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿ, ಬಸವಣ್ಣನವರ ಆದರ್ಶಗಳು ಈ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಡಗಿದೆ. ನಿಮ್ಮಲ್ಲಿ ಕತ್ತಲು ಆವರಿಸಿದರೆ, ಎಲ್ಲೋ ಒಂದು ಕಡೆಯಿಂದ ಬೆಳಕು ಗೋಚರಿಸುತ್ತದೆ. 

ಅದೇ ರೀತಿ ಸಮಾಜದಲ್ಲಿ ಕತ್ತಲು ಆವರಿಸಿದಾಗ ಬಸವಣ್ಣನವರು ಬೆಳಕಾಗಿ ಮೂಡಿಬಂದರು. ಬಸವಣ್ಣನವರ ಜಯಂತಿದಿನ ನಾನು ಇಲ್ಲಿಗೆ ಬಂದಿರುವುದು ಸಂತೋಷ ಎಂದರು. ಸುಮ್ಮನೆ ಬೆಳಕು ನೀಡಲ್ಲ: ವ್ಯಕ್ತಿಗಳು ಸುಖಾಸುಮ್ಮನೆ ಬೆಳಕು ನೀಡುವುದಿಲ್ಲ. ಅವರು ಮೊದಲು ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುತ್ತಾರೆ. ಬೇರೆಯವರನ್ನು ಪ್ರಶ್ನೆ ಮಾಡುವುದು ಬಹಳ ಸುಲಭ. ಆದರೆ, ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುವುದು ದೊಡ್ಡ ವಿಚಾರ. ಇಲ್ಲಿನ ಸ್ವಾಮೀಜಿ ಹೇಳಿದ ಪ್ರಕಾರ ಬಸವಣ್ಣನವರು 8ನೇ ವಯಸ್ಸಿನಲ್ಲೇ ಉಪನಯನ ನಿರಾಕರಿಸಿದರು. 

ಸಿದ್ದರಾಮಯ್ಯ ಲಿಂಗಾಯತರಿಗೆ ಅವಮಾನ ಮಾಡಿಲ್ಲ: ರಣದೀಪ್‌ಸಿಂಗ್‌ ಸುರ್ಜೇವಾಲಾ

ಅನೇಕರು ಈ ವಿಚಾರವಾಗಿ ತಮಗೆ ತಾವೇ ಪ್ರಶ್ನಿಸುವುದಿಲ್ಲ. ಆದರೆ ಬಸವಣ್ಣನವರು ಪ್ರಶ್ನಿಸಿದರು. ಈ ಸಂಬಂಧ ಸ್ವಾಮೀಜಿ ಅವರನ್ನು ಕೇಳಿದೆ, ಬಸವಣ್ಣನವರಿಗೆ 8ನೇ ವಯಸ್ಸಿನಲ್ಲಿ ಈ ವಿಚಾರ ಹೇಗೆ ಅರ್ಥವಾಯಿತು ಎಂದು. ಆಗ ಅವರು, ಬಸವಣ್ಣನವರಿಗೆ ಬೇರೆ ಜಾತಿಯ ಸ್ನೇಹಿತರಿದ್ದರು. ಸಮಾಜ ಅವರ ಮೇಲೆ ದಾಳಿ ನಡೆಸಿದಾಗ ಬಸವಣ್ಣನವರು ತಮ್ಮ ಸ್ನೇಹಿತನ ಮೇಲೆ ದಾಳಿ ಏಕೆ ನಡೆಯುತ್ತಿದೆ ಎಂದು ತಮಗೆ ತಾವೇ ಪ್ರಶ್ನೆ ಕೇಳಿಕೊಂಡರು. ಅವರು ಜೀವನ ಪೂರ್ತಿ ಜಾತಿ ವ್ಯವಸ್ಥೆ, ದ್ವೇಷ, ಲೋಕತಂತ್ರದ ಬಗ್ಗೆ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಂಡರು. ಈ ಪ್ರಶ್ನೆ ಕೇಳಿಕೊಂಡ ನಂತರ, ಅವರಿಗೆ ತಮ್ಮ ಮನದಲ್ಲಿ ಕಂಡುಕೊಂಡ ಸತ್ಯವನ್ನು ಜೀವನಪೂರ್ತಿ ಬಿಡಲಿಲ್ಲ ಎಂದು ಹೇಳಿದರು.

ಕಂಪನಿ ಕೆಲಸ ಬಿಟ್ಟು, ರಾಜಕೀಯಕ್ಕೆ ಬಂದ ಎಂಬಿಎ ಪದವೀಧರೆ: ಎಎಪಿಯಿಂದ ಸುಮನಾ ಸ್ಪರ್ಧೆ

ಬಸವಣ್ಣನವರು ನಮಗೆ ಯಾವತ್ತೂ ಹೆದರಬೇಡಿ, ಸತ್ಯದ ಮಾರ್ಗದಲ್ಲಿ ಸಾಗಿ, ಎಲ್ಲರನ್ನು ಗೌರವಿಸಿ ಎಂದು ಮಾರ್ಗದರ್ಶನ ನೀಡಿದ್ದಾರೆ. ಈ ವಿಚಾರವಾಗಿ ಅನೇಕರು ಮಾತನಾಡುತ್ತಾರೆ. ಆದರೆ ಕೆಲವರು ಮಾತ್ರ ಅದನ್ನು ಪಾಲಿಸುತ್ತಾರೆ. ಈ ಕೆಲವರಲ್ಲಿ ಬಸವಣ್ಣನವರೂ ಒಬ್ಬರು. ಇದೇ ಕಾರಣಕ್ಕೆ ನಮಗೆ ನಮ್ಮ ದೇಶಕ್ಕೆ ಬೆಳಕಾಗಿದ್ದಾರೆ ಎಂದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios