Asianet Suvarna News Asianet Suvarna News

ಉರಿಯುವ ಬೆಂಕಿಗೆ ಅಫೀಮು ಸುರಿದ ಬಿಜೆಪಿ ಶಾಸಕ ಯತ್ನಾಳ್

* ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಎಂದು ವಿವಾದ ಸೃಷ್ಟಿಸಿಕೊಂಡ ಕಟೀಲ್
* ಇದೀಗ ಕಟೀಲ್‌ ಹೇಳಿಕೆಯ  ಉರಿಯುವ ಬೆಂಕಿಗೆ ಅಫೀಮು ಸುರಿದ ಯತ್ನಾಳ್
* ರಾಹುಲ್ ಗಾಂಧಿ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್  ವಾಗ್ದಾಳಿ

BJP MLA Basangouda patil Yatnal Hits out at Congress Leader Rahul gandhi rbj
Author
Bengaluru, First Published Oct 19, 2021, 7:31 PM IST
  • Facebook
  • Twitter
  • Whatsapp

ವಿಜಯಪುರ., (ಅ.19): ಪ್ರಧಾನಮಂತ್ರಿಯನ್ನು 'ಹೆಬ್ಬೆಟ್ಟು ಗಿರಾಕಿ ಮೋದಿ' ಎಂದು ಕಾಂಗ್ರೆಸ್ (Congress) ಲೇವಡಿ ಮಾಡಿದ್ದಕ್ಕೆ ಬಿಜೆಪಿ ನಾಯಕರು ಒಂದು ಹೆಜ್ಜೆ ಮುಂದೆ ಹೋಗಿ ರಾಹುಲ್‌ ಗಾಂಧಿ (Rahul Gandhi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಎಐಸಿಸಿ ನಾಯಕ ರಾಹುಲ್ ಗಾಂಧಿ(Rahul Gandhi) ಒಬ್ಬ ಡ್ರಗ್ ಅಡಿಕ್ಟ್ (Drug Addict), ಡ್ರಗ್  ಪೆಡ್ಲರ್(Drug Peddler) ಎಂದು ವರದಿಗಳು ಹೇಳಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ವಿವಾದಾತ್ಮಕ ಹೇಳಿಕೆ (Controversial Statement) ಕೊಟ್ಟಿದ್ದಾರೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಕಾಂಗ್ರೆಸ್‌ ನಾಯಕರು ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಂಡಾಕಾರುತ್ತಿದ್ದಾರೆ.

ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಭಾಷಣ

ಇದರ ಮಧ್ಯೆ ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ (Basanagouda patil Yatnal) ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಹೇಳಿಕೆ ಕೊಟ್ಟು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಹೌದು...ರಾಹುಲ್ ಗಾಂಧಿ ಅಫೀಮು (afeem ) ಅಮಲಿನಲ್ಲಿ ಇರುತ್ತಾರೆ. ರಾಹುಲ್​ ಗಾಂಧಿ ಒಬ್ಬ ಹುಚ್ಚ, ಅವರದ್ದು ಹುಚ್ಚರ ಕಂಪನಿ ಎಂದು ಕಿಡಿಕಾರಿದ್ದಾರೆ,

ಸಿಂದಗಿಯಲ್ಲಿ ಇಂದು (ಅ.19) ಯತ್ನಾಳ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಾ, ರಾಹುಲ್ ಗಾಂಧಿ ಅಫೀಮು ಅಮಲಿನಲ್ಲಿ ಇರುತ್ತಾರೆ. ರಾಹುಲ್​ ಗಾಂಧಿ ಒಬ್ಬ ಹುಚ್ಚ, ಅವರದ್ದು ಹುಚ್ಚರ ಕಂಪನಿ. ಅಂಥ ಹುಚ್ಚನಿಗೆ ಮತ ಹಾಕುತ್ತೀರಾ? ಎಂದು ಪ್ರಶ್ನಿಸಿದದರು. ಅಲ್ಲದೇ   ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೂಡ ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios