ಬಿಎಸ್‌ವೈ, ವಿಜಯೇಂದ್ರ ಬಗ್ಗೆ ಯತ್ನಾಳ್ ಟೀಕೆ ಸರಿಯಲ್ಲ: ರೇಣುಕಾಚಾರ್ಯ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಗ್ಗೆ ಹಗುರ ಮಾತು, ಟೀಕೆ ಮಾಡುವುದು ಬೇಡ. ಪದೇ ಪದೇ ಟೀಕಿಸಿದರೆ ಅದು ಒಳ್ಳೆಯದೂ ಅಲ್ಲ ಎಂದು ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ.
ದಾವಣಗೆರೆ (ಡಿ.04): ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಗ್ಗೆ ಹಗುರ ಮಾತು, ಟೀಕೆ ಮಾಡುವುದು ಬೇಡ. ಪದೇ ಪದೇ ಟೀಕಿಸಿದರೆ ಅದು ಒಳ್ಳೆಯದೂ ಅಲ್ಲ ಎಂದು ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ. ಹೊನ್ನಾಳಿಯಲ್ಲಿ ಬಿಜೆಪಿ ವಿಜಯೋತ್ಸವ ಸಂಭ್ರಮಾಚರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವನಗೌಡ ಪಾಟೀಲ್ ಯತ್ನಾಳ್ ನಮ್ಮ ಆತ್ಮೀಯ ಸ್ನೇಹಿತರು, ಹಿರಿಯರಿದ್ದಾರೆ. ಯತ್ನಾಳ್ ಬಗ್ಗೆ ನಮಗೆ ಗೌರವವೂ ಇದೆ ಎಂದರು.
ಯತ್ನಾಳರಿಗೆ ನಾನು ಮನವಿ ಮಾಡುತ್ತೇನೆ. ಪದೇಪದೇ ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಹಗುರ ಮಾತು ಬೇಡ. ವಿಜಯೇಂದ್ರ ಎಲ್ಲರೂ ಒಗ್ಗಟ್ಟಿನಿಂದ ಮಾಡಿದಂತಹ ಆಯ್ಕೆಯಾಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ತಂದು, ನರೇಂದ್ರ ಮೋದಿಯವರಿಗೆ 3ನೇ ಸಲ ಪ್ರಧಾನಿ ಮಾಡುವ ಗುರಿ, ಸಂಕಲ್ಪ ನಮ್ಮೆಲ್ಲರದ್ದೂ ಆಗಿದೆ ಎಂದು ತಿಳಿಸಿದರು. ಬಸವನಗೌಡ ಪಾಟೀಲ್ ಯತ್ನಾಳ್ ಹಿಂದೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದಾಗ ಅಲ್ಲಿಂದ ವಾಪಾಸ್ಸು ಬಿಜೆಪಿಗೆ ನಿಮ್ಮನ್ನು ಕರೆ ತಂದಿದ್ದೇ ಯಡಿಯೂರಪ್ಪನವರು. ಪದೇಪದೇ ಯಡಿಯೂರಪ್ಪ. ಪದೇ ಪದೇ ಟೀಕೆ ಮಾಡಿದರೆ ಅದು ಒಳ್ಳೆಯದ ಅಲ್ಲ. ಪಕ್ಷಕ್ಕೂ ಅದರಿಂದ ಹಾನಿಯಾಗುತ್ತದೆ. ಇನ್ನಾದರೂ ಭಿನ್ನಾಭಿಪ್ರಾಯ ಮರೆತು, ಒಟ್ಟಾಗಿ ಹೋಗೋಣ ಎಂದು ಯತ್ನಾಳ್‌ರಿಗೆ ಮನವಿ ಮಾಡಿದರು.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮುನ್ಸೂಚನೆ: ಸಂಸದ ಮುನಿಸ್ವಾಮಿ
ಫಲಿತಾಂಶ ಲೋಕಸಭೆಗೆ ದಿಕ್ಸೂಚಿ: ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಾಲ್ಕು ರಾಜ್ಯಗಳ ಪೈಕಿ 3 ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಈ ಫಲಿತಾಂಶವು ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಹೊನ್ನಾಳಿಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಗೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವು ಬಿಜೆಪಿ ಎದುರಾಳಿಗಳ ಲೆಕ್ಕಾಚಾರ, ತಂತ್ರ, ಅಪಪ್ರಚಾರಕ್ಕೆ ಜನರು ನೀಡಿದ ತೀರ್ಪಾಗಿದೆ ಎಂದರು.
ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ನಿರಂತರ ಹೋರಾಟ: ಕೋಡಿಹಳ್ಳಿ ಚಂದ್ರಶೇಖರ್
ಲೋಕಸಭೆ ಚುನಾವಣೆಯ ಮುನ್ನ ನಡೆದ ಪಂಚ ರಾಜ್ಯಗಳ ಚುನಾವಣೆ ಒಂದು ರೀತಿ ಉಪಾಂತ್ಯ (ಸೆಮಿ ಫೈನಲ್) ಪಂದ್ಯ ಇದ್ದಂತೆ. ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸಗಢ ರಾಜ್ಯಗಳಲ್ಲಿ ಬೆಜಿಪಿ ಅಧಿಕಾರಕ್ಕೆ ಬರುವುದು ದೃಢಪಟ್ಟಿದೆ. ಕಾಂಗ್ರೆಸ್ಸಿನ ಉಚಿತ ಗ್ಯಾರಂಟಿ ಭರವಸೆಗಳು ರಾಜ್ಯದಲ್ಲಿ ವಿಫಲವಾಗಿವೆ. ವಿಫಲ ಯೋಜನೆಗಳ ಭರವಸೆಗಳಿಂದ ಜನರ ಮತ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಫಲಿತಾಂಶ ಸಾರಿ ಹೇಳಿದೆ ಎಂದು ತಿಳಿಸಿದರು. ದೇಶಕ್ಕೆ ಬಲಿಷ್ಠ ನಾಯಕ ಬೇಕು. ಅಂತಹ ಬಲಿಷ್ಠ ನಾಯಕತ್ವ ನೀಡುವ ನಾಯಕ ಪ್ರಧಾನಿ ನರೇಂದ್ರ ಮೋದಿ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ 350ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಮತ್ತೆ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.