Asianet Suvarna News Asianet Suvarna News

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮುನ್ಸೂಚನೆ: ಸಂಸದ ಮುನಿಸ್ವಾಮಿ

ಆಕಾಶದಲ್ಲಿ ಹಾರಾಡುತ್ತಿದ್ದವರಿಗೆ ಮೋದಿ ಒಬ್ಬರೇ ಭಾರತದ ನಾಯಕರು ಎಂಬ ಅರಿವುಂಟಾಗಿದೆ. ರಾಜಾಸ್ಥಾನ ಛತ್ತೀಸ್‌ಘಡ್, ಮಧ್ಯ ಪ್ರದೇಶಗಳಲ್ಲಿ ನಡೆದ ಚುನಾವಣೆಯ ಫಲಿತಾಂಶದಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಜನಾದೇಶ ದೊರೆತಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. 

Narendra Modi predicted to become PM again Says MP S Muniswamy gvd
Author
First Published Dec 4, 2023, 8:49 PM IST

ಕೋಲಾರ (ಡಿ.04): ಆಕಾಶದಲ್ಲಿ ಹಾರಾಡುತ್ತಿದ್ದವರಿಗೆ ಮೋದಿ ಒಬ್ಬರೇ ಭಾರತದ ನಾಯಕರು ಎಂಬ ಅರಿವುಂಟಾಗಿದೆ. ರಾಜಾಸ್ಥಾನ ಛತ್ತೀಸ್‌ಘಡ್, ಮಧ್ಯ ಪ್ರದೇಶಗಳಲ್ಲಿ ನಡೆದ ಚುನಾವಣೆಯ ಫಲಿತಾಂಶದಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಜನಾದೇಶ ದೊರೆತಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ನಗರದ ಕೆಎಸ್‌ಆರ್‌ಟಿ ಬಸ್ ನಿಲ್ದಾಣದ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ನೇತೃತ್ವದಲ್ಲಿ ಪಂಚರಾಜ್ಯಗಳ ಚುನಾವಣೆಗಳಲ್ಲಿ ೪ ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಬಹುಮತ ಲಭಿಸಿದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ, ಸಿಹಿಹಂಚಿ ವಿಜಯೋತ್ಸವ ಆಚರಿಸಿದ ನಂತರ ಮಾತನಾಡಿ, ಚುನಾವಣೆಗಳಲ್ಲಿ ಪಕ್ಷದ ನಾಯಕರಾದ ಜೆ.ಪಿ.ನಡ್ಡಾ, ಅಮಿತ್ ಷಾ ಸೇರಿದಂತೆ ಎಲ್ಲ ನಾಯಕರಿಗೆ ಅಭಿನಂದನೆ ಸಲ್ಲಿಸಿದರು.

ಸಭಾಪತಿ ಗೌರವಕ್ಕೆ ಚ್ಯುತಿ: ಒಂದು ಸಮುದಾಯದ ಮೆಚ್ಚುಗೆ ಗಳಿಸಲು ದೇಶ ವಿರೋಧಿ ಚಟುವಟಕೆಗಳ ಕೃತ್ಯಗಳಿಗೆ ಬೆಂಬಲಿಸುವಂತ ಹೇಳಿಕೆಗಳನ್ನು ನೀಡುತ್ತಿದ್ದರು, ವಿಧಾನಸೌಧದಲ್ಲಿ ಸಭಾಪತಿಗಳಿಗೆ ಗೌರವ ಇಲ್ಲದಂತೆ ನಮ್ಮ ಜಾತಿಯವರಿಗೆ ನೀವೆಲ್ಲರೂ ಸಲಾಮ್ ಹಾಕಬೇಕೆಂಬ ಹೇಳಿಕೆಗಳನ್ನು ನೀಡುವ ಮೂಲಕ ಛೀಮಾರಿ ಹಾಕಿಸಿಕೊಂಡಿದ್ದರೂ ಅವರಿಗೆ ಬುದ್ದಿ ಬಂದಿಲ್ಲ ಕಳೆದ ಲೋಕಸಭಾ ಚುನಾವಣೆಯಲ್ಲಿ ೪ ಸ್ಥಾನಗಳು ಬಂದಿದ್ದು ಈ ಭಾರಿ ೮ ಬರಲಿದೆ ಎಂದರು. ಬಿಜೆಪಿ ಯುವ ಮುಖಂಡ ಓಂಶಕ್ತಿ ಚಲಪತಿ ಮಾತನಾಡಿ, ಕಾಂಗ್ರೆಸ್ ಸಚಿವರೊಬ್ಬರು ಮಸೀದಿಗಳಿಗೆ ಅವರ ಶಾಸಕರನ್ನು ಕರೆದು ಕೊಂಡು ಹೋಗಿ ಮಂತ್ರ, ತಂತ್ರ, ವಾಮಾಚಾರಗಳನ್ನು ಮಾಡಿಸಿದರು, ಆದರೆ ಅಂತಹ ಮೌಢ್ಯಗಳಿಗೆ ಕಿಮ್ಮತ್ತಿನ ಬೆಲೆಯೂ ಇಲ್ಲ, ಅದರ ಯಾವುದೇ ಪರಿಣಾಮವು ಬೀರುವುದಿಲ್ಲ ಎಂದು ವ್ಯಂಗವಾಡಿದರು.

ಮೋದಿ ಮತ್ತೆ ಪ್ರಧಾನಿಯಾಗುವ ಮುನ್ಸೂಚನೆ: ಮೀಜೋರಾಮ್ ಮತಗಳ ಎಣಿಕೆ ಸೋಮವಾರ ನಡೆಯಲಿದೆ, ಮಧ್ಯ ಪ್ರದೇಶ್, ರಾಜಾಸ್ಥಾನ್ ಹಾಗೂ ಛತ್ತೀಸ್‌ಘಡ್‌ಗಳಲ್ಲಿ ಬಿಜೆಪಿ ಮೇಲಗೈ ಸಾಧಿಸಿದ್ದು, ಮೋದಿ ಪ್ರಧಾನಿಯಾಗಿ ಮುಂದುವರೆಯಲು ಗ್ಯಾರಂಟಿ ನೀಡಿದೆ. ದೇಶದಲ್ಲಿ ಆಡಳಿತ ನಡೆಸಲು ಬಿಜೆಪಿ ಮಾತ್ರ ಸಮರ್ಥವಾದ ಪಕ್ಷವಾಗಿದೆ ಎಂಬ ಸ್ವಷ್ಟ ಜನಾದೇಶವು ಸಿಗುವುದು ಖಚಿತವಾಗಿದೆ ಎಂದರು.

ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ನಿರಂತರ ಹೋರಾಟ: ಕೋಡಿಹಳ್ಳಿ ಚಂದ್ರಶೇಖರ್

ಮುಖಂಡರಾದ ಕೆ.ಯು.ಡಿ.ಎ ಮಾಜಿ ಅಧ್ಯಕ್ಷ ವಿಜಯಕುಮಾರ್, ಮಾವು ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ವಾಸು, ನಗರ ಬಿಜೆಪಿ ಅಧ್ಯಕ್ಷ ತಿಮ್ಮರಾಯಪ್ಪ, ಮಾದ್ಯಮ್ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಕಾರ್ಯದರ್ಶಿ ರಾಜೇಶ್ ಸಿಂಗ್, ನಗರಸಭಾ ಸದಸ್ಯ ಪ್ರವೀಣ್ ಗೌಡ, ಗಾಂಧಿನಗರ ವೆಂಕಟೇಶ್, ನಾಮಲ್ ಮಂಜುನಾಥ್, ಸಾಮ ಬಾಬು, ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ. ಮಾಜಿ ನಗರಸಭೆ ಸದಸ್ಯ ಶ್ರೀಗಂಧ ರಾಜೇಶ್, ಜಮೀರ್, ಮಂಜುನಾಥ್, ರತ್ನಮ್ಮ, ರಾಜೇಶ್ವರಿ ಇದ್ದರು.

Follow Us:
Download App:
  • android
  • ios