ಅತ್ಯಾಚಾರ ಆರೋಪದಿಂದ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್‌ ಜಾರಕಿಹೊಳಿ  ಅವರ ಸ್ಥಾನ ಈ ಬಾರಿ ಸಹೋದರನ ಪಾಲಾಗುವ ಸಾಧ್ಯತೆ ಬೇಡಿಕೆಯನ್ನು ತಮ್ಮ ಆಪ್ತರ ಮೂಲಕ ರಮೇಶ್‌ ಮುಂದಿಟ್ಟಿದ್ದಾರೆ 

ಬೆಂಗಳೂರು (ಜು.02): ಅತ್ಯಾಚಾರ ಆರೋಪದಿಂದ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್‌ ಜಾರಕಿಹೊಳಿ ಅವರ ಸ್ಥಾನ ಈ ಬಾರಿ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗೆ ಲಭಿಸುವ ಸಾಧ್ಯತೆಯಿದೆ.

ತಮ್ಮ ವಿರುದ್ಧದ ಪ್ರಕರಣದಿಂದ ಹೊರಬರುವುದು ವಿಳಂಬವಾಗುವುದಾದರೆ ಸಹೋದರ ಬಾಲಚಂದ್ರ ಅವರಿಗೆ ಸಚಿವ ಸ್ಥಾನ ನೀಡಿ ಎಂಬ ಬೇಡಿಕೆಯನ್ನು ತಮ್ಮ ಆಪ್ತರ ಮೂಲಕ ರಮೇಶ್‌ ಮುಂದಿಟ್ಟಿದ್ದಾರೆ ಎನ್ನಲಾಗಿದೆ. 

ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ ನಡೆ : ರಹಸ್ಯ ಭೇಟಿ

ಪ್ರಮುಖ ಖಾತೆ ನೀಡುವುದಾದರೆ ಮಾತ್ರ ತಾನು ಸಂಪುಟ ಸೇರುತ್ತೇನೆ. ಇಲ್ಲದಿದ್ದರೆ ಈಗಿರುವ ಕೆಎಂಎಫ್‌ ಅಧ್ಯಕ್ಷಗಿರಿಯೇ ಸಾಕು ಎಂಬ ಅಭಿಪ್ರಾಯವನ್ನು ಬಾಲಚಂದ್ರ ಜಾರಕಿಹೊಳಿ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಸಂಪುಟ ರಚನೆ ಕಸರತ್ತು ಜೋರಾಗಿದ್ದು, ಈಗಾಗಲೇ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲಾಗುತ್ತಿದೆ. ಅನೇಕರು ಸ್ಥಾನ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ ಈ ಬಾರಿ ಸಾಕಷ್ಟು ಕುತೂಹಲವಿದ್ದು ಹಳಬರು ಹೊಸಬರ ಚರ್ಚೆ ಮಾತ್ರ ಜೋರಾಗಿ ನಡೆಯುತ್ತಿದೆ.