ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ ನಡೆ : ರಹಸ್ಯ ಭೇಟಿ
- ಎರಡು ಮೂರು ದಿನಗಳ ಹಿಂದೆ ದೆಹಲಿಯಲ್ಲಿ ವರಷ್ಠರನ್ನು ಗೌಪ್ಯವಾಗಿ ಭೇಟಿ
- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸೋಮವಾರ ಮತ್ತೆ ಕ್ಷೇತ್ರದಲ್ಲಿ ಕ್ರೀಯಾಶೀಲ
- ಖಾಸಗಿಯಾಗಿ ಅರುಣಕುಮಾರ್ ಜೊತೆ ಗೌಪ್ಯವಾಗಿ ಚರ್ಚೆ
ಬೆಳಗಾವಿ (ಜು.20): ಎರಡು ಮೂರು ದಿನಗಳ ಹಿಂದೆ ದೆಹಲಿಯಲ್ಲಿ ವರಷ್ಠರನ್ನು ಗೌಪ್ಯವಾಗಿ ಭೇಟಿಯಾಗಿದ್ದರು ಎನ್ನಲಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸೋಮವಾರ ಮತ್ತೆ ಕ್ಷೇತ್ರದಲ್ಲಿ ಕ್ರೀಯಾಶೀಲರಾಗಿದ್ದು ಕಂಡು ಬಂತು.
ರಾಜ್ಯ ರಾಜಕೀಯದಲ್ಲಿ ಉಂಟಾಗಿರುವ ಸಂಚಲದ ನಡುವೆ ಜಾರಕಿಹೊಳಿ ಅವರ ನಡೆ ತೀವ್ರ ಕುತೂಹಲ ಕೂಡ ಮೂಡಿಸಿದೆ.
ಜಾರಕಿಹೊಳಿ ಸೀಡಿ ಕೇಸ್ ಕ್ಲೋಸ್ ಆಗಲ್ಲ
ಆದರೆ ಮಾಧ್ಯಮದೊಂದಿಗೆ ಯಾವ ವಿಚಾರಗಳ ಕುರಿತೂ ಅವರು ಮಾತನಾಡಲಿಲ್ಲ. ಸಂಜೆ ವೇಳೆಗೆ ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣಕುಮಾರ್ ನೇತೃತ್ವದಲ್ಲಿ ಬಿಜೆಪಿ ಸಂಘಟನಾ ಸಭೆಗೆ ಗೈರಾಗಿದ್ದ ರಮೇಶ್ ನಂತರ ಅದೇ ಹೋಟೆಲ್ನನಲ್ಲಿ ಖಾಸಗಿಯಾಗಿ ಅರುಣಕುಮಾರ್ ಜೊತೆ ಗೌಪ್ಯವಾಗಿ ಚರ್ಚೆ ನಡೆಸಿದರು.
ಅವರ ಸಹೋದರ ಬಾಲಚಂದ್ರ ಹಾಗೂ ಲಖನ್ ಕೂಡ ಈ ವೇಳೆ ಹಾಜರಿದ್ದರು.