Asianet Suvarna News Asianet Suvarna News

ಎಂಟಿಬಿ, ಆನಂದ್‌ ಸಿಂಗ್‌ಗೆ ಟಾಂಗ್‌ : ಮುನಿರತ್ನ ಬೆಂಬಲಿಸಿದ H.ವಿಶ್ವನಾಥ್

  • ಸಂಪುಟ ವಿಸ್ತರಣೆ ಬಳಿಕ  ಎಂ.ಟಿ.ಬಿ ನಾಗರಾಜ್, ಆನಂದ ಸಿಂಗ್ ಖಾತೆ ವಿಚಾರದಲ್ಲಿ ಅಸಮಾಧಾನ 
  • ಕೊಟ್ಟ ಖಾತೆಯಲ್ಲಿ ಕೆಲಸ ಮಾಡಿ ತೋರಿಸಬೇಕು ಎಂದು ಎಚ್. ವಿಶ್ವನಾಥ್  ಟಾಂಗ್
H vishwanath taunts to MTB nagaraj anand singh snr
Author
Bengaluru, First Published Aug 9, 2021, 12:19 PM IST
  • Facebook
  • Twitter
  • Whatsapp

ಮೈಸೂರು (ಆ.09): ಸಂಪುಟ ವಿಸ್ತರಣೆ ಬಳಿಕ  ಎಂ.ಟಿ.ಬಿ ನಾಗರಾಜ್, ಆನಂದ ಸಿಂಗ್ ಖಾತೆ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಕೊಟ್ಟ ಖಾತೆಯಲ್ಲಿ ಕೆಲಸ ಮಾಡಿ ತೋರಿಸಬೇಕು ಎಂದು ಎಚ್. ವಿಶ್ವನಾಥ್ ಹೇಳಿದರು. 

ಮೈಸೂರಿನಲ್ಲಿಂದು ಸುವರ್ಣ ನ್ಯೂಸ್.ಕಾಂ ಜೊತೆಗೆ ಇಂದು ಮಾತನಾಡಿದ ಎಚ್. ವಿಶ್ವನಾಥ್  ಈ ಸಂದರ್ಭದಲ್ಲಿ ಖಾತೆ ಬಗ್ಗೆ ಅಸಮಾಧಾನ ಹೊರಹಾಕುವುದು ಸರಿಯಲ್ಲ.  ಆನಂದ್ ಸಿಂಗ್, ಎಂ.ಟಿ.ಬಿ ನಾಗರಾಜ್ ಸಮಾಧಾನ ಮಾಡಿಕೊಂಡು ಕೆಲಸ ಮಾಡಬೇಕು. ಇರೋದು ಇನ್ನು 20 ತಿಂಗಳು ಅವಧಿ ಮಾತ್ರ. ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಸಚಿವರು ಕಾರ್ಯನಿರ್ವಹಿಸಬೇಕು ಎಂದರು. 

'ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ : ಯಾವಾಗ ಏನು ಆಗುತ್ತೋ ಹೇಳಲಾಗದು'

ನನಗಾಗಿರುವ ಅವಮಾನದಷ್ಟು ಆನಂದ್ ಸಿಂಗ್ ಅವರಿಗೆ ಅವಮಾನ ಆಗಿದೆಯಾ..? ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಬಂದೆ. ನನಗೆ ಏನು ಕೊಟ್ಟಿದ್ದಾರೆ. ನಾನು ನೋವು ಅನುಭವಿಸಲಿಲ್ಲವೆ? ಸಿಕ್ಕ ಖಾತೆಯಲ್ಲೇ ಕೆಲಸ ಮಾಡಿ ತೋರಿಸಬೇಕು ಎಂದು.

ನಾನು ಮಂತ್ರಿ ಆದಾಗ ನನಗೆ ಕನ್ನಡ ಸಂಸ್ಕೃತಿ ಖಾತೆ ಕೊಟ್ಟಿದ್ದರು. ಅದರಲ್ಲೇ ಕೆಲಸ ಮಾಡಿ ತೋರಿಸಿದ್ದೆ. ಇಂಥದ್ದೆ ಖಾತೆ ಕೊಡಿ ಎಂದು ಸಿಎಂ ಮೇಲೆ ಒತ್ತಡ ಹಾಕುವುದು ಸರಿಯಲ್ಲ. ಈ ವಿಚಾರದಲ್ಲಿ ಮುನಿರತ್ನ ಅವರ ಹೇಳಿಕೆಯನ್ನ ನಾನು ಬೆಂಬಲಿಸುತ್ತೇನೆ ಎಂದು ಎಚ್ ವಿಶ್ವನಾತ್ ಹೇಳಿದರು. 

Follow Us:
Download App:
  • android
  • ios