ಪಕ್ಷಕ್ಕೆ ದುಡಿಯದೆ ಅಧಿಕಾರ ಅನುಭವಿಸಿದ ನಾಯಕರು ಇಂದು ಬೇರೆಯವರ ಬಗ್ಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ . ಪಕ್ಷದ ಹಿರಿಯರಾದ ಜಿ.ಎಂ. ಸಿದ್ದೇಶ್ವರ ಅವರ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದಾರೆ.  ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮಾಡಾಳ್ ವಿರೂಪಾಕ್ಷಪ್ಪನ ಭ್ರಷ್ಟಾಚಾರ ಹಾಗೂ ರೇಣುಕಾಚಾರ್ಯ ಪ್ಯಾಮಿಲಿ ಎಸ್ಸಿ ಜಾತಿ ಪ್ರಮಾಣ ಪಡದಿದ್ದೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದ್ ರಾಜ್ 

ದಾವಣಗೆರೆ(ಡಿ.13): ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆಂಡ್ ಟೀಮ್ ಉಚ್ಛಾಟನೆಗೆ ಶೋಷಿತ ವರ್ಗಗಳ ಒಕ್ಕೂಟ ಅಗ್ರಹಿಸಿದೆ.

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದ್ ರಾಜ್ ಅವರು. ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ ಪಕ್ಷಕ್ಕೆ ಕೊಡುಗೆ ಏನು ಕೊಟ್ಟಿದ್ದಾರೆ?. ಜಿಲ್ಲೆಯಲ್ಲಿ ಭಿನ್ನಮತ ಹುಟ್ಟಿಹಾಕಿದ್ದೇ ರೇಣುಕಾಚಾರ್ಯ ಆಂಡ್ ಟೀಮ್‌. ಇವರ ಆಟದಿಂದ ಪ್ರಾಮಾಣಿಕ ಬಿಜೆಪಿ ಕಾರ್ಯಕರ್ತರರಿಗೆ ಪ್ರತಿದಿನ ನೋವು ಆಗುತ್ತಿದೆ ಎಂದು ಆರೋಪಿಸಿದ್ದಾರೆ. 

ವಿಜಯೇಂದ್ರ ನೇತೃತ್ವದಲ್ಲಿ ಮುಂದಿನ ಚುನಾವಣೆ: ರೇಣುಕಾಚಾರ್ಯ

ಪಕ್ಷಕ್ಕೆ ದುಡಿಯದೆ ಅಧಿಕಾರ ಅನುಭವಿಸಿದ ನಾಯಕರು ಇಂದು ಬೇರೆಯವರ ಬಗ್ಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ . ಪಕ್ಷದ ಹಿರಿಯರಾದ ಜಿ.ಎಂ. ಸಿದ್ದೇಶ್ವರ ಅವರ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮಾಡಾಳ್ ವಿರೂಪಾಕ್ಷಪ್ಪನ ಭ್ರಷ್ಟಾಚಾರ ಹಾಗೂ ರೇಣುಕಾಚಾರ್ಯ ಪ್ಯಾಮಿಲಿ ಎಸ್ಸಿ ಜಾತಿ ಪ್ರಮಾಣ ಪಡದಿದ್ದೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಯಾವ ನೈತಿಕತೆ ಇದೆ ಇವರಿಗೆ ಮಾತನಾಡಲು. ಪಕ್ಷವನ್ನು ಒಡೆಯುತ್ತಿರುವ ಮುಖಂಡರಿಂದ ಬಿಜೆಪಿ ರಕ್ಷಿಸಬೇಕಿದೆ 'ರೆಡ್ ಲೈಟ್ ಬಾಯ್ಸ' ಅಂತ ರೇಣುಕಾಚಾರ್ಯ ಟೀಮ್ ಗೆ ಹೊಸ ಹೆಸರು ನಾಮಕರಣ ಮಾಡಿದ್ದಾರೆ. ರೆಡ್ ಲೈಟ್ ಬಾಯ್ಸ್ ಈ ವರ್ತನೆ ಇಲ್ಲಿಗೆ ನಿಲ್ಲಸಬೇಕು. ಇಲ್ಲದಿದ್ರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

ಬಿಜೆಪಿ ಪಕ್ಷ ಕಟ್ಟಿದ ಮಾಜಿ ಸಚಿವ ರವೀಂದ್ರನಾಥ ಅವರನ್ನ ಕಟ್ಟಿಕೊಂಡು ಅವರಿಗೆ ಮಸಿ ಬಳಿಯುವ ಕೆಲಸ ರೇಣುಕಾಚಾರ್ಯ ಟೀಮ್ ಮಾಡ್ತಿದೆ ಅಂತ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದ್ ರಾಜ್ ಅವರು ಆರೋಪಿಸಿದ್ದಾರೆ. 

ಸ್ವಪಕ್ಷೀಯರ ವಿರುದ್ಧ ಯತ್ನಾಳ್‌ ಟೀಕೆ ನಿಲ್ಲಿಸಬೇಕು: ರೇಣುಕಾಚಾರ್ಯ

ಕಲಬುರಗಿ: ಸ್ವಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಮಾತನಾಡುವುದನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡಲೇ ನಿಲ್ಲಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ದಶಕಕ್ಕೂ ಹೆಚ್ಚು ಕಾಲ ಸೈಕಲ್ ತುಳಿಯುವ ಮೂಲಕ ಪಕ್ಷ ಕಟ್ಟಿ ಬೆಳೆಸಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪನವರ ವಿರುದ್ಧ ಧ್ವನಿ ಎತ್ತುವುದು ಸರಿಯಲ್ಲ. ನಾವು ಹೋರಾಟ ಯಾರ ವಿರುದ್ಧ ಮಾಡಬೇಕು ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ಮಾತೆತ್ತಿದ್ದರೇ ಹಿಂದುತ್ವದ ಬಗ್ಗೆ ಮಾತನಾಡುವವರು ತಾವು ಯಾವ ಪಕ್ಕದಲ್ಲಿ ಇದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.

ಕೆಲವು ವಿಷಯಗಳ ಕುರಿತು ಚರ್ಚಿಸಲು ದೆಹಲಿ ಯತ್ತ ಹೋಗುತ್ತೇವೆ, ಕಾದು ನೋಡಿ. ಈಗಲೇ ಎಲ್ಲವನ್ನು ಬಹಿರಂಗಪ ಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ನೀತಿ ಗಳ ವಿರುದ್ಧ ಒಂದಾಗಿ ಹೋರಾಟ ಮಾಡಿ ಬಿಜೆಪಿ ಜೊತೆ ಇರಬೇಕಾದವರು, ಅವರದ್ದೇ ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಸುತ್ತಾಡುತ್ತಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಪೇಪರ್ ಸಿಂಹಗೆ ಟಿಕೆಟ್ ಕೊಡದೆ ಕೊಚ್ಚೆಯಲ್ಲಿ ಎಸೆದಿದ್ದಾರೆ: ಪ್ರತಾಪ್ ಸಿಂಹ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ವಕ್ಫ್‌ ವಿರುದ್ಧ ರಾಜ್ಯಾದ್ಯಂತ ಪ್ರವಾಸ ಮಾಡಿ, ನಮ್ಮ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಹೋಗುತ್ತಿರುವ ವಿಜಯೇಂದ್ರ ವ್ಯಕ್ತಿಯಲ್ಲ. ಬದಲಾಗಿ ಅವರು ನಮ್ಮ ಪಕ್ಷದ ದೊಡ್ಡ ಶಕ್ತಿಯಾಗಿದ್ದಾರೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಹೋಗಬೇಕಾದರೆ ಯತ್ನಾಳ್ ಅವರು ನಡುವಳಿಕೆಗಳನ್ನು ಬದಲು ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದರು. 

ಕಾಂಗ್ರೆಸ್ ಸರ್ಕಾರ ದೀನ ದಲಿತರ, ರೈತರ, ಮಠ ಮಾನ್ಯಗಳ ಜಮೀನು ಕಬಳಿಸುವ ಹುನ್ನಾರ ನಡೆಸುತ್ತಿದೆ. ನಮ್ಮ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಇಲ್ಲಿ ಆಗುತ್ತಿರುವ ವಾಸ್ತವಾಂಶವನ್ನು ಕುರಿತು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದ್ದರು.