ಕಲಬುರಗಿ(ಜ.21): ಖಾತೆ ಬದಲಾವಣೆಯಿಂದ ಉಂಟಾದ ಅಸಮಾಧಾನ ಸದ್ಯದಲ್ಲೇ ಶಮನ ಆಗುತ್ತದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲವನ್ನೂ ಪರಿಹರಿಸಲಿದ್ದಾರೆ. ಅಸಮಾಧಾನಗೊಂಡವರೊಂದಿಗೆ ಸಿಎಂ ಮಾತನಾಡಿ ಸಮಸ್ಯೆಯನ್ನ ಬಗೆಹರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಇಂದು (ಗುರುವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆಯಲ್ಲಿ ವಿಜಯೇಂದ್ರ ಪಾತ್ರ ಎನ್ನುವ ಆರೋಪಗಳೆಲ್ಲಾ ಶುದ್ಧ ಸುಳ್ಳಾಗಿದೆ. ಯಡಿಯೂರಪ್ಪನವರು ನಾಲ್ಕು ದಶಕಗಳ ಹೋರಾಟದ ಮೂಲಕ ಸಿಎಂ ಆದವರಾಗಿದ್ದಾರೆ. ಡಿಸಿಎಂ ಆಗಿ, ಸಿಎಂ ಆಗಿ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ಅವರೇ ಖಾತೆ ಹಂಚಿಕೆಯನ್ನ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. 

ಬಿಎಸ್‌ವೈ ಸಂಪುಟದಲ್ಲಿ ಭಾರೀ ಬದಲಾವಣೆ, ಯಾರಿಗೆ ಯಾವ ಖಾತೆ..?

ಯಡಿಯೂರಪ್ಪನವರಿಗೆ ಯಾರ ಹಸ್ತಕ್ಷೇಪದ ಅಗತ್ಯವೂ ಬೀಳೋದಿಲ್ಲ, ಅಲ್ಲದೇ ನನ್ನ ಹಸ್ತಕ್ಷೇಪವಂತೂ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ.