Asianet Suvarna News Asianet Suvarna News

ರಾಜೀನಾಮೆ ಕೇಳಿದ ಸಿಎಂಗೆ ನಾಗೇಂದ್ರರಿಂದ ಬೆದರಿಕೆ: ಕೋಟ ಶ್ರೀನಿವಾಸ ಪೂಜಾರಿ

ಮುಖ್ಯಮಂತ್ರಿಗಳ ಮಾತಿಗೂ ಮನ್ನಣೆ ಕೊಡುವುದಿಲ್ಲ. ನನ್ನದೇ ನನಗೆ ದಾರಿ ಎಂಬಂತೆ ಸಚಿವರು ವರ್ತಿಸಿದ್ದಾರೆ. ತಕ್ಷಣ ಸಚಿವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿಗಳಿಗೇನು ತೊಂದರೆ? ಹೀಗಾದರೆ ನಿಮ್ಮ ರಾಜೀನಾಮೆಗೂ ನಾವು ಆಗ್ರಹಿಸಬೇಕಾಗುತ್ತದೆ ಎಂದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ 

B Nagendra Threatened the CM Siddaramaiah who asked him to Resign Says Kota Shrinivas Poojari grg
Author
First Published Jun 2, 2024, 10:07 AM IST

ಉಡುಪಿ(ಜೂ.02):  ಮುಖ್ಯಮಂತ್ರಿಗಳು ಸಚಿವ ನಾಗೇಂದ್ರನನ್ನು ಕರೆದು ರಾಜೀನಾಮೆ ಕೊಡಲು ಹೇಳಿದ್ದಾರಂತೆ. ಆದರೆ ನನ್ನ ರಾಜೀನಾಮೆ ಕೇಳಿದರೆ ಎಲ್ಲರ ವಿಚಾರ ಬಹಿರಂಗ ಮಾಡುತ್ತೇನೆ ಎಂದು ನಾಗೇಂದ್ರ ಬೆದರಿಸಿದ್ದಾರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದಿಗ್ಧತೆಯಲ್ಲಿದ್ದಾರೆ. ಸಚಿವರ ರಾಜೀನಾಮೆ ಪಡೆಯಲಾಗದಷ್ಟು ಸಿದ್ದರಾಮಯ್ಯ ದುರ್ಬಲರಾಗಿದ್ದಾರೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದರು. 

ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮುಖ್ಯಮಂತ್ರಿಗಳ ಮಾತಿಗೂ ಮನ್ನಣೆ ಕೊಡುವುದಿಲ್ಲ. ನನ್ನದೇ ನನಗೆ ದಾರಿ ಎಂಬಂತೆ ಸಚಿವರು ವರ್ತಿಸಿದ್ದಾರೆ. ತಕ್ಷಣ ಸಚಿವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿಗಳಿಗೇನು ತೊಂದರೆ? ಹೀಗಾದರೆ ನಿಮ್ಮ ರಾಜೀನಾಮೆಗೂ ನಾವು ಆಗ್ರಹಿಸಬೇಕಾಗುತ್ತದೆ ಎಂದರು. 

ವಾಲ್ಮೀಕಿ ನಿಗಮದ ಹಗರಣ: ಎಂಡಿ, ಅಧಿಕಾರಿ ಅರೆಸ್ಟ್‌

ವಾಲ್ಮೀಕಿ ನಿಗಮದ ಹಗರಣದಲ್ಲಿ ರಾಜ್ಯ ಸರ್ಕಾರ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ನಿಗಮದ ಹಣ ಹೈದರಾಬಾದ್‌ ಮೂಲದ ಕಂಪನಿಗಳಿಗೆ ಹೋಗಿದೆ. ಇದು ರಾಜ್ಯವನ್ನು ಮೀರಿದ ಹಗರಣವಾದ್ದರಿಂದ ಅದರ ಕುರಿತು ಸಿಬಿಐ ತನಿಖೆ ಆಗಬೇಕು ಎಂದರು. ಆದರೆ ಸರ್ಕಾರ ಎಸ್‌ಐಟಿ ನೇಮಕ ಮಾಡಿ ತನಿಖೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದರು.

Latest Videos
Follow Us:
Download App:
  • android
  • ios