ನಾಯಕನಿಲ್ಲದ ಬಿಜೆಪಿ ಶಿಥಿಲವಾಗುತ್ತಿದೆ: ಆಯನೂರು ಮಂಜುನಾಥ್ ವ್ಯಂಗ್ಯ
ನಮ್ಮದು ಬಲಿಷ್ಠ ಪಕ್ಷ ಎಂದು ಬಿಜೆಪಿಯಲ್ಲಿ ಅನಾಯಕತ್ವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಯಕನಿಲ್ಲದೇ ಪಕ್ಷ ಇಷ್ಟೊಂದು ಶಿಥಿಲವಾಗುತ್ತಿದೆ ಎಂಬುದಕ್ಕೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹೇಳಿಕೆ ಸಾಕ್ಷಿಯಾಗಿದೆ.
ಶಿವಮೊಗ್ಗ (ಅ.15): ನಮ್ಮದು ಬಲಿಷ್ಠ ಪಕ್ಷ ಎಂದು ಬಿಜೆಪಿಯಲ್ಲಿ ಅನಾಯಕತ್ವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಯಕನಿಲ್ಲದೇ ಪಕ್ಷ ಇಷ್ಟೊಂದು ಶಿಥಿಲವಾಗುತ್ತಿದೆ ಎಂಬುದಕ್ಕೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹೇಳಿಕೆ ಸಾಕ್ಷಿಯಾಗಿದೆ. ಹೀಗಿದ್ದರೂ ಸ್ವಲ್ಪ ದಿನದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದೋಗುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾಯಕರ ಜೊತೆ ನೇರವಾಗಿ ಮಾತನಾಡುವ ಶಕ್ತಿ ಬಿಜೆಪಿ ವ್ಯವಸ್ಥೆಯಲ್ಲಿ ಇಲ್ಲ.
ಚುನಾವಣೆ ಮುಗಿದು ಐದು ತಿಂಗಳಾದರೂ ಕಳೆದರೂ, ಈವರೆಗೆ ವಿಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಪಕ್ಷ ಕಟ್ಟಿದ ಬೆಳೆಸಿದ ಬಿ.ಎಸ್.ಯಡಿಯೂರಪ್ಪ ಅವರನ್ನು ಮೂಲೆಗೆ ಕೂರಿಸಿದ್ದಾರೆ. ಯಡಿಯೂರಪ್ಪ ಮೂಲೆಗೆ ಸೇರಿದ ಮೇಲೆ ಆ ಪಕ್ಷಕ್ಕೆ ನಾಯಕರೇ ಇಲ್ಲವಾಗಿದೆ ಎಂದರು. ಹೀಗಿದ್ದರೂ ಕಾಂಗ್ರೆಸ್ ಬಗ್ಗೆ ಇಲ್ಲಸಲ್ಲದ ಆರೋಪವನ್ನು ಬಿಜೆಒಪಿ ಮಾಡುತ್ತಿದೆ. ಈಶ್ವರಪ್ಪ ನೀರಾವರಿ ಸಚಿವರಾಗಿದ್ದಾಗ ಯಾವಾಗಲೂ ನೀರಾವರಿ ವಿಷಯ ಮಾತನಾಡಲಿಲ್ಲ. ಆಗಲು ಅವರು ಶಿವಮೊಗ್ಗಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು ಎಂದು ದೂರಿದರು.
ರಾಜ್ಯ ಸರ್ಕಾರ ವಿದ್ಯುತ್‌ಗೆ ಹಣ ಕಟ್ಟದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ: ಜಿ.ಟಿ.ದೇವೇಗೌಡ
ಕಾವೇರಿ ವಿಷಯ ಮಾತಾಡದ ಬಿಜೆಪಿ ಸಂಸದರು: ಬಿಜೆಪಿ ಸಂಸದರು ಕಾವೇರಿ ವಿಷಯದಲ್ಲಿ ಮಾತನಾಡ್ತಿಲ್ಲ. ರಾಜ್ಯದ ಹಿತಕಾಯುವ ಸಣ್ಣ ಪ್ರಯತ್ನವೂ ಮಾಡುತ್ತಿಲ್ಲ. ಆದರೆ, ಶಿವಮೊಗ್ಗದ ಮೂಲೆಯೋಳಗೆ ಸಣ್ಣ ಘಟನೆ ನಡೆದರೆ ಅದರಿಂದ ದೊಡ್ಡ ಲಾಭ ಪಡೆಯಲು ಶಾಂತವಾಗಿರುವ ಶಿವಮೊಗ್ಗದ ಶಾಂತಿಯನ್ನು ಇನ್ನು ಕದಡುವ ಕೆಲಸ ಮಾಡ್ತಿದ್ದಾರೆ. ಅಧಿಕಾರಿಗಳ ಉತ್ತಮ ಕಾರ್ಯದಿಂದ ರಾಗಿಗುಡ್ಡ ಗಲಾಟೆ ಈಗ ತಣ್ಣಗೆ ಆಗಿದೆ. ಅದೇ ವಿಷಯ ಇಟ್ಟುಕೊಂಡು ಮತ್ತೆ ಮತ್ತೆ ಮಾತನಾಡೋದು ನೋಡಿದರೆ, ರಾಗಿಗುಡ್ಡ ವಿಷಯ ಬಹಳ ಬೇಗ ತಣ್ಣಗಾಗಿ ಹೋಗಿದ್ದು ಈಶ್ವರಪ್ಪ ಅವರಿಗೆ ಸಮಾಧಾನ ತಂದಿಲ್ಲ ಎಂದು ಕಾಣುತ್ತದೆ ಎಂದು ಛೇಡಿಸಿದರು.
ಮೋದಿ ಜನಪರ ಯೋಜನೆಗಳು ಭಾರತೀಯರಿಗೆ ಶ್ರೀರಕ್ಷೆ: ಚಕ್ರವರ್ತಿ ಸೂಲಿಬೆಲೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗನ ಕೊಲೆಯಾಗಿದ್ದರೆ, ಡಿ.ಕೆ.ಶಿವಕುಮಾರ್ ತಮ್ಮ ಕೊಲೆಯಾಗಿದ್ದರೆ ಎಂಬ ಬೇಜವಬ್ದಾರಿ ಮಾತುಗಳನ್ನು ಈಶ್ವರಪ್ಪ ನಿಲ್ಲಿಸಬೇಕು. ಅಧಿಕಾರ ಕಳೆದು ಕೊಂಡ ಕೂಡಲೇ ದುಬೈನಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ದೂರು ಕೊಟ್ಟಿದ್ದರು. ಈಗ ಆ ತನಿಖೆ ಎಲ್ಲಿಗೆ ಬಂದಿದೆ? ಬಿಜೆಪಿ ಮುಖಂಡರು ಕೈಗೆ ಕತ್ತಿ ಕೊಡುವುದಿದ್ದರೆ ತಮ್ಮ ಮಕ್ಕಳ ಕೈಗೆ ಕತ್ತಿ ಕೊಟ್ಟಿ ಬಿಡಲಿ. ಆಗ ಕಾನೂನು ಏನೂ ಮಾಡುತ್ತದೆ ಎಂದು ಗೊತ್ತಾಗುತ್ತದೆ. ಯಾರೋ ಮಕ್ಕಳನ್ನು ಮುಂದೆ ಬಿಟ್ಟು ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುವಂತ ಸಣ್ಣತನದ ರಾಜಕಾರಣವನ್ನು ಬಿಡಬೇಕು ಎಂದ ಅವರು, ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಲಿ. ಕಾವೇರಿ ವಿಷಯ ಪರಿಹರಿಸಲು ಪ್ರಯತ್ನಿಸಲಿ. ರಾಜ್ಯಕ್ಕೆ ಹೆಚ್ಚಿನ ಅನುದಾನ, ಪರಿಹಾರ ಕೊಡಿಸಲು ಪ್ರಯತ್ನಿಸಲಿ ಎಂದು ಸಲಹೆ ನೀಡಿದರು.