ರೌಡಿಶೀಟರ್ ಸೇರ್ಪಡೆ ಬಗ್ಗೆ ಅಶ್ವತ್ಥನಾರಾಯಣ ಸಮರ್ಥನೆ
ದೇಶದಲ್ಲಿ ಕಾನೂನು ಎಲ್ಲರಿಗೆ ಒಂದೇ ರೀತಿಯಲ್ಲಿ ಅನ್ವಯ ಆಗುತ್ತದೆ. ಕಾನೂನು ಮೀರಿ ಯಾರು ನಡೆಯಲು ಸಾಧ್ಯವಿಲ್ಲ. ಆದರೆ ಎಲ್ಲರಿಗೂ ನಾವು ನಾಮಕರಣ ಮಾಡೋದು ತಪ್ಪು. ಸಮಾಜದಲ್ಲಿ ಎಲ್ಲರಿಗೂ ಬಾಳಿ ಬದುಕಲು ಅವಕಾಶ ಇದೆ ಎಂದು ರೌಡಿ ಶೀಟರ್ ಗಳನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಕಾಂಗ್ರೆಸ್ ಸಮರ್ಥನೆ ಮೂಲಕ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ನ.28): ದೇಶದಲ್ಲಿ ಕಾನೂನು ಎಲ್ಲರಿಗೆ ಒಂದೇ ರೀತಿಯಲ್ಲಿ ಅನ್ವಯ ಆಗುತ್ತದೆ. ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮ ಆಗುತ್ತದೆ. ಕಾನೂನು ಮೀರಿ ಯಾರು ನಡೆಯಲು ಸಾಧ್ಯವಿಲ್ಲ. ಆದರೆ ಎಲ್ಲರಿಗೂ ನಾವು ನಾಮಕರಣ ಮಾಡೋದು ತಪ್ಪು. ಸಮಾಜದಲ್ಲಿ ಎಲ್ಲರಿಗೂ ಬಾಳಿ ಬದುಕಲು ಅವಕಾಶ ಇದೆ ಎಂದು ರೌಡಿ ಶೀಟರ್ ಗಳನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಕಾಂಗ್ರೆಸ್ ಸಮರ್ಥನೆ ಮೂಲಕ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು ಸಮಾಜದಲ್ಲಿ ಉತ್ತಮವಾಗಿ ಬದುಕಲು ಅವಕಾಶ ಕೊಡದೆ ನಿಂದನೆ ಮಾಡಬಾರದು. ಕಾನೂನಿನಲ್ಲಿ ಶಿಕ್ಷೆ ಆಗಿದ್ದರೆ ಕೇಳಬೇಕು. ತಪ್ಪು-ಒಪ್ಪು ಇಲ್ಲದೆ ಆಪಾದನೆ ಇಲ್ಲದೆ ಬದುಕಲು ಅವಕಾಶ ಮಾಡಬೇಕು. ಉತ್ತಮವಾಗಿ ಬದುಕಲು ಕಾನೂನಿನಲ್ಲಿಯೇ ಎಲ್ಲರಿಗೂ ಅವಕಾಶ ಇದೆ. ತಪ್ಪು ಮಾಡಿ ಶಿಕ್ಷೆ ಆಗಿದ್ದರೆ ಯಾರೂ ಕೂಡ ಅವರ ಪರವಾಗಿ ನಿಲ್ಲುವುದಿಲ್ಲ. ಆದರೆ, ಉತ್ತಮವಾಗಿ ಬದುಕುತ್ತೇನೆ ಎಂದಾಗ ನಾವು ನಿಂದನೆ ಮಾಡಬಾರದು ಎಂದು ಸೈಲೆಂಟ್ ಸುನುಲ್ ಮತ್ತು ಫೈಟರ್ ರವಿ ಸೇರ್ಪಡೆ ಬಗ್ಗೆ ಪರೋಕ್ಷವಾಗಿ ಸಮರ್ಥನೆ ಮಾಡಿಕೊಂಡರು.
ಬಿಜೆಪಿ ಮೂಲಕ ರಾಜಕೀಯ ಎಂಟ್ರಿಗೆ ರೌಡಿ ಸೈಲೆಂಟ್ ಸುನೀಲ ಸಿದ್ಧತೆ? ಯಾವ ಕ್ಷೇತ್ರ?
ಒಕ್ಕಲಿಗ ಮೀಸಲಾತಿ ಬಗ್ಗೆ ವೈಯಕ್ತಿಕ ಅಭಿಪ್ರಾಯ ಹೇಳೊಲ್ಲ: ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಒತ್ತಾಯ ಇದೆ. ಸ್ವಾಮೀಜಿಗಳು ಸೇರಿ ಎಲ್ಲರೂ ಒತ್ತಾಯ ಮಾಡಿದ್ದಾರೆ. ಅನೇಕ ಸಮುದಾಯಗಳು ಮೀಸಲಾತಿ ಹೆಚ್ಚಳದ ಬೇಡಿಕೆ ಇಟ್ಟಿದ್ದಾರೆ. ಎಲ್ಲರ ಬೇಡಿಕೆಗಳನ್ನು ಗಮನಕ್ಕೆ ತೆಗೆದುಕೊಂಡು ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ಬೇರೆ ಸಮುದಾಯಗಳು ಒತ್ತಡ ಮಾಡಿವೆ. ನಾನು ಸರ್ಕಾರದ ಭಾಗವಾಗಿ ವಯಕ್ತಿಕ ಅಭಿಪ್ರಾಯ ಹೇಳಲು ಸಾಧ್ಯವಿಲ್ಲ. ಕಾನೂನಿನ ಅವಕಾಶ ಬಳಕೆ ಮಾಡಿ, ಬೇಡಿಕೆ ಪರಿಶೀಲನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಮೀಸಲಾತಿ ಹೆಚ್ಚಳದಲ್ಲಿ ಸರ್ಕಾರ ಯಾವುದೇ ಇಕ್ಕಟ್ಟಿನಲ್ಲಿ ಇಲ್ಲ. ಜನರು ಕೊಟ್ಟ ಅವಕಾಶವನ್ನ ನಾವು ಉಪಯೋಗ ಮಾಡಿಕೊಳ್ಳಬೇಕು. ಎಲ್ಲಾ ವಿಚಾರ ಚರ್ಚೆ ಮಾಡಿ ಏನು ಮಾಡಬೇಕೋ ಅದನ್ನ ಮಾಡುತ್ತೇವೆ ಎಂದು ತಿಳಿಸಿದರು.
ಮುಂದುವರಿದ ಕಾಂಗ್ರೆಸ್ ಕಿಡಿ: ಇನ್ನು ಬೆಳಗ್ಗೆ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತ ಇಂಡುವಾಳು ಸಚ್ಚಿದಾನಂದ ಸೇರಿ ಹಲವು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಈ ವೇಳೆ ಮಂಡ್ಯದ ರೌಡಿ ಫೈಟರ್ ರವಿ ಕೂಡಾ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಈ ಕುರಿತ ಫೋಟೋವನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇದು ಬಿಜೆಪಿ ಸಂಸ್ಕೃತಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದೆ. ಇದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಬಿಜೆಪಿಯ ಬಗ್ಗೆ ಆರೋಪ ವ್ಯಕ್ತಪಡಿಸಿದ್ದಾರೆ.