ಒಂದು ಕಡೆ ಕಾಂಗ್ರೆಸ್ ಅಡ್ಡಿ, ಇನ್ನೊಂದು ಕಡೆ ಆಪ್ತಮಿತ್ರ ಜನಾರ್ದರೆಡ್ಡಿ : ದೇವರ ಮೊರೆ ಹೋದ ಶ್ರೀರಾಮುಲು!
ವಿಧಾನಸಭಾ ಚುನಾವಣೆಗೂ ಮುನ್ನ ಜಿಲ್ಲಾ ಉಸ್ತುವಾರಿ, ಸಾರಿಗೆ ಸಚಿವ ಶ್ರೀರಾಮುಲು ಮತ್ತೊಮ್ಮೆ ದೇವರ ಮೊರೆ ಹೋಗಿದ್ದಾರೆ.
ಬಳ್ಳಾರಿ (ಮಾ.19): ವಿಧಾನಸಭಾ ಚುನಾವಣೆಗೂ ಮುನ್ನ ಜಿಲ್ಲಾ ಉಸ್ತುವಾರಿ, ಸಾರಿಗೆ ಸಚಿವ ಶ್ರೀರಾಮುಲು ಮತ್ತೊಮ್ಮೆ ದೇವರ ಮೊರೆ ಹೋಗಿದ್ದಾರೆ.
ಹೌದು, ಕ್ಷೇತ್ರ ಘೋಷಣೆ ಮಾಡಿಕೊಂಡ ಬಳಿಕ ಅಯ್ಯಪ್ಪ ಸ್ವಾಮಿ(Ayyappa swamy) ಮಾಲೆ ಧಾರಣೆ ಮಾಡಿದ್ದಾರೆ. ಪ್ರತಿಬಾರಿ ಚುನಾವಣೆ ವೇಳೆ ಅಥವಾ ನಾಮಪತ್ರ ಸಲ್ಲಿಸುವ ಮುನ್ನ ಮಾಲೆ ಧಾರಣೆ ಮಾಡುತ್ತಿದ್ದ ಸಚಿವ ಶ್ರೀರಾಮುಲು(Sriramulu), ಈ ಬಾರಿ ಎರಡು ದಿನ ಮಾತ್ರ ವ್ರತಾಚರಣೆ ಮಾಡಲಿದ್ದಾರೆ. ಶನಿವಾರ ಶಬರಿಮಲೆಗೆ ತೆರಳಿದ್ದಾರೆ. ಆಪ್ತರ ಸಮ್ಮುಖದಲ್ಲಿ ಮಾಲಾಧಾರಣೆ ಮಾಡಿರುವ ಅವರು ಕೆಲವು ಸ್ನೇಹಿತರೊಂದಿಗೆ ಶಬರಿಮಲೆಗೆ ಹೋಗಿದ್ದಾರೆ.
ಈ ಬಾರಿ ಸಚಿವ ಶ್ರೀರಾಮುಲು ಅವರಿಗೆ ಕಾಂಗ್ರೆಸ್(Congress) ಮಾತ್ರವಲ್ಲದೇ ಆಪ್ತಮಿತ್ರ ಜನಾರ್ದನ ರೆಡ್ಡಿ(Janardanareddy) ಪಕ್ಷದಿಂದಲೂ ಪೈಪೋಟಿ ಇದೆ. ವಿರೋಧಿಗಳ ಜತೆಗೆ ಹೋರಾಟ ಮಾಡುವುದು ಸಹಜ. ಆದರೆ ಆಪ್ತರು ದೂರವಾದ ಮೇಲೆ ಅವರ ವಿರುದ್ಧ ಹೋರಾಟ ಕಷ್ಟವಾಗುತ್ತದೆ ಎನ್ನುತ್ತಾರೆ ಶ್ರೀರಾಮುಲು ಆಪ್ತರು.
ಇಂದು ಶಬರಿಮಲೆ ಅಯ್ಯಪ್ಪಸನ್ನಿಧಿಗೆ ಸಚಿವ ರಾಮುಲು
ವಿಧಾನಸಭಾ ಚುನಾವಣೆಗೂ ಮುನ್ನ ಜಿಲ್ಲಾ ಉಸ್ತುವಾರಿ, ಸಾರಿಗೆ ಸಚಿವ ಶ್ರೀರಾಮುಲು ಶಬರಿಮಲೆ ಮಾಲೆ ಹಾಕಿದ್ದಾರೆ. ಆಪ್ತರ ಸಮ್ಮುಖದಲ್ಲಿ ಅವರು ಶನಿವಾರ ಅಯ್ಯಪ್ಪ ಸ್ವಾಮಿ ಮಾಲಾ ಧಾರಣೆ ಮಾಡಿದರು. ಇಂದು ಶಬರಿಮಲೆಗೆ ತೆರಳಲಿದ್ದಾರೆ. ಕೆಲವು ಸ್ನೇಹಿತರು ಅವರ ಜೊತೆ ಶಬರಿಮಲೆಗೆ ತೆರಳಲಿದ್ದಾರೆ. ಈ ಬಾರಿ ಸಚಿವ ಶ್ರೀರಾಮುಲು ಅವರಿಗೆ ಕಾಂಗ್ರೆಸ್ ಮಾತ್ರವಲ್ಲದೆ, ಆಪ್ತಮಿತ್ರ ಜನಾರ್ದನ ರೆಡ್ಡಿ ಪಕ್ಷದಿಂದಲೂ ಪೈಪೋಟಿ ಇದೆ.ಹೀಗಾಗಿ ದೇವರ ಮೊರೆ ಹೋಗಿದ್ದಾರೆ ಎಂದು ಹೇಳಲಾಗಿದೆ.
ಬಳ್ಳಾರಿಯಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡುವುದರಿಂದ ನನಗೆ ಮತ್ತಷ್ಟು ಆನೆ ಬಲ: ಶಾಸಕ ಸೋಮಶೇಖರ್ ರೆಡ್ಡಿ