ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ, ಕನ್ನಡದಲ್ಲಿ ಚುನಾವಣಾ ಮಂತ್ರ ಘೋಷಿಸಿದ ಮೋದಿ!

ಪ್ರಧಾನಿ ಮೋದಿ ಬೀದರ್‌ನಿಂದ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಇದೇ ವೇಳೆ ಚುನಾವಣಾ ಮಂತ್ರ ಘೋಷಿಸಿದ್ದಾರೆ. ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ವಿವರಿಸಿದ ಮೋದಿ, ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.
 

Assembly Election Karnataka become no 1 state only people elect double engine Govt Says PM Modi in Mega campaign Bidar ckm

ಹುಮ್ಮಾಬಾದ್(ಏ.29): ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಮಂತ್ರ ಘೋಷಿಸಿದ್ದಾರೆ. ಬೀದರ್‌ನ ಹುಮ್ನಾಬಾದ್ ಸಮಾವೇಶದಲ್ಲಿ ಜನತೆಯನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕ ವಿಧಾನಸಭಾ ಚುನಾವಣೆಗೆ ಹೊಸ ಮಂತ್ರ ನೀಡಿದ್ದಾರೆ. ಕನ್ನಡದಲ್ಲೇ ಈ ಮಂತ್ರ ಘೋಷಿಸಿದ ಮೋದಿ, ಬೀದರ್‌ನಿಂದ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.

ವಿಶ್ವಗುರು ನಾಡಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಬೀದರ್‌ನಿಂದಲೇ ನನ್ನ ಚುನಾವಣೆ ಪ್ರಚಾರ ಬೀದರ್‌ನಿಂದ ಆರಂಭಗೊಳ್ಳುತ್ತಿುವುದು ನನ್ನ ಸೌಭಾಗ್ಯ ಎಂದರು. ಪ್ರಧಾನ ಮಂತ್ರಿ ಅಭ್ಯರ್ಥಿಯಾದಾಗ ನನಗೆ ಬೀದರ್ ಜನರ ಆಶೀರ್ವಾದ ಸಿಕ್ಕಿತ್ತು. ನನಗೆ ಪ್ರತಿ ಬಾರಿ ಅಭೂತಪೂರ್ವ ಪ್ರೀತಿ, ಬೆಂಬಲ ನೀಡಿದ್ದಾರೆ. ಈ ಬಾರಿ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂದು ಮೋದಿ ಕನ್ನಡದಲ್ಲಿ ಹೇಳಿದ್ದಾರೆ.

ಇದು ಕೇವಲ ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡುವ ಚುನಾವಣೆಯಾಗಿದೆ. ಭಾರತದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುವ ಚುನಾವಣೆಯಾಗಿದೆ. ಕರ್ನಾಟಕ ಅಭಿವೃದ್ಧಿಯಾದರೆ ಮಾತ್ರ ಭಾರತದ ಅಭಿವೃದ್ಧಿಯಾಗಲಿದೆ. ಅತ್ಯಧಿಕ ವಂದೇ ಭಾರತ್ ರೈಲು, ಅತ್ಯಾಧುನಿಕ ಮೂಲಭೂತ ಸೌಕರ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ ಎಂದು ಮೋದಿ ಮನವಿ ಮಾಡಿದ್ದಾರೆ.

ಕರ್ನಾಟಕವನ್ನ ದೇಶದ ನಂಬರ್ 1 ರಾಜ್ಯವನ್ನಾಗಿ ಮಾಡಲು ರಾಜ್ಯದಲ್ಲಿ ಡಬಲ ಎಂಜಿನ್ ಸರ್ಕಾರ ಇರುವುದು ಅಗತ್ಯವಾದ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೆ, ಕರ್ನಾಟಕ ನಂಬರ್ 1 ರಾಜ್ಯವನ್ನಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಕರ್ನಾಟಕಕ್ಕೆ ಬಂದಿರುವ ವಿದೇಶಿ ಬಂಡವಾಳ ನೀವು ಗಮನಿಸಿದರೆ, ಇದು ದಾಖಲೆಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ 30,000 ಕೋಟಿ ವಿದೇಶಿ ಬಂಡಾಳ ಆಗಮಿಸಿತ್ತು. ಬಿಜೆಪಿ ಸರ್ಕಾರದಲ್ಲಿ90,000 ಕೋಟಿ ವಿದೇಶಿ ಬಂಡವಾಳ ಹರಿದು ಬಂದಿದೆ. ಇದು ಕಾಂಗ್ರೆಸ್ ಸರ್ಕಾರಕ್ಕಿಂತ 3 ಪಟ್ಟು ಹೆಚ್ಚು ಎಂದು ಮೋದಿ ಹೇಳಿದ್ದರು.

ಡಬಲ್ ಎಂಜಿನ್ ಸರ್ಕಾರ ಎಂದರೆ, ಡಬಲ್ ಸೌಲಭ್ಯ, ಡಬಲ್ ಸ್ಪೀಡ್. ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಇಲ್ಲದಿದ್ದಾಗ, ಸಣ್ಣ ಯೋಜನೆ ಪೂರ್ಣಗೊಳಿಸಲು ವರ್ಷಗಳೇ ಹಿಡಿಯುತ್ತಿತ್ತ. ನೀರು, ವಿದ್ಯುತ್ ಪೂರೈಕೆ ಸೇರಿದಂತೆ ಹಲವು ಮೂಲಭೂತ ಸೌಕರ್ಯ ಇಲ್ಲದೆ ಜನರು ಪರದಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿತ್ತು. ಆದರೆ ಬಿಜೆಪಿ ಸರ್ಕಾರ ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಮೂಲಕ ರೈತರಿಗೆ ನೀಡಿರುವ ಸೌಲಭ್ಯ ಹಾಗೂ ಲಾಭ ಏನೂ ಅನ್ನೋದು ನಿಮ್ಮಲ್ಲೆರಿಗೂ ತಿಳಿದಿದೆ. ನಾವು ಈ ಯೋಜನೆ ಜಾರಿಗೆ ತಂದಾಗ, ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಕರ್ನಾಟಕದಲ್ಲಿತ್ತು. ಈ ಸರ್ಕಾರ ಲಾಭಾರ್ಥಿಗಳ ಹೆಸರನ್ನು ಕೇಂದ್ರಕ್ಕೆ ನೀಡಲು ಹಿಂದೇಟು ಹಾಕಿತ್ತು. ರೈತರ ಹೆಸರು ಪಟ್ಟಿ ಮಾಡಿ ಕೇಂದ್ರಕ್ಕೆ ಕಳುಹಿಸಲು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ನಿರ್ಲಕ್ಷ್ಯ ತೋರಿತ್ತು. ಕಾರಣ ಈ ಹಣ ನೇರವಾಗಿ ರೈತರ ಕೈಸೇರುತ್ತಿತ್ತು. ಇದರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರಕ್ಕೆ ಭ್ರಷ್ಟಾಚಾರ ಮಾಡಲು ಅವಕಾಶ ಇರಲಿಲ್ಲ ಎಂದು ಮೋದಿ ಹೇಳಿದ್ದಾರೆ.

ಚುನಾವಣೆಗೂ ಮೊದಲು ರೈತರ ಬಳಿ ಹೋಗಿ ನಾಟಕ ಮಾಡುತ್ತಿತ್ತು. ಚುನಾವಣೆ ಬಳಿಕ ಎಲ್ಲಾ ಭರವಸೆ ಮರೆತು ಭ್ರಷ್ಟಾಚಾರದಲ್ಲಿ ಮುಳುಗುತ್ತಿತ್ತು. ಹಿಮಾಚಲ ಪ್ರದೇಶ, ಚತ್ತೀಸಘಡದಲ್ಲಿ ಜನರು ಇದೀಗ ಪರಿತಪಿಸುತ್ತಿದ್ದಾರೆ. ಪೆಟ್ರೋಲ್‌ನಲ್ಲಿ ಎಥೆನಾಲ್ ಬ್ಲೆಂಡಿಂಗ್ ಮಾಡುವ ಕಾರ್ಯ ನಡೆಯುತ್ತಿದೆ. ಇದರಿಂದ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪೆಟ್ರೋಲ್ ಪ್ರಮಾಣ ಕಡಿಮೆಯಾಗಲಿದೆ. ನಮ್ಮ ಸರ್ಕಾರದಲ್ಲಿ ಎಥೆನಾಲ್ ಉತ್ಪಾನದೆ ಡಬಲ್ ಆಗಿದೆ. 

Latest Videos
Follow Us:
Download App:
  • android
  • ios