Asianet Suvarna News Asianet Suvarna News

ಸಂಪುಟ ಸೇರಲು ಲಾಬಿ : ಈ ಬಾರಿ ಯುವಕರಿಗೆ ಮಣೆ

  • ಬಿಜೆಪಿಯಲ್ಲಿ ಸಂಪುಟ ರಚನೆಗೆ  ಭರ್ಜರಿಯಾಗಿಯೇ ಲಾಬಿ ಅರಂಭವಾಗಿದೆ
  • ಈ ಬಾರಿ ಹಿರಿಯರ ಬದಲು ಯುವಕರಿಗೆ ಆದ್ಯತೆ ನೀಡುವ ಸಾಧ್ಯತೆ 
aspirants start lobbying for Minister posts in Bommai Cabinet snr
Author
Bengaluru, First Published Jul 29, 2021, 8:55 AM IST
  • Facebook
  • Twitter
  • Whatsapp

ಬೆಂಗಳೂರು (ಜು.29) : ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲೇ ಬಿಜೆಪಿಯಲ್ಲಿ ಸಂಪುಟ ರಚನೆಗೆ  ಭರ್ಜರಿಯಾಗಿಯೇ ಲಾಬಿ ಅರಂಭವಾಗಿದೆ. ಈ ಬಾರಿ ಹಿರಿಯರ ಬದಲು ಯುವಕರಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. 

ವಲಸಿಗರಿಗೂ ಸೇರಿದಂತೆ ಇದುವರೆಗೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದವರಿಗೆ   ಹೊಸ ಸಂಪುಟದಲ್ಲಿ ಅವಕಾಶ ಸಿಗುವುದೋ ಇಲ್ಲವೋ ಎಂಬ ಆತಂಕ ಎದುರಾಗಿದ್ದರೆ ಈ ಬಾರಿಯಾದರೂ ತಮಗೆ ಸಚಿವ ಸ್ಥಾನ ಸಿಗಬೇಕು ಎಂಬ ಪಟ್ಟನ್ನು  ಹಿಂದಿನ ಸಂಪುಟ ವಿಸ್ತರಣೆಯಲ್ಲಿ ಅವಕಾಶ  ವಂಚಿತರಾದವರು ಬಹಿರಂಗವಾಗಿ ಪ್ರಸ್ತಾಪಿಸುತ್ತಿದ್ದಾರೆ. 

ಅನೇಕ ಶಾಸಕರು ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ರಾಜ್ಯಕ್ಕೆ ಆಗಮಿಸಿದ್ದ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್  ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಕರ್ನಾಟಕಕ್ಕೆ 'ಬಸವರಾಜ' ಮೊದಲ ದಿನವೇ ಕಿಕ್ ಸ್ಟಾರ್ಟ್!

ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಸಚಿವ ಸಂಪುಟ ಬಗ್ಗೆ ಮುಖ್ಯಮಂತ್ರಿಗಳು ಮತ್ತು ರಾಷ್ಟ್ರೀಯ ನಾಯಕರು ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ. ಅತಿ ಶೀಘ್ರದಲ್ಲಿ ಸಚಿವ ಸಂಪುಟ ರಚನೆಯಾಗಲಿದೆ ಎಂದು ತಿಳಿಸಿದರು. 

ಶಾಸಕ ತಿಪ್ಪಾರೆಡ್ಡಿ ಮಾತನಾಡಿ ಈ ಬಾರಿ ಸಚಿವ ಸ್ಥಾನ ಸಿಗಬಹುದು ಎನ್ನುವ ವಿಶ್ವಾಸ ಇದೆ. ಹೊಸಬರಿಗೆ ಅವಕಾಶ ಕೊಟ್ಟರೆ ಪಕ್ಷ ಬೆಳೆಯಲು ಅವಕಾಶ ಸಿಗಲಿದೆ ಎಂದು ಹೇಳಿದರು. ಬಿಸಿ ಪಾಟೀಲ್ ಸಿಎಂ ಬದಲಾಗಿದ್ದಾರೆಯೇ ಹೊರತು ಬಿಜೆಪಿ ಅಲ್ಲ. ನಾವು ಅನ್ಯ ಪಕ್ಷದಿಂದ ಬಂದಿರುವ 17 ಮಂದಿ ಖುಷಿಯಾಗಿದ್ದೇವೆ. ದೆಹಲಿ ವರಿಷ್ಠರ ಮಾರ್ಗದರ್ಶನದಲ್ಲಿ ಎಲ್ಲವೂ ಒಳ್ಳೆಯದು ಆಗಲಿದೆ ಎಂದರು. ಶಾಸಕ ಕುಮಾರ್ ಬಂಗಾರಪ್ಪ ಸಿದ್ದು ಸವದಿ ಕೂಡ ಆಕಾಂಕ್ಷಿ ಎಂದರು. 

Follow Us:
Download App:
  • android
  • ios