Asianet Suvarna News Asianet Suvarna News

ಸಿಬಿಐ ತನಿಖೆ ಆಗ್ರಹಿಸಿದ ಕಾಂಗ್ರೆಸ್‌ಗೆ ನೋಟಿಸ್ ಎಚ್ಚರಿಕೆ ಕೊಟ್ಟ ಅಶ್ವಥ್ ನಾರಾಯಣ

* ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳಿಗೆ ವಸ್ತುಗಳ ಖರೀದಿಯಲ್ಲಿ ಅಕ್ರಮ ಆರೋಪ
* ಸಿಬಿಐ ತನಿಖೆ ಆಗ್ರಹಿಸಿದ ಕಾಂಗ್ರೆಸ್‌ಗೆ ಸಚಿವ ಅಶ್ವಥ್ ನಾರಾಯಣ ತಿರುಗೇಟು
* ಲೀಗಲ್ ನೋಟೀಸ್ ಎಚ್ಚರಿಕೆ ನೀಡಿದ ಅಶ್ವಥ್ ನಾರಾಯಣ

ashwath narayana Hits back at Congress Over gttc tender allegation rbj
Author
Bengaluru, First Published Sep 12, 2021, 3:51 PM IST

ಬೆಂಗಳೂರು, (ಸೆ.12): ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳಿಗೆ ವಸ್ತುಗಳ ಖರೀದಿಯಲ್ಲಿ ನಡೆದಿದ್ದು, ಅದನ್ನು ಸಿಬಿಐ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್ ನ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ತಿರುಗೇಟು ಕೊಟ್ಟಿದ್ದಾರೆ.

ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡಿರುವ ಕಾಂಗ್ರೆಸ್ ನಾಯಕರಾದ ವಿ.ಎಸ್. ಉಗ್ರಪ್ಪ ಹಾಗೂ ಎಚ್.ಎಂ. ರೇವಣ್ಣ ಅವರಿಗೆ ಕಾನೂನು ಮೂಲಕವೇ ಉತ್ತರ ಕೊಡುತ್ತೇನೆ. ಒಬ್ಬರು ಮಾಜಿ ಸಚಿವರು, ಇನ್ನೊಬ್ಬರು ಮಾಜಿ ಸಂಸದರು. ಮಾಜಿ ಸಂಸದರು ವಕೀಲರೂ ಹೌದು. ಆದರೂ ಇಷ್ಟು ಬೇಜವಾಬ್ದಾರಿಯಾಗಿ ಆರೋಪ ಮಾಡಿರುವ ಅವರಿಗೆ ಲೀಗಲ್ ನೋಟೀಸ್ ಕೊಡುತ್ತೇನೆ ಎಂದರು.

ಶಿಕ್ಷಣ ನೀತಿ ವಿದ್ಯಾರ್ಥಿ ಪರ, ರಾಜಕೀಯಕ್ಕಾಗಿ ಟೀಕೆ ಬೇಡ: ಅಶ್ವತ್ಥ್‌

ರಾಜಕೀಯವಾಗಿ ದೂರುವ, ಗಾಳಿಯಲ್ಲಿ ಗುಂಡು ಹೊಡೆಯುವ ಕೀಳುಮಟ್ಟದ ಆರೋಪವಾಗಿದೆ. ಅಲ್ಲದೆ, ನಮಗೆ ಮಸಿ ಬಳಿಯುವ ದುರುದ್ದೇಶವಷ್ಟೇ. ಉಪಕರಣ ಖರೀದಿಯಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿದೆ ಎಂಬುದು ಶುದ್ಧ ಸುಳ್ಳು ಎಂದ ಸ್ಪಷ್ಟಪಡಿಸಿದರು.

ಟೆಂಡರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಡೆದಿದೆ. ಎಡಿಎ (Aeronautical Development Agency), ಡಿಆರ್ʼಡಿಒ (Defence Research and Development Organisation) ಹಾಗೂ ಎಂಎಸ್ʼಎಂಇ (Ministry of Micro, Small and Medium Enterprises) ಸಂಸ್ಥೆಗಳ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಟೆಂಡರ್ ತಾಂತ್ರಿಕ ಸಮಿತಿಯ ಸದಸ್ಯರು. ಅವರ ಸಲಹೆ ಮೇಲೆಯೇ ಎಲ್ಲವೂ ನಡೆಯುವುದು ಎಂದು ಡಾ. ಅಶ್ವಥ್‌ ನಾರಾಯಣ ವಿವರಿಸಿದ್ದಾರೆ. ಬಹುತೇಕ‌ ಉಪಕರಣಗಳನ್ನು ಕೇಂದ್ರ ಸರಕಾರಿ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆಯಿಂದ ಖರೀದಿ ಮಾಡಲಾಗುತ್ತಿದೆ. ಅದೂ ಟೆಂಡರ್ ಮೂಲಕ ಪಾರದರ್ಶಕವಾಗಿ ನಡೆಯುತ್ತದೆ ಎಂದು ತಿಳಿಸಿದರು.

Follow Us:
Download App:
  • android
  • ios