ಮುಸ್ಲಿಮರೇ ಹೆಚ್ಚೆಚ್ಚು ಕಾಂಡೋಂ ಬಳಸೋದು: ಮೋದಿಗೆ ಓವೈಸಿ ಟಾಂಗ್
ಸಂಪತ್ತಿನ ಮರುಹಂಚಿಕೆ ನೆಪದಲ್ಲಿ ನಿಮ್ಮ ಮಂಗಳಸೂತ್ರವನ್ನು ಕಿತ್ತು, ಹೆಚ್ಚು ಮಕ್ಕಳು ಹೆರುವ ಕುಟುಂಬಗಳಿಗೆ ನೀಡ್ತಾರೆ ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಮುಸ್ಲಿಂ ಸಂಘಟನೆಗಳು ಹಾಗೂ ರಾಜಕೀಯ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ (ಏ.29): ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಸಾಮಾನ್ಯ ಆಸ್ತಿ ಕಸಿದು, ಅದನ್ನು ಹೆಚ್ಚು ಮಕ್ಕಳು ಹೆರುವ ಕುಟುಂಬಗಳಿಗೆ ನೀಡುತ್ತಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಒವೈಸಿ ತಿರುಗೇಟು ನೀಡಿದ್ದಾರೆ. ಇಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಒವೈಸಿ ‘ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದುತ್ತಾರೆ ಎಂದು ಹಿಂದೂಗಳಲ್ಲಿ ದ್ವೇಷ ಭಾವನೆ ಬಿತ್ತುತ್ತಿದ್ದಾರೆ. ಆದರೆ ಅವರ ಸರ್ಕಾರದ ಅಂಕಿ ಅಂಶವೇ ಹೇಳುವಂತೆ ಮುಸ್ಲಿಮರ ಜನನ ಪ್ರಮಾಣ ಕಡಿಮೆಯಾಗಿದೆ. ಜೊತೆಗೆ ಮುಸ್ಲಿಮರೇ ಹೆಚ್ಚು ಕಾಂಡೋಂ ಬಳಕೆ ಮಾಡುತ್ತಾರೆ ಎಂದು ಹೇಳಲು ನನಗೆ ಯಾವುದೇ ಸಂಕೋಚವಿಲ್ಲ’ ಎಂದು ಹೇಳಿದರು. ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ "ಮುಸ್ಲಿಮರು ಕಾಂಡೋಂ ಹೆಚ್ಚಾಗಿ ಬಳಸುತ್ತಾರೆ" ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಹೇಳಿದ್ದ, 'ಹೆಚ್ಚು ಮಕ್ಕಳನ್ನು ಹೆರುವವರು' ಎನ್ನುವ ಹೇಳಿಕೆಗೆ ಓವೈಸಿ ತಿರುಗೇಟು ನೀಡಿದ್ದಾರೆ. ಆಡಳಿತ ಪಕ್ಷದ 'ಮೋದಿ ಕಿ ಗ್ಯಾರಂಟಿ' ಟ್ಯಾಗ್‌ಲೈನ್‌ಗೆ ವ್ಯಂಗ್ಯ ಮಾಡಿದ ಅವರು, "(ಪ್ರಧಾನಿ) ಒಂದೇ ಒಂದು ಗ್ಯಾರಂಟಿ ಕೊಡ್ತಿದ್ದಾರೆ ಅದೇನೆಂದರೆ, ದಲಿತರು ಮತ್ತು ಮುಸ್ಲಿಮರನ್ನು ದ್ವೇಷ ಮಾಡೋದು' ಎಂದಿದ್ದಾರೆ.
ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಿದ್ದಾರೆ ಎನ್ನುವ ಭಯವನ್ನು ನೀವೇಕೆ ಸೃಷ್ಟಿ ಮಾಡುತ್ತಿದ್ದೀರಿ. ಮೋದಿ ಸರ್ಕಾರದ ಅಂಕಿಅಂಶಗಳ ಪ್ರಕಾರ, ಮುಸ್ಲಿಮರಲ್ಲಿ ಜನಸಂಖ್ಯೆಯ ಬೆಳವಣಿಗೆ ಮತ್ತು ಫಲವತ್ತತೆ ಕಡಿಮೆಯಾಗಿದೆ. ಮುಸ್ಲಿಮರು ಕಾಂಡೋಂಗಳನ್ನು ಹೆಚ್ಚಾಗಿ ಬಳಸುತ್ತಾರೆ ಮತ್ತು ಇದನ್ನು ಹೇಳಲು ನನಗೆ ಯಾವುದೇ ಮುಜುಗರ ಕೂಡ ಇಲ್ಲ ಎಂದು ಓವೈಸಿ ಗುಡುಗಿದ್ದಾರೆ. "ನರೇಂದ್ರ ಮೋದಿ ಅವರು ಮುಸ್ಲಿಮರು ಬಹುಸಂಖ್ಯಾತ ಸಮುದಾಯವಾಗುತ್ತಾರೆ ಎಂದು ಹಿಂದೂಗಳಲ್ಲಿ ಭಯವನ್ನು ಹುಟ್ಟುಹಾಕುತ್ತಿದ್ದಾರೆ, ನೀವು ಮುಸ್ಲಿಮರ ಬಗ್ಗೆ ಎಷ್ಟು ದಿನ ಭಯ ಹುಟ್ಟಿಸುತ್ತೀರಿ? ನಮ್ಮ ಧರ್ಮ ಬೇರೆ ಇರಬಹುದು, ಆದರೆ ನಾವು ಈ ದೇಶಕ್ಕೆ ಸೇರಿದವರು' ಎಂದು ಓವೈಸಿ ಹೇಳಿದ್ದಾರೆ.
ಬಿಜೆಪಿಯಾಗಲಿ ಅಥವಾ ಪ್ರಧಾನಿಯಾಗಲಿ ಇದುವರೆಗೆ ಓವೈಸಿ ನೀಡಿರುವ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ತಿಂಗಳು ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮೋದಿಯವರು ನೀಡಿದ ಹೇಳಿಕೆಯ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಯ ಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿತ್ತು.
ರಾಷ್ಟ್ರೀಯ ಜಾತಿ ಸಮೀಕ್ಷೆಯ ಭಾಗವಾಗಿ "ಆರ್ಥಿಕ ಮತ್ತು ಸಾಂಸ್ಥಿಕ ವರದಿ" ಗಾಗಿ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿನ ಯೋಜನೆಗಳನ್ನು ಉಲ್ಲೇಖಿಸಿ ಮತ್ತು ಅವರ ಹಿಂದಿನ ಡಾ. ಮನಮೋಹನ್ ಸಿಂಗ್ ಅವರ ಟೀಕೆಯೊಂದಿಗೆ ಅದನ್ನು ಸಂಯೋಜಿಸಿದ ಪ್ರಧಾನಿ, "ತಾಯಂದಿರು ಹಾಗೂ ಸೋದರಿಯರು ಹೊಂದಿರುವ ಚಿನ್ನವನ್ನು ಕಾಂಗ್ರೆಸ್ ಲೆಕ್ಕ ಹಾಕಲಿದೆ. ಬಳಿಕ ಇದನ್ನು ಅವರಿಗೆ ಹಂಚಲಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಈ ಹಿಂದೆ ಹೇಳಿದಂತೆ ದೇಶದ ಎಲ್ಲಾ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದಿತ್ತು.
ಶಿವಾಜಿ, ಚೆನ್ನಮ್ಮರಂತಹ ರಾಜರಿಗೆ ಕಾಂಗ್ರೆಸ್ ಅವಮಾನ: ಮೋದಿ ಮತ್ತೆ ಮುಸ್ಲಿಂ ಅಸ್ತ್ರ
ಇದನ್ನು ಯಾರಿಗೆ ಹಂಚುಉತ್ತಾರೆ ಎಂದರೆ, ಯಾರಲ್ಲಿ ಹೆಚ್ಚು ಮಕ್ಕಳು ಹೊಂದಿದ್ದಾರೋ ಅವರಿಗೆ ಇದನ್ನು ಹಂಚುತ್ತಾರೆ. ಒಳನುಸುಳುಕೋರರಿಗೆ ಹಂಚುತ್ತಾರೆ. ನೀವು ಕಷ್ಟಪಟ್ಟು ದುಡಿದ ಹಣ ನುಸುಳುಕೋರರ ಪಾಲಾಗಬೇಕೇ? ಎಂದು ಪ್ರಶ್ನೆ ಮಾಡಿದ್ದರು. ಮೋದಿ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಕಾಂಗ್ರೆಸ್ ದ್ವೇಷ ಭಾಷಣದ ಕಾರಣದ ನೀಡಿ ಮೋದಿ ವಿರುದ್ಧ ದೂರು ನೀಡಿತ್ತು.
'ನಾನು ಕ್ಯಾಮೆರಾ ಮುಂದೆ ನಟನೆ ಮಾಡೋನು, ಆದರೆ ಇವನು... ಪ್ರಧಾನಿ ಮೋದಿ ವಿರುದ್ಧ ಪ್ರಕಾಶ ರಾಜ್ ಏಕವಚನದಲ್ಲಿ ವಾಗ್ದಾಳಿ!