Asianet Suvarna News Asianet Suvarna News

ಶಿವಾಜಿ, ಚೆನ್ನಮ್ಮರಂತಹ ರಾಜರಿಗೆ ಕಾಂಗ್ರೆಸ್‌ ಅವಮಾನ: ಮೋದಿ ಮತ್ತೆ ಮುಸ್ಲಿಂ ಅಸ್ತ್ರ

ಕಾಂಗ್ರೆಸ್ಸಿಗೆ ಔರಂಗಜೇಬ, ನವಾಬರ ಅತ್ಯಾಚಾರ, ಅವರು ಮಂದಿರಗಳನ್ನು ಧ್ವಂಸ ಮಾಡಿದ್ದು ನೆನಪಿಗೆ ಬರುವುದಿಲ್ಲ. ಹಿಂದೂ ರಾಜರನ್ನು ಅವಮಾನಿಸುವವರ ಜೊತೆ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.

Lok Sabha Elections 2024 PM Modi is again a Muslim weapon at Belagavi gvd
Author
First Published Apr 29, 2024, 9:26 AM IST

ಬೆಳಗಾವಿ (ಏ.29): ಅಲ್ಪಸಂಖ್ಯಾತರ ಓಲೈಕೆ ಹಾಗೂ ಮತಬ್ಯಾಂಕ್‌ ತುಷ್ಟೀಕರಣ ಸಂಬಂಧ ಕಾಂಗ್ರೆಸ್‌ ವಿರುದ್ಧ ಸತತ 6ನೇ ದಿನವೂ ಟೀಕಾಪ್ರಹಾರ ಮುಂದುವರಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ಸಿಗೆ ಔರಂಗಜೇಬ, ನವಾಬರ ಅತ್ಯಾಚಾರ, ಅವರು ಮಂದಿರಗಳನ್ನು ಧ್ವಂಸ ಮಾಡಿದ್ದು ನೆನಪಿಗೆ ಬರುವುದಿಲ್ಲ. ಹಿಂದೂ ರಾಜರನ್ನು ಅವಮಾನಿಸುವವರ ಜೊತೆ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಮೋದಿ, ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ವಿರುದ್ಧ ಟೀಕಾಪ್ರಹಾರ ನಡೆಸಿದರು. 

ಶುಕ್ರವಾರ ವಿಜಯಪುರದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂದಿ, ‘ಅಂದು ರಾಜರು ಮತ್ತು ಮಹಾರಾಜರ ಆಳ್ವಿಕೆಯಲ್ಲಿ ಏನು ಬೇಕಾದರೂ ಮಾಡಬಹುದಿತ್ತು.  ಜನರ ಭೂಮಿಯನ್ನು ಅವರು ಮನಬಂದಂತೆ ಕಬಳಿಸುತ್ತಿದ್ದರು. ಕಾಂಗ್ರೆಸ್‌ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದು, ಇಂತಹ ಕಬಳಿಕೆ ಪ್ರವೃತ್ತಿಗೆ ತಡೆ ಬಿತ್ತು’ ಎಂದಿದ್ದರು. ರಾಹುಲ್‌ರ ಈ ಹೇಳಿಕೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿ, ಕಾಂಗ್ರೆಸ್‌ನ ಯುವರಾಜ (ರಾಹುಲ್‌) ಉದ್ದೇಶಪೂರ್ವಕವಾಗಿ ನವಾಬರು, ನಿಜಾಮರು ಎಸಗಿದ ದೌರ್ಜನ್ಯಗಳನ್ನು ಮರೆ ಮಾಚಿದ್ದಾರೆ. 

ಸ್ವಾತಂತ್ರ್ಯ ಚಳವಳಿಯನ್ನು ಮತಬ್ಯಾಂಕಿಗಾಗಿ ತುಷ್ಟೀಕರಣದ ಚರಿತ್ರೆಯಾಗಿ ಮಾಡಿದ ಪಕ್ಷ ಕಾಂಗ್ರೆಸ್. ಭಾರತದ ಮಹಾರಾಜರು ಅತ್ಯಾಚಾರಿಗಳು; ಬಡವರ ಜಮೀನನ್ನು ಕಿತ್ತುಕೊಂಡವರೆಂದು ಚರಿತ್ರೆ ಬರೆಸಿದ್ದರು. ಈ ಹಿಂದೆ ನಿಜವಾಗಿ ಅತ್ಯಾಚಾರ ನಡೆಸಿದ್ದು ನವಾಬರು, ನಿಜಾಮರು, ಸುಲ್ತಾನರು. ಆದರೆ, ಕಾಂಗ್ರೆಸ್ಸಿಗೆ ಔರಂಗಜೇಬನ ಅತ್ಯಾಚಾರ, ಆತ ಹಿಂದೂ ಮಂದಿರಗಳನ್ನು ಧ್ವಂಸ ಮಾಡಿದ ಘಟನೆಗಳು ನೆನಪಿಗೆ ಬರುವುದಿಲ್ಲ. ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚೆನ್ನಮ್ಮರಂತಹ ಮಹನೀಯರನ್ನು ಅವಮಾನಿಸುವ ದುಷ್ಕೃತ್ಯಕ್ಕೆ ಕಾಂಗ್ರೆಸ್‌ ಮುಂದಾಗಿದೆ ಎಂದು ಟೀಕಿಸಿದರು.

ಕರ್ನಾಟಕ ಕಾಂಗ್ರೆಸ್ಸಿನ ಪಾಪಕ್ಕೆ ಈ ಬಾರಿ ಶಿಕ್ಷೆ ನೀಡಿ: ಪ್ರಧಾನಿ ಮೋದಿ

ಹಿಂದೂಗಳಿಗೆ ಅವಮಾನ ಮಾಡುವವರ ಜೊತೆ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದೆ. ಭಾರತದ ವಿಭಜನೆಯಲ್ಲಿ ದೊಡ್ಡ ಪಾತ್ರ ವಹಿಸಿದವರನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತದೆ. ಕಾಂಗ್ರೆಸ್ಸಿನ ತುಷ್ಟೀಕರಣ ನೀತಿ ಅವರ ಪ್ರಣಾಳಿಕೆಯಲ್ಲೂ ವಿವರವಾಗಿ ಹೊರಬಂದಿದೆ ಎಂದರು. ಈ ಹಿಂದಿನ ಬಿಜೆಪಿ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿತ್ತು. ಆದರೆ, ಕಾಂಗ್ರೆಸ್‌ ಪಕ್ಷ ನಿಷೇಧಿತ ಪಿಎಫ್ಐ ಸಂಘಟನೆ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಕಿಡಿ ಕಾರಿದರು.

Follow Us:
Download App:
  • android
  • ios