ಸಚಿವ ರಾಜಣ್ಣ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ: ಕೆಲ ಸಮಯ ಗದ್ದಲ
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಸಚಿವ ಕೆ.ಎನ್ ರಾಜಣ್ಣ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿ, ಕೆಲ ಸಮಯ ಗದ್ದಲದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಕಾಂಗ್ರೆಸ್ ಉಸ್ತುವಾರಿ ಹಾಗೂ ಸಂಸದ ಚಂದ್ರಶೇಖರ್ ಅವರಿಗೆ ಮುಜುಗರವಾದ ಪ್ರಸಂಗ ನಡೆಯಿತು.
ಹಾಸನ (ಮಾ.28): ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಸಚಿವ ಕೆ.ಎನ್ ರಾಜಣ್ಣ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿ, ಕೆಲ ಸಮಯ ಗದ್ದಲದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಕಾಂಗ್ರೆಸ್ ಉಸ್ತುವಾರಿ ಹಾಗೂ ಸಂಸದ ಚಂದ್ರಶೇಖರ್ ಅವರಿಗೆ ಮುಜುಗರವಾದ ಪ್ರಸಂಗ ನಡೆಯಿತು. ಅರಕಲಗೂಡು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಶ್ರೀಧರ್ ಗೌಡ ಅವರು ಮಾತನಾಡಿ, ಈ ಬಾರಿ ಅರಕಲಗೂಡಿನಲ್ಲಿ ೩೦ ಸಾವಿರ ಲೀಡ್ ಕೊಡುತ್ತೇವೆ ಎಂದರು. ಅದಾದ ಬಳಿಕ ಸಚಿವ ಕೆ. ಎನ್ ರಾಜಣ್ಣ, ಶ್ರೀಧರ್ ಗೌಡರ ಮಾತನ್ನು ತನ್ನ ಭಾಷಣದಲ್ಲಿ ಉಲ್ಲೇಖಿಸಿ ಮಾತನಾಡಿ, ೩೦ ಸಾವಿರ ಲೀಡ್ ನೀಡುವವನು ಯಾಕಪ್ಪ ಮೂರನೇ ಸ್ಥಾನಕ್ಕೆ ಹೋದೆ ಎಂದು ಪ್ರಶ್ನೆ ಮಾಡಿದರು.
ಈ ವೇಳೆ ರಾಜಣ್ಣ ವಿರುದ್ಧ ಮುಗಿಬಿದ್ದ ಶ್ರೀಧರ್ ಅಭಿಮಾನಿಗಳು, ರಾಜಣ್ಣನವರ ಭಾಷಣಕ್ಕೆ ಅಡ್ಡಿಪಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅದಾದ ಬಳಿಕ ಮತ್ತೆ ಭಾಷಣ ಮುಂದುವರೆಸಿದ ರಾಜಣ್ಣ ,ಇವರ ಗದ್ದಲಕ್ಕೆ ತಾನು ತಲೆ ಕೆಡಿಕೊಳ್ಳಲ್ಲ. ಇಂತಹ ಬಾಡಿಗೆ ಗಿರಾಕಿಗಳ ಕುಗಾಟಕ್ಕೆ ನಾನೆಂದಿಗೂ ತಲೆ ಕೆಡಿಸಿಕೊಳ್ಳಲ್ಲ ಎಂದರು. ಕೆ. ಎನ್ ರಾಜಣ್ಣನವರ ಮಾತಿಗೆ ರೊಚ್ಚಿಗೆದ್ದ ಶ್ರೀಧರ್ ಗೌಡ ಬೆಂಬಲಿಗರು, ರಾಜಣ್ಣ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯಾರು ಬಾಡಿಗೆ ಗಿರಾಕಿಗಳು? ಎಷ್ಟು ಬಾಡಿಗೆ ಕೊಟ್ಟಿದ್ದೀರಿ ನಮಗೆ ಎನ್ನುತ್ತಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಗೆ ಹೊಸದಾಗಿ ಕಾಂಗ್ರೆಸ್ ಉಸ್ತುವಾರಿಯಾಗಿ ಬಂದಿರುವ ಸಂಸದ ಚಂದ್ರಶೇಖರ್ ಅವರೇ ಖುದ್ದಾಗಿ ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ನಂತರ ಸ್ವತಃ ಶ್ರೀಧರ್ ಗೌಡ ಅವರೇ ತಮ್ಮ ಬೆಂಬಲಿಗರನ್ನು ಪರಿ ಪರಿಯಾಗಿ ಬೇಡಿಕೊಂಡರೂ ಕಾರ್ಯಕರ್ತರು ಅವರ ಮಾತಿಗೂ ಬೆಲೆ ಕೊಡದೆ ಕೆ.ಎನ್ ರಾಜಣ್ಣನವರ ವಿರುದ್ಧ ಸಮಾಧಾನಗೊಂಡರು. ಈ ವೇಳೆ ಭಾಷಣ ನಿಲ್ಲಿಸಿ ಸಿಟ್ಟಿನಿಂದ ವೇದಿಕೆ ಮೇಲೆ ರಾಜಣ್ಣ ಕುಳಿತುಕೊಂಡರು.
ಎನ್‌ಡಿಆರ್‌ಎಫ್ ಹಣಕ್ಕಾಗಿ ಸುಪ್ರೀಂಗೆ ಹೋಗಿರುವುದು ರಾಜಕೀಯ ತಂತ್ರಗಾರಿಕೆ: ಬೊಮ್ಮಾಯಿ
ಬಳಿಕ ಭಾಷಣ ಅಡ್ಡಿಪಡಿಸಿದ್ದಕ್ಕೆ ಕಾರ್ಯಕರ್ತರ ಮೇಲೆ ವೇದಿಕೆಯ ಮೇಲಿದ್ದ ನಾಯಕರು ಎರಗಿದರು. ಈ ವೇಳೆ ವೇದಿಕೆ ಕೆಳಗೆ ಕೈ ಕೈ ಮಿಲಾಯಿಸಲು ಮುಂದಾದ ಕಾರ್ಯಕರ್ತರ ಗಲಾಟೆಯಿಂದ ಚುನಾವಣಾ ಉಸ್ತುವಾರಿ ಚಂದ್ರಶೇಖರ್ ಗೆ ಮುಜುಗರಕ್ಕೆ ಒಳಗಾದರು. ಕಾರ್ಯಕರ್ತರನ್ನು ನಿಯಂತ್ರಿಸಲು ಮುಖಂಡರು ಹರಸಾಹಸ ಪಟ್ಟರು. ಬಳಿಕ ಗಲಾಟೆ ಮಾಡಿದ ಕಾರ್ಯಕರ್ತರ ವಿರುದ್ಧ ಜಿಲ್ಲಾ ಮುಖಂಡರು ವಾಗ್ದಾಳಿ ನಡೆಸಿ, ಅವರನ್ನು ವೇದಿಕೆ ಬಳಿಯಿಂದ ದೂರ ಕಳಿಸಿ ಸಭೆ ಮುಂದುವರೆಸಿದರು.