Asianet Suvarna News Asianet Suvarna News

Raichur News: ಕಾಂಗ್ರೆಸ್‌, ಬಿಜೆಪಿ ಮುಖಂಡರ ನಡುವೆ ವಾಗ್ವಾದ

ಪಟ್ಟಣದ ಆರೋಗ್ಯ ಇಲಾಖೆ ಸಿಬ್ಬಂದಿ ವಸತಿ ಗೃಹ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ನವೀಕರಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ಡಿ. ವಜ್ಜಲ ಅವರು ಮಾತನಾಡುತ್ತಿರುವ ಸಂದರ್ಭದಲ್ಲಿ ಶಾಸಕ ಹೂಲಗೇರಿ ಬೆಂಬಲಿಗರು ಮತ್ತು ವಜ್ಜಲರವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಉಂಟಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಶನಿವಾರ ಜರುಗಿದೆ.

Argument between Congress and BJP leaders at raichur rav
Author
First Published Dec 25, 2022, 2:33 PM IST

ಮುದಗಲ್‌ (ಡಿ.25) : ಪಟ್ಟಣದ ಆರೋಗ್ಯ ಇಲಾಖೆ ಸಿಬ್ಬಂದಿ ವಸತಿ ಗೃಹ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ನವೀಕರಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ಡಿ. ವಜ್ಜಲ ಅವರು ಮಾತನಾಡುತ್ತಿರುವ ಸಂದರ್ಭದಲ್ಲಿ ಶಾಸಕ ಹೂಲಗೇರಿ ಬೆಂಬಲಿಗರು ಮತ್ತು ವಜ್ಜಲರವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಉಂಟಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಶನಿವಾರ ಜರುಗಿದೆ.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ನವೀಕರಣ ಹಾಗೂ ವಸತಿ ಗೃಹಗಳ ಉದ್ಘಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ಡಿ. ವಜ್ಜಲವರು ಮಾತು ಆರಂಭಿಸಿ, ಮುದಗಲ್‌ ಪಟ್ಟಣದಲ್ಲಿ 24 ಗಂಟೆ ಕುಡಿವ ನೀರಿನ ಯೋಜನೆಯ ಕಾಮಗಾರಿ ನನ್ನ ಅವಧಿಯಲ್ಲಿ ಆರಂಭವಾಗಿದ್ದು, ಇಂದಿಗೆ 7 ವರ್ಷ ಗತಿಸಿದರೂ ಕೂಡ ಪೂರ್ಣಗೊಳ್ಳುತ್ತಿಲ್ಲ. ಪಟ್ಟಣದಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆಉಲ್ಬಣಿಸುತ್ತಿರುವದು ವಿಷಾಧದ ಸಂಗತಿ. ಇದಕ್ಕೆ ನನ್ನನ್ನು ಹಿಡಿದುಕೊಂಡು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೋ? ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯೋ? ಎನ್ನುವದು ತಿಳಿಯದಾಗಿದೆ ಎಂದು ಸ್ಥಳದಲ್ಲಿದ್ದ ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನವ ಅವರಿಗೆ ಮಾಹಿತಿ ಕೇಳಿದರು. ಇದಕ್ಕೆ ಸಮರ್ಪಕವಾದ ಉತ್ತರ ಸಿಗದಿರುವುದಕ್ಕೆ ಪಟ್ಟಣದ ಜನತೆಗೆ ಕುಡಿಯುವ ನೀರು 5 ದಿನಕ್ಕೊಮ್ಮೆ ಕೊಡದಿದ್ದರೆ ಸರ್ಕಾರದ ಮಟ್ಟದಲ್ಲಿ ವರದಿ ಸಲ್ಲಿಸಿ ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ಕೈಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Assembly election: ಕಾಂಗ್ರೆಸ್‌ ಬೀದಿಜಗಳ ಕಾಂಪ್ರಮೈಸ್‌ಗೆ ದೆಹಲಿಯಲ್ಲಿ ಮೀಟಿಂಗ್: ಆರ್. ಅಶೋಕ್

ಪಟ್ಟಣದಲ್ಲಿ ಶಾಸಕರು ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿ ರಸ್ತೆ ಅಭಿವೃದ್ಧಿಗೆ ಅನುದಾನ ತಂದಿದ್ದಾರೆ. ಆದರೆ, ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ರಸ್ತೆಯನ್ನು ಹಾವಿನಂತೆ ಮಾಡಿದ್ದೀರಿ ಎಂದು ಇಲಾಖೆ ಅಧಿಕಾರಿಗಳು ಇದ್ದರೆ ಮಾಹಿತಿ ನೀಡಿ ಎಂದು ಹೇಳಿದರು. ಆಗ ಲಿಂಗಸುಗೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೂಪನಗೌಡ ಕರಡಕಲ್‌, ಪಾಮಯ್ಯ ಮುರಾರಿ, ತಮ್ಮಣ್ಣ ಗುತ್ತೇದಾರ ಸೇರಿದಂತೆ ಕಾಂಗ್ರೆಸ್‌ ನಾಯಕರು ಸರ್‌ ದಯವಿಟ್ಟು ಕಾರ್ಯಕ್ರಮ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ ಎಂದು ಮಾನಪ್ಪ ಡಿ ವಜ್ಜಲರವರಿಗೆ ಮನವಿ ಮಾಡಿಕೊಂಡರು.

ಆದರೆ ಏಕಾ ಏಕೀ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರು ಬಿಜೆಪಿ ತಾಲೂಕಾದ್ಯಕ್ಷ ವೀರನಗೌಡ ನೇತೃತ್ವದಲ್ಲಿ ವೇದಿಕೆ ಕಡೆ ಆಗಮಿಸಿ ಎರಡು ಗುಂಪುಗಳ ನಡುವೆ ಮಾತಿನ ವಾಗ್ವಾದಕ್ಕೀಡಾಯಿತು. ಎರಡೂ ಪಕ್ಷಗಳ ಬೆಂಬಲಿಗರು ಶಾಸಕ, ಹಟ್ಟಿಚಿನ್ನದಗಣಿ ಅಧ್ಯಕ್ಷರಿಗೆ ಏಕವಚನದಲ್ಲೇ ಮಾತನಾಡಿರುವುದು ಕಂಡು ಬಂದಿತು. ಆದರೆ, ಶಾಸಕ ಹೂಲಗೇರಿ ವಜ್ಜಲರವರ ಮಾತಿಗೆ ನಾನು ವಿವರಣೆ ನೀಡುತ್ತೇನೆ ಎಂದು ಮನವಿ ಮಾಡಿಕೊಂಡರೂ ಎರಡೂ ಕಡೆಯವರು ಮಾತಿಗೆ ಮಾತು ಇಳಿದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಪಕ್ಷದ ನಾಯಕರನ್ನು ಹಿಂದೆ ಸರಿಸುತ್ತಿದ್ದಂತೆ ಮಾನಪ್ಪ ವಜ್ಜಲ ತಮ್ಮ ಭಾಷಣ ಮೊಟಕುಗೊಳಿಸಿ ವೇದಿಕೆಯಿಂದ ನಿರ್ಗಮಿಸಿದರು.

Bengaluru: ಕಾಂಗ್ರೆಸ್‌ ತರಬೇತಿ ಶಿಬಿರದಲ್ಲಿ ಮಾರಾಮಾರಿ: ಮಹಿಳೆಗೆ ಗಾಯ

Follow Us:
Download App:
  • android
  • ios